726 ಹುದ್ದೆಗಳನ್ನು ಭರ್ತಿ ಮಾಡಲು ಆರ್ಜಿ ಆಹ್ವಾನಿಸಿದ ಕೆಎಸ್ಆರ್‌ಟಿಸಿ
ಬೆಂಗಳೂರು, ಮಾರ್ಚ್ 26 : ಕೆಎಸ್ಆರ್‌ಟಿಸಿ 726 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 28ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ 726 Technical Assistant ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ವೇತನ ಶ್ರೇಣಿ 11640 ರಿಂದ 15700 ರೂ.ಗಳಾಗಿವೆ. ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಐಟಿಸಿ/ಐಟಿಐ/ಎನ್‌ಎಸಿ ಇನ್ ಮೆಕಾನಿಕ್ (ಮೋಟಾರ್ ವೆಹಿಕಲ್)/ಡಿಸೇಲ್ ಮೆಕಾನಿಕ್/ಆಟೋ ಎಲೆಕ್ಟ್ರಿಷಿಯನ್/ವೆಲ್ಡರ್/ಶೀಟ್ ಮೆಟಲ್ ವರ್ಕರ್/ಎಲೆಕ್ಟ್ರಾನಿಕ್ ಮೆಕಾನಿಕ್/ಡ್ರಾಫ್ಟ್ ಮೆನ್/ಫಿಟ್ಟರ್/ಮೆಕಾನಿಷ್ಟ್/ಟೈರ್ ಫಿಟ್ಟಿಂಗ್/ವಾಲ್ಕನೈಸಿಂಗ್/ಪೈಟಿಂಗ್/ಟರ್ನರ್/ಆಟೋಮೊಬೈಲ್/ಫ್ಯಾಬ್ರಿಕೇಷನ್ ನಲ್ಲಿ ಮಾನ್ಯತೆ ಪಡೆದ ಸಂಸ್ಥೆಯಿಂದ ಉತ್ತೀರ್ಣರಾಗಿರಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 35 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. 25/4/2018ಕ್ಕೆ ಅನ್ವಯವಾಗುವಂತೆ.
ಪ್ರಮುಖ ಅಂಶಗಳು
* ಕೆಎಸ್ಆರ್‌ಟಿಸಿಯಲ್ಲಿ ಉದ್ಯೋಗ
* 726 ಹುದ್ದೆ
* ಕರ್ನಾಟಕ : ಉದ್ಯೋಗದ ಸ್ಥಳ
* ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 25/04/2018
ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications