ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೇಮಕಾತಿ; 1492 ಹುದ್ದೆಗಳು

ಬೆಂಗಳೂರು, ಜನವರಿ 25; ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆವಿಪ್ರನಿನಿ) ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಈ ಕೆಳಕಂಡ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಒಟ್ಟು 1492 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು.

ನಿರ್ದೇಶಕರು (ಆಡಳಿತ ಮತ್ತು ಮಾನವ ಸಂಪನ್ಮೂಲ) ಕವಿಪ್ರನಿನಿ, ಕಾವೇರಿ ಭವನ ಬೆಂಗಳೂರು ಈ ಕುರಿತು ಜಾಹೀರಾತು ನೀಡಿದ್ದಾರೆ. ಕಲ್ಯಾಣ ಕರ್ನಾಟಕ ಮೀಸಲಾತಿ, ಹುದ್ದೆಗಳ ವರ್ಗೀಕರಣ, ಅರ್ಹತೆ ಮುಂತಾದ ವಿವರಗಳು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.

ಸಹಾಯಕ ಇಂಜಿನಿಯರ್ (ವಿದ್ಯುತ್) 505, ಸಹಾಯಕ ಇಂಜಿನಿಯರ್ (ಸಿವಿಲ್) 28, ಕಿರಿಯ ಇಂಜಿನಿಯರ್ (ವಿದ್ಯುತ್) 570, ಕಿರಿಯ ಇಂಜಿನಿಯರ್ (ಸಿವಿಲ್) 29, ಕಿರಿಯ ಸಹಾಯಕ 360 ಹುದ್ದೆಗಳಿವೆ ಎಂದು ಜಾಹೀರಾತಿನಲ್ಲಿ ಮಾಹಿತಿ ನೀಡಲಾಗಿದೆ.

ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳಿಗೆ 18 ರಿಂದ 35 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಹುದ್ದೆಗಳಿಗೆ ತಕ್ಕಂತೆ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ.

ಹುದ್ದೆಗಳ ವಿವರ

ಹುದ್ದೆಗಳ ವಿವರ

ಸಹಾಯಕ ಇಂಜಿನಿಯರ್ (ವಿದ್ಯುತ್). ಸಾಮಾನ್ಯ 393, ಬ್ಯಾಕ್‌ಲಾಗ್ 6 ಹುದ್ದೆಗಳು. ಕಲ್ಯಾಣ ಕರ್ನಾಟಕ ಸಾಮಾನ್ಯ 106, ಬ್ಯಾಕ್‌ಲಾಗ್ 0 ಒಟ್ಟು 505 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಸಹಾಯಕ ಇಂಜಿನಿಯರ್ (ಸಿವಿಲ್). ಸಾಮಾನ್ಯ 21, ಬ್ಯಾಕ್‌ಲಾಗ್ 0 ಹುದ್ದೆಗಳು. ಕಲ್ಯಾಣ ಕರ್ನಾಟಕ ಸಾಮಾನ್ಯ 07, ಬ್ಯಾಕ್‌ಲಾಗ್ 0 ಒಟ್ಟು 28 ಹುದ್ದೆಗಳಿವೆ.

ಕಿರಿಯ ಇಂಜಿನಿಯರ್ (ವಿದ್ಯುತ್)

ಕಿರಿಯ ಇಂಜಿನಿಯರ್ (ವಿದ್ಯುತ್)

ಕಿರಿಯ ಇಂಜಿನಿಯರ್ (ವಿದ್ಯುತ್) ಸಾಮಾನ್ಯ 477, ಬ್ಯಾಕ್‌ಲಾಗ್ 9 ಹುದ್ದೆಗಳಿವೆ. ಕಲ್ಯಾಣ ಕರ್ನಾಟಕ ಸಾಮಾನ್ಯ 82, ಬ್ಯಾಕ್‌ಲಾಗ್ 2 ಒಟ್ಟು 570 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಕಿರಿಯ ಇಂಜಿನಿಯರ್ (ಸಿವಿಲ್) ಹುದ್ದೆಗಳು. ಸಾಮಾನ್ಯ 21, ಬ್ಯಾಕ್‌ಲಾಗ್ 0 ಹುದ್ದೆಗಳು. ಕಲ್ಯಾಣ ಕರ್ನಾಟಕ ಸಾಮಾನ್ಯ 8, ಬ್ಯಾಕ್‌ಲಾಗ್ 0 ಒಟ್ಟು 29 ಹುದ್ದೆಗಳಿವೆ.

ಕಿರಿಯ ಸಹಾಯಕ

ಕಿರಿಯ ಸಹಾಯಕ

ಕಿರಿಯ ಸಹಾಯಕ 360 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಸಾಮಾನ್ಯ 357, ಬ್ಯಾಕ್‌ಲಾಗ್ 0 ಹುದ್ದೆಗಳು. ಕಲ್ಯಾಣ ಕರ್ನಾಟಕ ಸಾಮಾನ್ಯ 3, ಬ್ಯಾಕ್‌ಲಾಗ್ 0 ಒಟ್ಟು 360 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆಯಲಾಗಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ ಎಂದು ನೇಮಕಾತಿ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

Recommended Video

    Virat Kohli ಮಗಳನ್ನ ಯಾರೂ ನೋಡ್ಬೇಡಿ ಶೇರ್ ಮಾಡ್ಬೇಡಿ!!ಯಾಕ್ ಗೊತ್ತಾ? | Oneindia Kannada
    ಮಾಹಿತಿಗಾಗಿ ವೆಬ್‌ಸೈಟ್ ವಿವರ

    ಮಾಹಿತಿಗಾಗಿ ವೆಬ್‌ಸೈಟ್ ವಿವರ

    ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆವಿಪ್ರನಿನಿ) ಅಧಿಕೃತ ವೆಬ್‌ಸೈಟ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕಿದೆ. ಹುದ್ದೆಗಳ ವರ್ಗೀಕರಣ, ಮೀಸಲಾತಿ ವಿವರ, ಕಲ್ಯಾಣ ಕರ್ನಾಟಕ ಪ್ರದೇಶ ಮೀಸಲಾತಿ, ವಯೋಮಿತಿ, ಅರ್ಹತೆ ಮುಂತಾದ ವಿವರಗಳನ್ನು ದಿನಾಂಕ 7/2/2022ರ ನಂತರ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ವೆಬ್‌ಸೈಟ್‌ ವಿವರ http://kptcl.karnataka.gov.in

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+