ಪಿಯು ಪಾಸಾದವರಿಗೆ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿವೆ
ಬೆಂಗಳೂರು, ಜೂನ್ 12: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ 2019ನೇ ಸಾಲಿನ ನೇಮಕಾತಿ ಕುರಿತಂತೆ ತನ್ನ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 163 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಿವಿಎಲ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಜಿದಾರರು ತಮ್ಮ ಅರ್ಜಿಯನ್ನು ಜೂನ್ 29ರೊಳಗೆ ಸಲ್ಲಿಸಬಹುದು.
ಸಂಸ್ಥೆ ಹೆಸರು: ಕರ್ನಾಟಕ ರಾಜ್ಯ ಪೊಲೀಸ್
ಹುದ್ದೆ ಹೆಸರು: ಸಿವಿಎಲ್ ಪೊಲೀಸ್ ಕಾನ್ಸ್ ಟೇಬಲ್
ಒಟ್ಟು ಹುದ್ದೆ : 163
ಉದ್ಯೋಗ ಸ್ಥಳ : ಕರ್ನಾಟಕ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 29.06.2019
ವಿದ್ಯಾರ್ಹತೆ : ಪಿಯುಸಿ (ರಾಜ್ಯ ಬೋರ್ಡ್, ಸಿಬಿಎಸ್ ಇ, ಐಸಿಎಸ್ ಇ, ಎಸ್ಎಸ್ ಇ) ಅಥವಾ ತತ್ಸಮಾನ ಅರ್ಹತೆ.
ವಯೋಮಿತಿ:
ಸಾಮಾನ್ಯ ಅಭ್ಯರ್ಥಿ: 19 ರಿಂದ 25 ವರ್ಷ
ಎಸ್ ಸಿ/ ಎಸ್ಟಿ/ ಕೆಟಗೆರಿ 01, 2ಎ, 3ಎ, 3ಬಿ : 19 ರಿಂದ 27 ವರ್ಷ
ಬುಡಕಟ್ಟು ಜನಾಂಗ: 19 ರಿಂದ 30 ವರ್ಷ

ಸಂಬಳ ನಿರೀಕ್ಷೆ: 21400 ರಿಂದ 42000 ರು ಪ್ರತಿ ತಿಂಗಳಿಗೆ
ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ವೈಯಕ್ತಿಕ ಸಂದರ್ಶನ.
ಅರ್ಜಿ ಶುಲ್ಕ:
ಸಾಮಾನ್ಯ/ ಒಬಿಸಿ (2ಎ, 2ಬಿ, 3ಎ, 3 ಬಿ): 250 ರು
ಎಸ್ ಸಿ/ ಎಸ್ಟಿ/ ಕೆಟಗೆರಿ-1/ಬುಡಕಟ್ಟು: 100 ರು
ಪ್ರಮುಖ ದಿನಾಂಕಗಳು:
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನ: 10.06.2019
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 29.06.2019
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications