KSRLPS Recruitment 2023: ಈ ಜಿಲ್ಲೆಯಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿ, ಆಯ್ಕೆ ವಿವರ
ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಮೋಷನ್ ಸೊಸೈಟಿ (KSRLPS) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಈ ನಿಮಿತ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 5ರ ತನಕ ಅರ್ಜಿಸಲ್ಲಿಸಬಹುದಾಗಿದೆ. ರಾಜ್ಯ ಸರ್ಕಾರ ಹುದ್ದೆ ಇದಾಗಿದ್ದು, ಕೊನೆ ದಿನಾಂಕದವರೆಗೆ ಕಾಯದೇ ಈ ಕೂಡಲೇ ಅರ್ಜಿ ಹಾಕುವಂತೆ ತಿಳಿಸಲಾಗಿದೆ.
ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಮೋಷನ್ ಸೊಸೈಟಿ (KSRLPS) ಯಲ್ಲಿ ಒಟ್ಟು 12 ಆಫೀಸ್ ಅಸಿಸ್ಟೆಂಟ್, ತಾಲೂಕ್ ಪ್ರೋಗ್ರಾಮ್ ಮ್ಯಾನೇಜರ್ ಹುದ್ದೆಗಳು ಖಾಲಿ ಇವೆ. ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಬೇಕಿದ್ದು, ಆಯ್ಕೆ ಆಗುವವರಿಗೆ ಕೊಡಗಿನಲ್ಲಿ ಪೋಸ್ಟಿಂಗ್ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಅರ್ಜಿ ಸಲ್ಲಿಕೆಯ ಮೊದಲು ಹುದ್ದೆಗೆ ಸಂಬಂಧಿಸಿದ ವಿದ್ಯಾರ್ಹತೆ, ಮಾಸಿಕ ವೇತನ, ಅರ್ಜಿ ಶುಲ್ಕ ಸೇರಿದಂತೆ ನೇಮಕಾತಿಯ ಪೂರ್ಣ ಮಾಹಿತಿ ತಿಳಿಯಿರಿ.
ನೇಮಕಾತಿ ಪೂರ್ಣ ಮಾಹಿತಿ
ಬ್ಲಾಕ್ ಮ್ಯಾನೇಜರ್- ಫಾರ್ಮ್ ಲೈವ್ಲಿಹುಡ್ಸ್-3
ಬ್ಲಾಕ್ ಮ್ಯಾನೇಜರ್- ನಾನ್ ಫಾರ್ಮ್ ಲೈವ್ಲಿ ಹುಡ್ಸ್-3
ಕ್ಲಸ್ಟರ್ ಸೂಪರ್ವೈಸರ್- ಸ್ಕಿಲ್- 3
ಡಿಸ್ಟ್ರಿಕ್ಟ್ ಮ್ಯಾನೇಜರ್- ಲೈವ್ಲಿವುಡ್-1
ಆಫೀಸ್ ಅಸಿಸ್ಟೆಂಟ್ -1
ತಾಲೂಕ್ ಪ್ರೋಗ್ರಾಮ್ ಮ್ಯಾನೇಜರ್-1 ಹುದ್ದೆಗಳು ಖಾಲಿ ಇವೆ.
ಶೈಕ್ಷಣಿಕ ಅರ್ಹತೆ
ಡಿಸ್ಟ್ರಿಕ್ಟ್ ಮ್ಯಾನೇಜರ್ ಮತ್ತು ಬ್ಲಾಕ್ ಮ್ಯಾನೇಜರ್- ಫಾರ್ಮ್ ಲೈವ್ಲಿಹುಡ್ಸ್ ಹುದ್ದೆಗಳಿಗೆ ಬಿ.ಎಸ್ಸಿ, ಎಂ.ಎಸ್ಸಿ, ಸ್ನಾತಕೋತ್ತರ ಪದವಿ, ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಪದವಿ, ತಾಲೂಕು ಪ್ರೋಗ್ರಾಮ್ ಮ್ಯಾನೇಜರ್ ಹುದ್ದೆಗೆ ಸ್ನಾತಕೋತ್ತರ ಪದವಿ, ಬ್ಲಾಕ್ ಮ್ಯಾನೇಜರ್-ನಾನ್ ಫಾರ್ಮ್ ಲೈವ್ಲಿ ಹುಡ್ಸ್ ಹುದ್ದೆಗಳಿಗೆ ಸ್ನಾತಕೋತ್ತರ ಪದವಿ ಹಾಗೂ ಕ್ಲಸ್ಟರ್ ಸೂಪರ್ವೈಸರ್ ಸ್ಕಿಲ್ ಹುದ್ದೆಗೆ ಪದವಿ ಆಗಿರಬೇಕು ಎಂದು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ವಯಸ್ಸಿನ ಮಿತಿ
ಅಭ್ಯರ್ಥಿಗಳ ವಯಸ್ಸು ನಿಯಮಾನುಸಾರ ಇರಬೇಕು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೂರಲ್ ಲೈವ್ಲಿಹುಡ್ ಪ್ರಮೋಷನ್ ಸೊಸೈಟಿ ನೇಮಕಾತಿ ಮಾಹಿತಿ ನೀಡಿದೆ.
ಆಯ್ಕೆ ಪ್ರಕ್ರಿಯೆ ಹೇಗೆ
ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಸಲಾಗುವುದು. ಇಲ್ಲಿ ಆಯ್ಕೆ ಆಗುವವರಿಗೆ ನಂತರ ನೇರ ಸಂದರ್ಶನ ಇರಲಿದೆ. ಅರ್ಜಿ ಸಲ್ಲಿಕೆಗೆ ಯಾವುದೇ ಅರ್ಜಿ ಶುಲ್ಕ ನಿಗದಿಪಡಿಸಲಾಗಿಲ್ಲ. ಆಯ್ಕೆ ಆಗುವವರಿಗೆ ಕೊಡಗಿನಲ್ಲಿ ಪೋಸ್ಟಿಂಗ್ ನೀಡಲಾಗುವುದು. ಸದ್ಯ ಮಾಸಿಕ ವೇತನ ಎಷ್ಟೆಂದು ನಿಗದಿಪಡಿಸಿಲ್ಲ. ನಿಯಮಾನುಸಾರ ವೇತನ ಇರಲಿದೆ ಇಲಾಖೆ ತಿಳಿಸಿದೆ.
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ https://jobsksrlps.karnataka.gov.in/. ವೆಬ್‌ಸೈಟ್‌ಗೆ ಭೇಟಿ ನೀಡಬೇಕಿದೆ. ಮುಂದಿನ ತಿಂಗಳ ಡಿಸೆಂಬರ್ 5ರೊಳಗೆ ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದೆ.












Click it and Unblock the Notifications