KHPT Recruitment 2023: ತುಮಕೂರಿನಲ್ಲಿ ಸರ್ಕಾರಿ ಕೆಲಸ ಖಾಲಿ ಇದೆ, ನೇಮಕಾತಿ ಮಾಹಿತಿ

ಬೆಂಗಳೂರು, ನವೆಂಬರ್ 09: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ (KHPT) ತನ್ನಲ್ಲಿ ಖಾಲಿ ಇರುವ ವಿವಿಧೆ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಈ ನಿಮಿತ್ತ ಅರ್ಹ ಅಭ್ಯರ್ಥಿಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ. ರಾಜ್ಯ ಸರ್ಕಾರಿ ವ್ಯಾಪ್ತಿಯಲ್ಲಿ ಉದ್ಯೋಗ ಹುಡುಕುತ್ತಿರುವ ಆಸಕ್ತರು ಈ ಕೂಡಲೇ ಪೂರ್ಣ ವಿವರ ನೋಡಿ ಅರ್ಜಿ ಸಲ್ಲಿಸಬಹುದಾಗಿದೆ.

ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ (KHPT) ನಲ್ಲಿ ಒಟ್ಟು ಮೂರು ಕಮ್ಯುನಿಟಿ ಫೆಸಿಲಿಟೇಟರ್ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಅರ್ಹ ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಇ-ಮೇಲ್ ಮೂಲಕ ಕಳುಹಿಸಬೇಕು. ಆಯ್ಕೆ ಆಗುವವರಿಗೆ ತುಮಕೂರಿನಲ್ಲಿ ಪೋಸ್ಟಿಂಗ್ ನೀಡಲಾಗುವುದು ಎಂದು ಟ್ರಸ್ಟ್ ತಿಳಿಸಿದೆ.

KHPT Recruitment 2023: Apply KHPT 3 Post Before November 10, Know Recruitment Details

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಇಲ್ಲಿ ನೀಡಲಾಗಿರುವ ನೇಮಕಾತಿ ಪೂರ್ಣ ಮಾಹಿತಿ ಓದಿ ನಂತರ ಅರ್ಜಿ ಸಲ್ಲಿಸಬೇಕು.

ನೇಮಕಾತಿ ವಿವರ

ಸಂಸ್ಥೆ ಹೆಸರು: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ (KHPT)

ಹುದ್ದೆ ಹೆಸರು: ಕಮ್ಯುನಿಟಿ ಫೆಸಿಲಿಟೇಟರ್

ಖಾಲಿ ಹುದ್ದೆ ಸಂಖ್ಯೆ: 03

ಪೋಸ್ಟಿಂಗ್ ಎಲ್ಲಿ: ತುಮಕೂರು

ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ನವೆಂಬರ್ 10

ವೇತನ: ನಿಗದಿಪಡಿಸಿಲ್ಲ

ಶೈಕ್ಷಣಿಕ ಅರ್ಹತೆ

ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ರಾಜ್ಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಇಲ್ಲವೇ ಮಂಡಳಿಯಿಂದ ಕಡ್ಡಾಯವಾಗಿ ಸೋಷಿಯಲ್ ವರ್ಕ್​, ಸೋಷಿಯಲ್ ಸೈನ್ಸ್​, ಡೆವಲಪ್​ಮೆಂಟ್ ಸ್ಟಡೀಸ್​​ ವಿಭಾಗದಲ್ಲಿ ಪದವಿ ಪಡೆದಿರಬೇಕು ಎಂದು ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ನೇಮಕಾತಿ ಅಧಿಸೂಚನೆ ಮಾಹಿತಿ ನೀಡಿದೆ.

ವಯೋಮಿತಿ

ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳ ವಯಸ್ಸು ನಿಯಮಾನುಸಾರ ಇರಬೇಕು. ಅವರಿಗೆ ಮೀಸಲಾತಿ ಅನುಸಾರ ವಯೋಮಿತಿಯಲ್ಲಿ ಅಲ್ಪ ಸಡಿಲಿಕೆ ನೀಡಲಾಗುವುದು ಎಂದು ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ತಿಳಿಸಿದೆ.

ಆಯ್ಕೆ ಪ್ರಕ್ರಿಯೆ ಹೀಗಿರಲಿದೆ

ಅಭ್ಯರ್ಥಿಗಳನ್ನು ಅನುಭವ, ಅವರ ಸಾಮರ್ಥ್ಯ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆ ಆದವರಿಗೆ ತುಮಕೂರಿನಲ್ಲಿ ಉದ್ಯೋಗ ನೀಡಲಾಗುವುದು. ವೇತನ ನಿಗದಿ ಪಡಿಸಲಾಗಿಲ್ಲ. ಅರ್ಜಿ ಶುಲ್ಕ ಯಾವುದು ಇರುದಿಲ್ಲ ಎಂದು ಟ್ರಸ್ಟ್ ತಿಳಿಸಿದೆ.

ಅಭ್ಯರ್ಥಿಗಳು ಅರ್ಜಿಯನ್ನು ಸೂಕ್ತ ದಾಖಲೆ ಸಹಿತ ಇ-ಮೇಲ್ ಐಡಿ [email protected] ಗೆ ನವೆಂಬರ್ 10ರೊಳಗೆ ಸಲ್ಲಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+