KHPT Recruitment 2022 : ಕೆಎಚ್‌ಪಿಟಿ ನೇಮಕಾತಿ; ತುಮಕೂರಿನಲ್ಲಿ 12 ಹುದ್ದೆಗಳ ಭರ್ತಿ
ಬೆಂಗಳೂರು, ಡಿಸೆಂಬರ್ 26; ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ (ಕೆಎಚ್‌ಪಿಟಿ) 12 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಇ-ಮೇಲ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಲು ಜನವರಿ 2 ಕೊನೆಯ ದಿನವಾಗಿದೆ.
Field Investigator ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆಯಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ತುಮಕೂರು ಜಿಲ್ಲೆಯಲ್ಲಿ ಕಾರ್ಯ ನಿರ್ವಹಣೆ ಮಾಡಬೇಕಿದೆ. ಕುಣಿಗಲ್‌ನಲ್ಲಿ 6 ಮತ್ತು ತುರುವೇಕೆರೆಯಲ್ಲಿ 6 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಕೆಚ್‌ಪಿಟಿ ನೇಮಕಾತಿ ನಿಯಮಗಳ ಅನ್ವಯ ವಯೋಮಿತಿ ನಿಗದಿ ಮಾಡಲಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ (ಕೆಎಚ್‌ಪಿಟಿ) ನೇಮಕಾತಿ ನಿಯಮಗಳ ಅನ್ವಯ ವೇತನ ನಿಗದಿ ಮಾಡಲಾಗಿದೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಆಸಕ್ತ, ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ [email protected] ವಿಳಾಸಕ್ಕೆ ಇ-ಮೇಲ್ ಕಳಿಸಬಹುದಾಗಿದೆ. ಅರ್ಜಿಯ ಜೊತೆ ನಿಗದಿತ ದಾಖಲಾತಿಗಳನ್ನು ಸಹ ಜನವರಿ 2ರೊಳಗೆ ಸಲ್ಲಿಕೆ ಮಾಡಬೇಕು.
ವಿದ್ಯಾರ್ಹತೆ ವಿವರ; ಅರ್ಜಿಗಳನ್ನು ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಯಾವುದಾದರೂ ಪದವಿ ಪಡೆದಿರಬೇಕು. ಕನಿಷ್ಠ 4-5 ವರ್ಷಗಳ ಅನುಭವ ಹೊಂದಿರಬೇಕು. ಗ್ರಾಮ ಪಂಚಾಯಿತಿ, ಗ್ರಾಮಗಳ ಮಟ್ಟಕ್ಕೆ ಸಂಚಾರ ನಡೆಸಬೇಕು.
ಕನ್ನಡದಲ್ಲಿ ಸ್ಪಷ್ಟವಾಗಿ ಮಾತನಾಡಲು ಬರಬೇಕು. ಡೇಟಾ ಸಂಗ್ರಹದಲ್ಲಿ ಅನುಭವ ಹೊಂದಿರಬೇಕು. ಕಂಪ್ಯೂಟರ್ ಬಳಕೆ ಜ್ಞಾನ ಅಗತ್ಯವಾಗಿದೆ. ತೆಲಗು ಭಾಷೆಯಲ್ಲಿ ಮಾತನಾಡುವ ಇಂಗ್ಲಿಶ್‌ನಲ್ಲಿ ಬರೆಯುವ ಕೌಶಲ್ಯವೂ ಅಗತ್ಯ.
ಆಯ್ಕೆಯಾದ ಅಭ್ಯರ್ಥಿಗಳು ಫೀಲ್ಡ್ ಆಫೀಸರ್‌ಗಳಿಗೆ ರಿಪೋರ್ಟ್ ಮಾಡಿಕೊಳ್ಳಬೇಕು. ಮಹಿಳೆಯರು, ವಿಕಲಾಂಗರು ಎಲ್ಲರಿಗೂ ಕೆಲಸ ಮಾಡಲು ಕೆಎಚ್‌ಪಿಟಿ ಅವಕಾಶ ಮಾಡಿಕೊಡುತ್ತದೆ.












Click it and Unblock the Notifications