
LIC ನೇಮಕಾತಿ 2022: 80 ಹುದ್ದೆಗಳಿಗೆ ಅರ್ಜಿ ಆಹ್ವಾನ
ನವದೆಹಲಿ, ಆಗಸ್ಟ್ 16: ಸರ್ಕಾರಿ ಸ್ವಾಮ್ಯದ ಜೀವ ವಿಮಾ ನಿಗಮ(ಎಲ್ಐಸಿ)ಯ ಹೌಸಿಂಗ್ ಫೈನಾನ್ಸ್ ಲಿಮಿಟೆಡ್(HFL) ಸಂಸ್ಥೆಯಲ್ಲಿ 2022ನೇ ಸಾಲಿನ ನೇಮಕಾತಿ ನಡೆಸಲಾಗುತ್ತಿದೆ. ಸುಮಾರು 80 ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಆಯ್ಕೆಯಾಗಲು ಬಯಸುವ ಅರ್ಹ, ಆಸಕ್ತ ಆಭ್ಯರ್ಥಿಗಳು ಆಗಸ್ಟ್ 25ರೊಳಗೆ ಅರ್ಜಿ ಸಲ್ಲಿಸಬಹುದು.
ಸಂಸ್ಥೆ ಹೆಸರು: LIC Housing Finance Limited
ಹುದ್ದೆ ಹೆಸರು: Asst & Asst Manager
ಒಟ್ಟು ಹುದ್ದೆ: 80
ಸಹಾಯಕ: 50 ಹುದ್ದೆ
ಸಹಾಯಕ ವ್ಯವಸ್ಥಾಪಕ: 30 ಹುದ್ದೆ
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಆಗಸ್ಟ್ 25, 2022
ಸಂಬಳ ವಿವರ:
ಸಹಾಯಕ: 22,730 ರು ನಿಂದ 52475 ರು ಪ್ರತಿ ತಿಂಗಳು
ಸಹಾಯಕ ಮ್ಯಾನೇಜರ್: 53,620 ರು ನಿಂದ 101040 ರು ಪ್ರತಿ ತಿಂಗಳು
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ. ಕಂಪ್ಯೂಟರ್ ಕೌಶಲ್ಯದ ಅಗತ್ಯವಿದೆ.
ವಯೋಮಿತಿ: 21 ರಿಂದ 28 ವರ್ಷ(ಅಧಿಸೂಚನೆಯಂತೆ). ನಿಯಮದ ಪ್ರಕಾರ ವಯೋಮಿತಿಯಲ್ಲಿ ವಿನಾಯಿತಿ ಸಿಗಲಿದೆ.
ಸಹಾಯಕ ಮ್ಯಾನೇಜರ್: 21 ರಿಂದ 40 ವರ್ಷ
ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ, ವೈಯಕ್ತಿಕ ಸಂದರ್ಶನ
SSC ನೇಮಕಾತಿ 2020: 4300 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಜಿ ಶುಲ್ಕ:
ಸಾಮಾನ್ಯ/ಒಬಿಸಿ/ಹಿಂದುಳಿದ ವರ್ಗ: 800 ರು
ಶುಲ್ಕಪಾವತಿ ವಿಧಾನ: ಡೆಬಿಟ್ ಕಾರ್ಡ್ಸ್ (ರುಪೇ/ವೀಸಾ/ಮಾಸ್ಟರ್ ಕಾರ್ಡ್/ ಮ್ಯಾಸ್ಟ್ರೋ) ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್ಸ್/ ಮೊಬೈಲ್ ವ್ಯಾಲೆಟ್ ಮೂಲಕ ಪಾವತಿಸಬಹುದು.
ಪ್ರಮುಖ ದಿನಾಂಕ:
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಆರಂಭ: 04.08.2022
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 25-08-2022
ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಆನ್ ಲೈನ್ ಪರೀಕ್ಷೆ ನಡೆಸಬಹುದು. ಕರ್ನಾಟಕದಲ್ಲಿ ಬೆಂಗಳೂರು ಹಾಗೂ ಮೈಸೂರು ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.
LIC HFL's ವೆಬ್ ತಾಣ (www.lichousing.com) ದಲ್ಲಿ "Careers" ಕ್ಲಿಕ್ ಮಾಡಿ Job Opportunities" ಪುಟಕ್ಕೆ ಹೋಗಿ ಸಂಬಂಧಪಟ್ಟ ಹುದ್ದೆಗೆ ಅರ್ಜಿ ಸಲ್ಲಿಸಿ. ಒಬ್ಬ ಅಭ್ಯರ್ಥಿ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕೂ ಮುನ್ನ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ಮುಂತಾದ ವಿವರ ನೀಡಿ ನೋಂದಾಯಿಸಿಕೊಳ್ಳಿ
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ