KSFC Recruitment 2023: ಸರ್ಕಾರಿ ಉದ್ಯೋಗ, 1.25 ಲಕ್ಷ ಸಂಬಳ, ಕರ್ನಾಟಕದಲ್ಲಿ ಪೋಸ್ಟಿಂಗ್, ಅರ್ಜಿ ಹಾಕಿ

ಬೆಂಗಳೂರು, ಆಗಸ್ಟ್ 07: ಕರ್ನಾಟಕ ರಾಜ್ಯ ಹಣಕಾಸು ನಿಗಮವು (KSFC) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಈ ಕೂಡಲೇ ಆಸಕ್ತು ಅರ್ಜಿ ಸಲ್ಲಿಸುವಂತೆ ನಿಗಮವು ತಿಳಿಸಿದೆ.

ಕರ್ನಾಟಕ ರಾಜ್ಯ ಹಣಕಾಸು ನಿಗಮವು (KSFC) ತನ್ನಲ್ಲಿನ ಕಾರ್ಯನಿರ್ವಾಹಕ ನಿರ್ದೇಶಕರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಆಗಸ್ಟ್ 19ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ನಿಗಮ ಅಧಿಸೂಚನೆಯಲ್ಲಿ ತಿಳಿಸಿದೆ

ksfc-recruitment-2023

ಅರ್ಜಿ ಸಲ್ಲಿಕೆಗೂ ಮುನ್ನ ಖಾಲಿ ಹುದ್ದೆಗಳ ಮಾಹಿತಿ, ವಯೋಮಿತಿ, ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಕುರಿತು ಇಲ್ಲಿ ತಿಳಿಯಿರಿ.

ನೇಮಕಾತಿ ಪೂರ್ಣ ವಿವರ

ಸಂಸ್ಥೆ - ಕರ್ನಾಟಕ ರಾಜ್ಯ ಹಣಕಾಸು ನಿಗಮ (ಕೆಎಸ್‌ಎಫ್‌ಸಿ)

ಒಟ್ಟು ಹುದ್ದೆಗಳು - 2

ಹುದ್ದೆ ಹೆಸರು - ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆ

ಮಾಸಿಕ ವೇತನ - 12,5000 ರೂಪಾಯಿ

ಉದ್ಯೋಗ ಸ್ಥಳ - ಕರ್ನಾಟಕ

ಶೈಕ್ಷಣಿಕ ಅರ್ಹತೆ

ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು CAIIB, CFA, ACS, ಪದವಿ , ಸ್ನಾತಕೋತ್ತರ ಪದವಿ, MBA, Ph.D ಪದವಿ ಪಡೆದಿರಬೇಕು ಎಂದು ಕರ್ನಾಟಕ ರಾಜ್ಯ ಹಣಕಾಸು ನಿಗಮದ ನೇಮಕಾತಿ ಅಧಿಸೂಚನೆ ತಿಳಿಸಿದೆ.

ksfc-recruitment-2023

ವಯಸ್ಸಿನ ಮಿತಿ ಮತ್ತು ಆಯ್ಕೆ ಹೇಗೆ?

ಕರ್ನಾಟಕ ರಾಜ್ಯ ಹಣಕಾಸು ನಿಗಮದ (KSFC) ನೇಮಕಾತಿ ಅಧಿಸೂಚನೆಯ ಅನ್ವಯ ಅಭ್ಯರ್ಥಿಗಳಿಗೆ ಕನಿಷ್ಠ 55 ವರ್ಷಗಳಿಂದ ಗರಿಷ್ಠ 63 ವರ್ಷದ ಒಳಗಿರಬೇಕು ಎಂದು ವಯೋಮಿತಿ ನಿಗದಿ ಮಾಡಿದೆ.

ಇನ್ನೂ ಅಭ್ಯರ್ಥಿಗಳ ಅರ್ಹತೆ, ಅನುಭವ, ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನದ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಮಾಸಿಕ 1,25,000 ರೂ. ವೇತನ

ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 1,25,000 ರೂಪಾಯಿ ವೇತನ ನೀಡಲಾಗುವುದು. ಆದ್ದರಿಂದ ಸರ್ಕಾರಿ ವ್ಯಾಪ್ತಿಯಲ್ಲಿನ ಇಂತಹ ಉದ್ಯೋಗ ಅವಕಾಶ ಪಡೆಯಲು ಆಗಸ್ಟ್ 19ರೊಳಗೆ ವ್ಯವಸ್ಥಾಪಕ ನಿರ್ದೇಶಕರು, ನಂ.1/1, ಕೆಎಸ್‌ಎಫ್‌ಸಿ ಭವನ, ಪ್ರಧಾನ ಕಚೇರಿ, ತಿಮ್ಮಯ್ಯ ರಸ್ತೆ, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಹತ್ತಿರ, ಬೆಂಗಳೂರು-560052 ಇಲ್ಲಿಗೆ ಅರ್ಜಿ ಸಲ್ಲಿಸಬೇಕು ಎಂದು ಅಧಿಸೂಚನೆ ತಿಳಿಸಿದೆ.

ಅರ್ಜಿ ಪಡೆಯುವುದು ಸೇರಿದಂತೆ ನೇಮಕಾತಿ ಕುರಿತು ಹೆಚ್ಚಿನ ಮಾಹಿತಿಗೆ ಈ ಅಧಿಕೃತ ವೆಬ್‌ಸೈಟ್ https://ksfc.karnataka.gov.in/ ಇಲ್ಲಿಗೆ ಭೇಟಿ ನೀಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+