Get Updates
Get notified of breaking news, exclusive insights, and must-see stories!

KAS ಅಧಿಕಾರಿಗಳ ಮುಂಬಡ್ತಿಯಲ್ಲಿ ಬದಲಾವಣೆ, ವಿವರ

ಬೆಂಗಳೂರು, ಫೆಬ್ರವರಿ 11: ಕರ್ನಾಟಕ ಸರ್ಕಾರ ಕರ್ನಾಟಕ ರಾಜ್ಯ ಆಡಳಿತ ಸೇವೆಗಳ (ನೇಮಕಾತಿ) (ತಿದ್ದುಪಡಿ) ನಿಯಮಗಳು, 2024ಕ್ಕೆ ತಿದ್ದುಪಡಿ ತಂದಿದೆ. ಈ ಕುರಿತು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದ್ದು, ಆಕ್ಷೇಪಣೆ ಆಹ್ವಾನಿಸಲಾಗಿದೆ. ಕೆಎಎಸ್ ಅಧಿಕಾರಿಗಳ ಬಡ್ತಿಗೆ ಸಂಬಂಧಿಸಿದ ನಿಯಮಗಳು ಬದಲಾಗಲಿವೆ.

ಈ ಕುರಿತು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಉಮಾದೇವಿ, ಸರ್ಕಾರದ ಅಧೀನ ಕಾರ್ಯದರ್ಶಿ ಸಿ.ಆ.ಸು.ಇ (ಸೇವೆಗಳು-2) ಆದೇಶವನ್ನು ಹೊರಡಿಸಿದ್ದಾರೆ. ಕರ್ನಾಟಕ ರಾಜ್ಯ ಆಡಳಿತ ಸೇವೆಗಳ (ನೇಮಕಾತಿ) (ತಿದ್ದುಪಡಿ) ನಿಯಮಗಳು, 2024ರಪ್ರಾರಂಭದ ದಿನಾಂಕದಿಂದ ಒಂದು ಬಾರಿಯ ಕ್ರಮವು ಅಥವಾ ಆರು ತಿಂಗಳು ಇವುಗಳಲ್ಲಿ ಯಾವುದು ಮೊದಲೋ ಅದು ಪೂರ್ಣಗೊಂಡ ಮೇಲೆ, (2)ನೇ ಕಾಲಂನಲ್ಲಿ ನಿರ್ದಿಷ್ಟಪಡಿಸಿದ ಹುದ್ದೆಯ ಮುಂಬಡ್ತಿಗೆ ಕರ್ನಾಟಕ ರಾಜ್ಯ ಆಡಳಿತ ಸೇವೆಗಳ (ನೇಮಕಾತಿ) (ತಿದ್ದುಪಡಿ) ನಿಯಮಗಳು, 2024ರ ಉಪಬಂಧಗಳ ಕಾರ್ಯಾಚರಣೆಯು ನಿಂತುಹೋಗತಕ್ಕದ್ದು ಎಂದು ತಿಳಿಸಲಾಗಿದೆ.

KAS Officers Promotion Rule Change Details

ಕರಡು ನಿಯಮಗಳು

* ಹೆಸರು ಮತ್ತು ಪ್ರಾರಂಭ. ಈ ನಿಯಮಗಳನ್ನು ಕರ್ನಾಟಕ ರಾಜ್ಯ ಆಡಳಿತ ಸೇವೆಗಳ (ನೇಮಕಾತಿ) (ತಿದ್ದುಪಡಿ) ನಿಯಮಗಳು, 2024 ಎಂದು ಕರೆಯತಕ್ಕದ್ದು. ಇವು, ಸರ್ಕಾರಿ ರಾಜ್ಯಪತ್ರದಲ್ಲಿ ಅಂತಿಮವಾಗಿ ಪ್ರಕಟಣೆಗೊಂಡ ದಿನಾಂಕದಿಂದ ಜಾರಿಗೆ ಬರತಕ್ಕದ್ದು. ಅನುಸೂಚಿಯ ತಿದ್ದುಪಡಿ-ಕರ್ನಾಟಕ ರಾಜ್ಯ ಆಡಳಿತ ಸೇವೆಗಳ (ನೇಮಕಾತಿ) ನಿಯಮಗಳು, 1957ರ ಅನುಸೂಚಿಯಲ್ಲಿ (1) (4)ನೇ ಕಾಲಂನಲ್ಲಿ (ಎ2) ಕ್ರಮಸಂಖ್ಯೆಯಲ್ಲಿನ 'ಕೆಎಎಸ್' (ಸೂಪರ್ ಟೈಂ ಸೈಲ್) ಹುದ್ದೆಯ ಪವರ್ಗದ ಕೊನೆಯಲ್ಲಿ ಸೇರಿಸತಕ್ಕದ್ದು.

* ಪರಂತು ಕರ್ನಾಟಕ ರಾಜ್ಯ ಆಡಳಿತ ಸೇವೆಗಳ (ನೇಮಕಾತಿ) (ತಿದ್ದುಪಡಿ) ನಿಯಮಗಳು, 2024ರ ಪ್ರಾರಂಭದ ದಿನಾಂಕದಿಂದ ಒಂದು ಬಾರಿಯ ಕ್ರಮವಾಗಿ ಅಥವಾ ಆರು ತಿಂಗಳಲ್ಲಿ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮುಂಬಡ್ತಿ ಪ್ರಕ್ರಿಯೆಗೆ ಕೆಎಎಸ್ (ಕಿರಿಯ ಶ್ರೇಣಿ, ಹಿರಿಯ ಶ್ರೇಣಿ ಮತ್ತು ಆಯ್ಕೆ ಶ್ರೇಣಿ) ವೃಂದದಲ್ಲಿ ಹತ್ತು ವರ್ಷಗಳಿಗೆ ಕಡಿಮೆಯಲ್ಲದ ಒಟ್ಟು ಸೇವೆಯನ್ನು ಹೊಂದಿರತಕ್ಕದ್ದು, ಅದರಲ್ಲಿ ಕೆಎಎಸ್ (ಆಯ್ಕೆ ಶ್ರೇಣಿ) ವೃಂದದಲ್ಲಿ ಒಂದು ವರ್ಷಕ್ಕೆ ಕಡಿಮೆಯಲ್ಲದ ಸೇವೆಯಿರತಕ್ಕದ್ದು.

* ಕರ್ನಾಟಕ ರಾಜ್ಯ ಆಡಳಿತ ಸೇವೆಗಳ (ನೇಮಕಾತಿ) (ತಿದ್ದುಪಡಿ) ನಿಯಮಗಳು, 2024ರಪ್ರಾರಂಭದ ದಿನಾಂಕದಿಂದ ಒಂದು ಬಾರಿಯ ಕ್ರಮವು ಅಥವಾ ಆರು ತಿಂಗಳು ಇವುಗಳಲ್ಲಿ ಯಾವುದು ಮೊದಲೋ ಅದು ಪೂರ್ಣಗೊಂಡ ಮೇಲೆ, (2)ನೇ ಕಾಲಂನಲ್ಲಿ ನಿರ್ದಿಷ್ಟಪಡಿಸಿದ ಹುದ್ದೆಯ ಮುಂಬಡ್ತಿಗೆ ಕರ್ನಾಟಕ ರಾಜ್ಯ ಆಡಳಿತ ಸೇವೆಗಳ (ನೇಮಕಾತಿ) (ತಿದ್ದುಪಡಿ) ನಿಯಮಗಳು, 2024ರ ಉಪಬಂಧಗಳ ಕಾರ್ಯಾಚರಣೆಯು ನಿಂತುಹೋಗತಕ್ಕದ್ದು.

* (2) (4)ನೇ ಕಾಲಂನಲ್ಲಿ (ಎ3) ಕ್ರಮಸಂಖ್ಯೆಯಲ್ಲಿನ 'ಕೆಎಎಸ್‌' (ಆಯ್ಕೆ ಶ್ರೇಣಿ)' ಹುದ್ದೆಯ ಪ್ರವರ್ಗದ ಕೊನೆಯಲ್ಲಿ ಕರ್ನಾಟಕ ರಾಜ್ಯ ಆಡಳಿತ ಸೇವೆಗಳ (ನೇಮಕಾತಿ) (ತಿದ್ದುಪಡಿ) ನಿಯಮಗಳು, 2024ರ ಪ್ರಾರಂಭದ ದಿನಾಂಕದಿಂದ ಒಂದು ಬಾರಿಯ ಕ್ರಮವಾಗಿ ಅಥವಾ ಆರು ತಿಂಗಳಲ್ಲಿ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮುಂಬಡ್ತಿ ಪಕ್ರಿಯೆಗೆ ಕೆಎಎಸ್ (ಹಿರಿಯ ಶ್ರೇಣಿ) ಮತ್ತು ಕೆಎಎಸ್ ಗ್ರೂಪ್-ಎ (ಕಿರಿಯ ಶ್ರೇಣಿ) ವೃಂದದಲ್ಲಿ ಏಳು ವರ್ಷಗಳಿಗೆ ಕಡಿಮೆಯಲ್ಲದ ಒಟ್ಟು ಸೇವೆಯನ್ನು ಹೊಂದಿರತಕ್ಕದ್ದು, ಅದರಲ್ಲಿ ಕೆಎಎಸ್ (ಹಿರಿಯ ಶ್ರೇಣಿ) ವೃಂದದಲ್ಲಿ ಒಂದು ವರ್ಷಕ್ಕೆ ಕಡಿಮೆಯಲ್ಲದ ಸೇವೆಯಿರತಕ್ಕದ್ದು.

ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ ಅಧಿನಿಯಮ, 1978 (ಕರ್ನಾಟಕ ಅಧಿನಿಯಮ ಸಂಖ್ಯೆ 1990ರ 14)ರ 3ನೇ ಪ್ರಕರಣದ(2)ನೇ ಉಪಪಕರಣದ (ಎ) ಖಂಡದ ಮೂಲಕ ಅಗತ್ಯಪಡಿಸಲಾದಂತೆ, ಸದರಿ ಅಧಿನಿಯಮದ 3ನೇ ಪ್ರಕರಣದ (1)ನೇ ಉಪಪಕರಣದೊಂದಿಗೆ ಓದಲಾದ 8ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಆಡಳಿತ ಸೇವೆಗಳ (ನೇಮಕಾತಿ) ನಿಯಮಗಳು, 1957ನ್ನು ಮತ್ತಷ್ಟು ತಿದ್ದುಪಡಿ ಮಾಡಲು ರಾಜ್ಯ ಸರ್ಕಾರವು ಈ ಸಂಬಂಧ ಬಾಧಿತರಾಗ ಬಹುದಾದ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ ಮತ್ತು ಸದರಿ ಕರಡು ನಿಯಮಗಳು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ 7 ದಿನಗಳ ತರುವಾಯ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ.

ಅವಧಿಯು ಮುಕ್ತಾಯವಾಗುವುದಕ್ಕೆ ಮೊದಲು ಸದರಿ ಕರಡು ನಿಯಮಗಳಿಗೆ ಸಂಬಂಧಿಸಿದಂತೆ ಯಾವೊಬ್ಬ ವ್ಯಕ್ತಿಯಿಂದ ರಾಜ್ಯ ಸರ್ಕಾರವು ಸ್ವೀಕರಿಸಬಹುದಾದ ಯಾವುದೇ ಆಕ್ಷೇಪಣೆ ಅಥವಾ ಸಲಹೆಯನ್ನು ರಾಜ್ಯ ಸರ್ಕಾರವು ಪರಿಗಣಿಸಲಿದೆ. ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ವಿಧಾನ ಸೌಧ, ಬೆಂಗಳೂರು-560001 ಇವರಿಗೆ ಕಳುಹಿಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+