ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುದುರೆಮುಖ ಅದಿರು ಸಂಸ್ಥೆಯಲ್ಲಿ ಇಂಜಿನಿಯರ್‌ಗಳಿಗೆ ಹುದ್ದೆಗಳಿವೆ

|
Google Oneindia Kannada News

ಬೆಂಗಳೂರು, ಆಗಸ್ಟ್ 25: ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ (KIOCL) 2022ನೇ ಸಾಲಿನ ನೇಮಕಾತಿ ಆರಂಭಿಸಿದೆ. ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ.

ಇಂಜಿಯರಿಂಗ್ ಪದವೀಧರರಿಗೆ ಹುದ್ದೆಗಳಿದ್ದು, ಅರ್ಜಿ ಆಹ್ವಾನಿಸಲಾಗಿದೆ.. ಈ ಕುರಿತಂತೆ ತನ್ನ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಸೆಪ್ಟಂಬರ್ 24, 2022ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ ಹೆಸರು: ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ (ಕೆಐಒಸಿಎಲ್)
ಒಟ್ಟು ಹುದ್ದೆಗಳು: 35
ಹೆಸರು: ಇಂಜಿನಿಯರ್ ಪದವೀಧರ ಟ್ರೈನಿ(GET)
ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಸೆಪ್ಟಂಬರ್ 24, 2022.

ಐಐಐಟಿ ಬೆಂಗಳೂರು ನೇಮಕಾತಿ 2022: ಸಿಸ್ಟಮ್ ಇಂಜಿನಿಯರ್ ಹುದ್ದೆಗಳಿವೆಐಐಐಟಿ ಬೆಂಗಳೂರು ನೇಮಕಾತಿ 2022: ಸಿಸ್ಟಮ್ ಇಂಜಿನಿಯರ್ ಹುದ್ದೆಗಳಿವೆ

ಹುದ್ದೆ ಹೆಸರು -ಹುದ್ದೆಗಳ ಸಂಖ್ಯೆ
ಮೆಕ್ಯಾನಿಕಲ್-11
ಮೆಟಲರ್ಜಿ-3
ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್-4
ಇನ್ಸ್ಟ್ರೂಮೆಂಟೇಷನ್ ಅಂಡ್ ಕಂಟ್ರೋಲ್/ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್- 4
ಸಿವಿಎಲ್-2
ಮೈನಿಂಗ್-2
ಕಂಪ್ಯೂಟರ್ ಸೈನ್ಸ್-2

KIOCL Recruitment 2022 apply for 35 Engineers Posts

ವಿದ್ಯಾರ್ಹತೆ: ಅರ್ಜಿದಾರರು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಪಟ್ಟ ಇಂಜಿನಿಯರಿಂಗ್ ಕೋರ್ಸ್ ನಲ್ಲಿ ಪದವಿ ಪಡೆದಿರಬೇಕು. ಅಥವಾ ಬಿ.ಟೆಕ್, ಎಂಟೆಕ್ ಪದವಿ.

ಸಂಬಳ ವಿವರ: 30,000 ರಿಂದ 1,20,000/-ರು ಪ್ರತಿ ತಿಂಗಳು.

ವಯೋಮಿತಿ: ಗರಿಷ್ಠ ವಯಸ್ಸು 35 ವರ್ಷ ನಿಯಮಕ್ಕೆ ಅನುಸಾರವಾಗಿ ವಿನಾಯಿತಿ ಸಿಗಲಿದೆ. ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 03 ವರ್ಷ ಹಾಗೂ ಎಸ್ ಸಿ ಹಾಗೂ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ತನಕ ವಿನಾಯಿತಿ ಇರುತ್ತದೆ.

ಅರ್ಜಿ ಶುಲ್ಕ: ಯಾವುದೇ ಶುಲ್ಕವಿಲ್ಲ

ನೇಮಕಾತಿ ಪ್ರಕ್ರಿಯೆ: ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ಆಯ್ಕೆ

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 02/09/2022.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 24/09/2022

ಅರ್ಜಿ ಸಲ್ಲಿಕೆ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

ಕೆಐಒಸಿಎಲ್‌: ಪಶ್ಚಿಮ ಘಟ್ಟದ ​​ವ್ಯಾಪ್ತಿಯಲ್ಲಿ ಬರುವ ಕುದುರೆಮುಖದಲ್ಲಿ ಅದಿರಿನ ಗಣಿಗಾರಿಕೆ ನಡೆಯುತ್ತಿತು. ಗಣಿಗಾರಿಕೆ ಅದಿರನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಮೂಲಕ 110 ಕಿಮೀ ಕೊಳವೆ ಮಾರ್ಗದ ಮೂಲಕ ಹೊಸ ಮಂಗಳೂರು ಪಕ್ಕದಲ್ಲಿರುವ ಪಣಂಬೂರು ಬಂದರಿಗೆ ಸಾಗಿಸಲಾಗುತ್ತಿತು.

ದೇಶದಲ್ಲಿ ಅತಿಹೆಚ್ಚು ಉದ್ಯೋಗ ನೀಡುವ ಮಹಾನಗರವೇ ನಮ್ಮ ಬೆಂಗಳೂರು!ದೇಶದಲ್ಲಿ ಅತಿಹೆಚ್ಚು ಉದ್ಯೋಗ ನೀಡುವ ಮಹಾನಗರವೇ ನಮ್ಮ ಬೆಂಗಳೂರು!

ಗಣಿಗಾರಿಕೆ ಗುತ್ತಿಗೆಯನ್ನು 25 ವರ್ಷಗಳ ಕಾಲ ಕೆಐಒಸಿಎಲ್‌ಗೆ ನೀಡಲಾಯಿತು ಮತ್ತು ಅದನ್ನು ಡಿಸೆಂಬರ್ 2001 ರೊಳಗೆ ಮುಚ್ಚಬೇಕಾಯಿತು. ಬಳ್ಳಾರಿಯಲ್ಲಿ ಗಣಿಗಾರಿಕೆ ಮಾಡಲು ಕರ್ನಾಟಕ ಸರ್ಕಾರ 2017ರಲ್ಲಿ ಅನುಮತಿ ನೀಡಿದೆ. ಬಳ್ಳಾರಿಯ ದೇವಾದ್ರಿ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ಸಿಕ್ಕಿದೆ. ಡಿಸೆಂಬರ್ 2005ರ ನಂತರ ಮತ್ತೊಮ್ಮೆ ಗಣಿಗಾರಿಕೆಯತ್ತ ಕೆಐಒಸಿಎಲ್ ಮುಖ ಮಾಡಿತ್ತು.

ಕೋವಿಡ್ 19 ಮಾರ್ಗಸೂಚಿ: ಅಂತರ್ ಜಿಲ್ಲಾ ಅಭ್ಯರ್ಥಿಗಳು ಸರ್ಕಾರ ವಿಧಿಸಿರುವ ಕೋವಿಡ್ 19 ಮಾರ್ಗಸೂಚಿ ಅನ್ವಯ ಪರೀಕ್ಷೆ/ ಪ್ರಮಾಣ ಪತ್ರ ಹೊಂದಿರಬೇಕು. ನೆಗಡಿ, ಕೆಮ್ಮು, ಜ್ವರ ಮುಂತಾದ ಸಮಸ್ಯೆ ಎದುರಾಗಿದ್ದರೆ ಸಂದರ್ಶನ ತೆಗೆದುಕೊಳ್ಳುವಂತಿಲ್ಲ. ಮಾಸ್ಕ್ ಹಾಗೂ ಸಾಮಾಜಿಕ ಅಂತರ ಮಾರ್ಗಸೂಚಿಯನ್ನು ಪಾಲಿಸತಕ್ಕದ್ದು.

ಭರ್ತಿ ಮಾಡಿದ ಆರ್ಜಿಯ ಜೊತೆಗೆ ಅಗತ್ಯವಿರುವ ಕಡೆ ಇತ್ತೀಚಿನ ಭಾವಚಿತ್ರ, ವಿದ್ಯಾರ್ಹತೆಯ ಅಂಕಪಟ್ಟಿ, ಅನುಭವ ಪ್ರಮಾಣ ಪತ್ರ, ವೇತನ ಪತ್ರ, ಆಧಾರ್ ಮುಂತಾದ ಗುರುತಿನ ಚೀಟಿ ಲಗತ್ತಿಸತಕ್ಕದ್ದು.

English summary
KIOCL Recruitment 2022 notification has been released on official website for the recruitment of 35 Graduate vacancies at Kudremukh Iron Ore Company Limited (KIOCL).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X