Karnataka Police Recruitment 2025: ಪೊಲೀಸ್ ಇಲಾಖೆಯ 2032 ಹುದ್ದೆಗಳ ಭರ್ತಿಗೆ ಆದೇಶ: ದೀಪಾವಳಿ ಗಿಫ್ಟ್

ಬೆಂಗಳೂರು, ಅಕ್ಟೋಬರ್ 15: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನೇಮಕಾತಿ ಮಾಡುತ್ತಿಲ್ಲ ಎಂದು ವಿಪಕ್ಷಗಳು ಆರೋಪಿಸಿದ್ದವು. ಇತ್ತೀಚೆಗೆ ಧಾರವಾಡ ಹಾಗೂ ಕಲಬುರಗಿಯಲ್ಲಿ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆದಿದ್ದವು. ಅದರ ಬೆನ್ನಲ್ಲೆ ರಾಜ್ಯ ಸರ್ಕಾರ ಉದ್ಯೋಗಾಕಾಂಕ್ಷಿಗಳಿಗೆ ದೀಪಾವಳಿ ಉಡುಗೊರೆ ನೀಡಿದೆ. ಪೊಲೀಸ್ ಇಲಾಖೆಯಲ್ಲಿ 2000ಕ್ಕೂ ಹೆಚ್ಚು ಖಾಲಿ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

ಹೌದು, ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 2032 ವಿವಿಧ ಹುದ್ದೆಗಳ ಭರ್ತಿಗೆ ಬುಧವಾರ (ಅ.14) ಆದೇಶ ಹೊರಡಿಸಿದೆ. ಯಾವೆಲ್ಲ ವೃಂದದ ಹುದ್ದೆಗಳು ಎಷ್ಟೆಷ್ಟು ಖಾಲಿ ಇವೆ ಎಂಬ ಮಾಹಿತಿ ಇಲ್ಲಿದೆ. ಆಸಕ್ತ ಅರ್ಹರು ಕೂಡಲೇ ಅಧಿಸೂಚನೆ ಓಡಿಕೊಂಡು ಅರ್ಜಿ ಸಲ್ಲಿಸಬೇಕು. ನೇಮಕಾತಿ ಪೂರ್ಣ ಮಾಹಿತಿ ಮುಂದಿದೆ.

Karnataka Police Recruitment 2025 Government Announces 2 032 Police Vacancies

ನೇಮಕಾತಿ ಸಂಪೂರ್ಣ ವಿವರ ಹೀಗಿದೆ

* ನೇಮಕಾತಿ ಸಂಸ್ಥೆ: ಕರ್ನಾಟಕ ಸರ್ಕಾರ (ಪೊಲೀಸ್ ಇಲಾಖೆ)

* ಉದ್ಯೋಗಗಳು:ಸ್ಥಳೀಯ, ಸ್ಥಳೀಯೇತರ ಸೇರಿ ವಿವಿಧ ಹುದ್ದೆಗಳು

* ಒಟ್ಟು ಹುದ್ದೆಗಳು: 2032

* ಪೋಸ್ಟಿಂಗ್: ಕರ್ನಾಟಕ

* ನೇಮಕಾತಿ ಆದೇಶ: ಅಕ್ಟೋಬರ್ 14

* ಅಧಿಕೃತ ಅಧಿಸೂಚನೆ: ಅಕ್ಟೋಬರ್ 16ರಂದು ಪ್ರಕಟ ನಿರೀಕ್ಷೆ

* ಅರ್ಜಿ ಸಲ್ಲಿಕೆ ಕೊನೆ ದಿನ: ಶೀಘ್ರವೇ ತಿಳಿಯಲಿದೆ

ಖಾಲಿ ಹುದ್ದೆಗಳ ಇತರ ವಿವರ

* KSRP, ಸ್ಪೆ.ಆರ್‌ಪಿಸಿ (ಪುರುಷ ಮತ್ತು ಮಹಿಳೆ) - 1,500

* KSRP, ಸ್ಪೆ.ಆರ್‌ಪಿಸಿ (ಸ್ಥಳೀಯ ವೃಂದ)- 336 ಹುದ್ದೆಗಳು

* IRB, ಮುನಿರಾಬಾದ್ ಘಟಕ-166

* ಒಟ್ಟು ಖಾಲಿ ಹುದ್ದೆಗಳು- 2,032

* ವಿದ್ಯಾರ್ಹತೆ, ಅರ್ಜಿ ಸಲ್ಲಿಕೆ ವಿಧಾನ, ವೇತನ, ಆಯ್ಕೆ, ಪರೀಕ್ಷೆ ಸೇರಿ ಇತರ ಮಾಹಿತಿ ಅಧಿಸೂಚನೆಯಲ್ಲಿ ತಿಳಿಯಲಿದೆ.

Karnataka Police Recruitment 2025 Government Announces 2 032 Police Vacancies

ಉಲ್ಲೇಖಿತ ಇ-ಸಂದೇಶದಲ್ಲಿ ಪೊಲೀಸ್ ಪ್ರಧಾನ ಕಛೇರಿಯ ಪತ್ರ ಸಂಖ್ಯೆ: 195/ಸಿಬ್ಬಂದಿ-1/2020-21 ದಿನಾಂಕ 13-10-2025ನ್ನು ಉಲ್ಲೇಖಿಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮತ್ತು ಕಾನ್ಸ್‌ಟೇಬಲ್ ವೃಂದಗಳಿಗೆ ನೇರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು. ಈ ಕುರಿತು ಕೆಲವು ಅಂಶಗಳಿಗೆ ಸರ್ಕಾರದಿಂದ ಸ್ವೀಕೃತಗೊಂಡಿರುವ ಸ್ಪಷ್ಟಿಕರಣ ಹಾಗೂ ಆದೇಶಗಳಲ್ಲಿನ ನಿರ್ದೇಶನಗಳನ್ವಯ ಸಂಬಂಧಪಟ್ಟ ಘಟಕಗಳಿಂದ ವರ್ಗೀಕರಣವನ್ನು ಪಡೆದು ಪ್ರಸ್ತಾಪಿತ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ.

ಪೊಲೀಸ್ ಪ್ರಧಾನ ಕಚೇರಿಯ ಸೂಚನೆಯಂತೆ, ಈಗಾಗಲೇ ಸಲ್ಲಿಸಿರುವ ನೇರ ಮತ್ತು ಸಮತಳ ವರ್ಗೀಕರಣಗಳನ್ನು (ಪ್ರಶಂಸನೀಯ ಕ್ರೀಡಾಪಟುಗಳ ವರ್ಗೀಕರಣ ಸೇರಿ) ಸರ್ಕಾರದ ಪತ್ರ ಸಂಖ್ಯೆ ಹೆಚ್‌ಡಿ 149 ಪಿಪಿಎ 2025, ದಿನಾಂಕ 10-10-2025ರಲ್ಲಿ ನಿಗದಿಪಡಿಸಿದಂತೆ ಪ್ರತಿ ನೇರ ಮೀಸಲಾತಿ ವರ್ಗಕ್ಕೆ ಶೇಕಡಾ 3% ಮೀಸಲಾತಿ ಒಳಗೊಂಡಂತೆ ತಿದ್ದುಪಡಿಸಿ ಮರು ಪ್ರಸ್ತಾವನೆ ಕಳುಹಿಸಬೇಕು.

ಈ ತಿದ್ದುಪಡಿಸಿದ ಪ್ರಸ್ತಾವನೆಯನ್ನು 16-10-2025ರೊಳಗಾಗಿ ಈ ಕಚೇರಿಯ ಇಮೇಲ್ ಐಡಿ [email protected] ಕಳುಹಿಸಲು ಸೂಚಿಸಲಾಗಿದೆ. ಸದರಿ ಸ್ಪೆ.ಆರ್.ಪಿ.ಸಿ (ಕೆ.ಎಸ್.ಆರ್.ಪಿ) ಮಿಕ್ಕುಳಿದ ವೃಂದದ-1500 ಹುದ್ದೆಗಳು ಮತ್ತು ಸ್ಪೆ.ಆರ್.ಪಿ.ಸಿ (ಕೆ.ಎಸ್.ಆರ್.ಪಿ & ಐ.ಆರ್.ಬಿ) ಸ್ಥಳೀಯ ವೃಂದದ-532 ಹುದ್ದೆಗಳು (ಪ್ರಶಂಸನೀಯ ಕ್ರೀಡಾಪಟುಗಳ ಹುದ್ದೆಗಳ ಮೀಸಲಾತಿ ಸೇರಿದಂತೆ) ಒಟ್ಟು ಸೇರಿ 2032 ಹುದ್ದೆಗಳಿಗೆ ಸಂಬಂಧಪಟ್ಟ ಘಟಕಗಳಿಂದ ನೇರ ನೇಮಕಾತಿ ಶೀಘ್ರವೇ ಜರುಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+