KHPT Recruitment: ಬೆಂಗಳೂರು, ದೆಹಲಿಯಲ್ಲಿ ಉದ್ಯೋಗವಕಾಶ, ನೇಮಕಾತಿ ವಿವರ
KHPT Recruitment 2025: ಕರ್ನಾಟಕದಲ್ಲಿ ಮಹತ್ವದ ಹುದ್ದೆ ಸೇರಬೇಕೆಂಬ ಬಯಕೆ ಇರುವವರಿಗೆ ಇಲ್ಲೊಂದು ಉತ್ತಮ ಅವಕಾಶ ಇದೆ. ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ (KHPT) ನೇಮಕಾತಿ ಸಂಬಂಧ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಖಾಲಿರುವ ಪ್ರೋಗ್ರಾಂ ಮ್ಯಾನೇಜರ್ (ಕಾರ್ಯಕ್ರಮ ವ್ಯವಸ್ಥಾಪಕರ) ಹುದ್ದೆಗಳನ್ನು ಭರ್ತಿ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಬಹುದು.
ಕರ್ನಾಟಕದ ಬೆಂಗಳೂರು ಮಾತ್ರವಲ್ಲದೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಹ ಉದ್ಯೋಗ ಮಾಡುವ ಸುವರ್ಣ ಅವಕಾಶ ದೊರೆತಿದೆ. ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆಗೆ ಆಗಸ್ಟ್ 25ರೊಳಗೆ ಕೊನೆಯ ದಿನವಾಗಿದೆ. ಅಲ್ಲಿಯವರೆಗೆ ಕಾಯದೇ ಈ ಕೂಡಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಂತೆ ಟಸ್ಟ್ ಮಾಹಿತಿ ನೀಡಿದೆ. ನೇಮಕಾತಿ ಪೂರ್ಣ ಮಾಹಿತಿ ಇಲ್ಲಿದೆ.

ನೇಮಕಾತಿ ಪೂರ್ಣ ವಿವರ
ನೇಮಕಾತಿ ಸಂಸ್ಥೆ: ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ (KHPT)
ಹುದ್ದೆ ಹೆಸರು: ಕಾರ್ಯಕ್ರಮ ವ್ಯವಸ್ಥಾಪಕ ಹುದ್ದೆ
ಉದ್ಯೋಗ ಸ್ಥಳ: ಬೆಂಗಳೂರು, ದೆಹಲಿ
ಉದ್ಯೋಗ ಮಾದರಿ : ಸರ್ಕಾರಿ
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ಆಗಸ್ಟ್ 25
ಮಾಸಿಕ ವೇತನ: ನಿಯಮಾನುಸಾರ
ವಿದ್ಯಾರ್ಹತೆ ಏನಿರಬೇಕು?
ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ (KHPT) ಅಧಿಸೂಚನೆ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಇಲ್ಲವೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಸ್ನಾತಕೋತ್ತರ ಪದವಿ, ಪಿಎಚ್‌ಡಿ ಪೂರ್ಣಗೊಳಿಸಿರಬೇಕು.
ಅರ್ಜಿ ಸಲ್ಲಿಕೆ ಹೇಗೆ?
ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ (KHPT) ಖಾಲಿ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಈ ಅಧಿಕೃತ ಲಿಂಕ್ (https://www.khpt.org/work-with-us/vacancies-form/?post_applied_for=51036) ಮೇಲೆ ಕ್ಲಿಕ್ ಮಾಡಬೇಕು. ಅರ್ಜಿಯಲ್ಲಿ ಕೇಳಲಾಗುವ ಅಗತ್ಯ ಎಲ್ಲ ವಿವರ ನಮೂದಿಸಬೇಕು. ಅಗತ್ಯ ಪ್ರಯಾಣಪತ್ರ, ಸೂಕ್ತ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು. ಜೊತೆಗೆ ನಿಮ್ಮ ಇತ್ತೀಚಿನ ಭಾವಚಿತ್ರ ಅಪ್ಲೋಡ್ ಮಾಡಬೇಕು. ಜೊತೆಗೆ ನಿಮ್ಮ ಜಾತಿ ಅನುಸಾರ ಶುಲ್ಕವನ್ನು ಪಾವತಿಸಬೇಕು.
ಇದೆಲ್ಲ ಪ್ರಕ್ರಿಯೆ ಪೂರ್ಣಗೊಂಡ ಮೇಲೆ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಭವಿಷ್ಯದ ಉಪಯೋಗಕ್ಕಾಗಿ ಒಂದು ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಯಾವುದಕ್ಕೂ ಅರ್ಜಿ ಸಲ್ಲಿಕೆ ಮೊದಲು ಒಮ್ಮೆ ಅಧಿಸೂಚನೆಯನ್ನು ಪೂರ್ಣವಾಗಿ ಓದಿಕೊಳ್ಳಬೇಕು.












Click it and Unblock the Notifications