ಕರ್ನಾಟಕ ಪೊಲೀಸ್ ನೇಮಕಾತಿ; 1028 ಕಾನ್ಸ್‌ಟೇಬಲ್ ಹುದ್ದೆ

ಬೆಂಗಳೂರು, ಸೆಪ್ಟೆಂಬರ್ 26 : ಕರ್ನಾಟಕ ಪೊಲೀಸ್ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು 17/10/2019 ಕೊನೆಯ ದಿನವಾಗಿದೆ.

ಒಟ್ಟು 1028 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಯ್ಕೆಯಾದವರು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಬೇಕಿದೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ.
ವೇತನ 21400-42000 ರೂ. ಪ್ರತಿ ತಿಂಗಳು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ-ಸಿಬಿಎಸ್‌ಇ, ಎಸ್‌ಎಸ್‌ಎಲ್‌ಸಿ-ಐಸಿಎಸ್‌ಇ, ಎಸ್ಎಸ್‌ಎಲ್‌ಸಿ-ಎಸ್‌ಎಸ್‌ಸಿ, ಎಸ್‌ಎಸ್‌ಎಲ್‌ಸಿ, ರಾಜ್ಯ ಬೋರ್ಡ್, ಎಸ್‌ಎಸ್‌ಎಲ್‌ಸಿ-ತತ್ಸಮಾನ, ಎಸ್‌ಎಸ್‌ಎಲ್‌ಸಿ-ಕೆಓಎಸ್, ಎಸ್‌ಎಸ್‌ಎಲ್‌ಸಿ-ಎನ್‌ಓಐಎಸ್ ವ್ಯಾಸಂಗ ಮಾಡಿರಬೇಕು.

KSP Recruitment 2019 Apply For 1028 Armed Police Constable

ಅರ್ಜಿಗಳನ್ನು ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 25 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಎಸ್‌ಸಿ/ಎಸ್‌ಟಿ/ಪ್ರವರ್ಗ-1/2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 18 ರಿಂದ 27 ವರ್ಷ. ಬುಡಕಟ್ಟು ಅಭ್ಯರ್ಥಿಗಳಿಗೆ 18 ರಿಂದ 30 ವರ್ಷಗಳು.

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಸಾಮಾನ್ಯ ವರ್ಗ/2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 250 ರೂ., ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 100 ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ.

ಆಸಕ್ತ ಅಭ್ಯರ್ಥಿಗಳು 23/9/2019 ರಿಂದ 17/10/2019ರ ತನಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+