ಎಂ ಆರ್ ಪಿಎಲ್ ನಲ್ಲಿ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು, ಜುಲೈ 20 : ಸರ್ಕಾರಿ ಸ್ವಾಮ್ಯದ ಮಂಗಳೂರು ರಿಫೈನರಿ ಅಂಡ್ ಪೆಟ್ರೊಕೆಮಿಕಲ್ ಲಿಮಿಟೆಡ್ (ಎಂಆರ್ ಪಿಎಲ್)ನಲ್ಲಿ ಖಾಲಿ ಇರುವ ಟೆಕ್ನಿಕಲ್ ಅಸಿಸ್ಟೆಂಟ್ ಹಾಗೂ ಕ್ರೇನ್ ಅಪರೇಟರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
02 ಟೆಕ್ನಿಕಲ್ ಅಸಿಸ್ಟೆಂಟ್ ಹಾಗೂ 02 ಕ್ರೇನ್ ಅಪರೇಟರ್ ಹುದ್ದೆಗಳಿಗೆ ಎಂಆರ್ ಪಿಎಲ್ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕ ಆಗಸ್ಟ್ 12, 2017ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಹುದ್ದೆ: 04
1. ಟೆಕ್ನಿಕಲ್ ಅಸಿಸ್ಟೆಂಟ್: 02
* ವಿದ್ಯಾರ್ಹತೆ: ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆಟೋಮೊಬೈಲ್ ಇಂಜಿನಿಯರಿಂಗ್, ಮ್ಯಾಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಶೇ.60ರಷ್ಟು ಅಂಕದೊಂದಿಗೆ ಪೂರ್ಣಗೊಳಿಸಿರಬೇಕು.
*ವೇತನ: 11900 ರಿಂದ 32000 ರು. ತಿಂಗಳಿಗೆ.
* ವಯೋಮಿತಿ: 31 ಆಗಸ್ಟ್ 2017ಕ್ಕೆ ಅನ್ವಯವಾಗುಂತೆ ಗರಿಷ್ಠ 30 ವರ್ಷ ನಿಗದಿ ಪಡಿಸಲಾಗಿದೆ.
2. ಕ್ರೇನ್ ಅಪರೇಟರ್: 02

ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಇಲ್ಲಿ ಕ್ಲಿಕ್ಕಿಸಿ.

Click it and Unblock the Notifications