ಕರ್ನಾಟಕ ವಿಧಾನಸಭೆ ಸಚಿವಾಲಯ ನೇಮಕಾತಿ: ಹುದ್ದೆ, ವಿವರಗಳು
ಬೆಂಗಳೂರು, ನವೆಂಬರ್ 07: ಕರ್ನಾಟಕ ವಿಧಾನಸಭೆ ಸಚಿವಾಲಯ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25.11.2024. ಕರ್ನಾಟಕ ವಿಧಾನಸಭೆ ಸಚಿವಾಲಯ ನೇಮಕಾತಿ ಮತ್ತು ಸೇವಾ ಷರತ್ತುಗಳು ನಿಯಮಗಳು 2003ರ ನಿಯಮ 6ರ ಅವಕಾಶದಡಿ ವಿವಿಧ ವೃಂದಗಳ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಜ್ಯೂನಿಯರ್ ಪ್ರೋಗ್ರಾಮರ್ 1, ಕನ್ನಡ ವರದಿಗಾರರು 3, ಕಂಪ್ಯೂಟರ್ ಆಪರೇಟರ್ 1, ಕಿರಿಯ ಸಹಾಯಕರು 1, ಕಿರಿಯ ಗ್ರಂಥಾಲಯ ಸಹಾಯಕರು 1, ಮಸಾಜರ್ 1, ಬಡಗಿ 1, ದಲಾಯತ್ 1, ಸ್ವೀಪರ್ 3 ಹುದ್ದೆಗಳಿಗೆ ಅರ್ಜಿಗಳನ್ನು ಕರೆಯಲಾಗಿದೆ.

ಅಭ್ಯರ್ಥಿಗಳು ಕರ್ನಾಟಕ ವಿಧಾನಸಭೆ ಸಚಿವಾಲಯದ ನೇಮಕಾತಿ ಹಾಗೂ ಸೇವಾ ಷರತ್ತುಗಳು, ನಿಯಮಗಳು 2003ರ ಅನುಸಾರ ಅರ್ಜಿ ನಮೂನೆ-1ರ ದ್ವಿಪ್ರತಿಯಲ್ಲಿ ಅರ್ಜಿಗಳನ್ನು ಸರ್ಕಾರಿ ಪುಸ್ತಕ ಮಳಿಗೆಯಿಂದ ಪಡೆದು ವಿಧಾನಸಭೆ ಸಚಿವಾಲಯಕ್ಕೆ ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಸಲ್ಲಿಸಬೇಕು. (ಅರ್ಜಿ ನಮೂನೆಯು ಸರ್ಕಾರಿ ಮುದ್ರಣಾಲಯದಲ್ಲಿ ದೊರೆಯುವುದು).
ವಯೋಮಿತಿ, ಅರ್ಜಿ ಶುಲ್ಕ: ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಟ 18 ವರ್ಷ ವಯಸ್ಸನ್ನು ಪೂರೈಸಿರಬೇಕು. ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗ 35 ವರ್ಷ, ಪ್ರವರ್ಗ 2ಎ/ ಬಿ/ 3ಎ/ ಬಿ 38 ವರ್ಷಗಳು. ಪ.ಜಾ/ ಪ.ಪಂ/ ಪ್ರವರ್ಗ-1 40 ವರ್ಷಗಳು.
ಗ್ರೂಪ್-ಸಿ ಮತ್ತು ಗ್ರೂಪ್-ಬಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಗರಿಷ್ಟ ವಯೋಮಿತಿಯನ್ನು ಸರ್ಕಾರದ ಆದೇಶ ದಿನಾಂಕ 10.09.2024ರಲ್ಲಿ ಆದೇಶಿಸಿರುವಂತೆ ವಯೋಮಿತಿಗೆ 3 ವರ್ಷಗಳ ಸಡಿಲಿಕೆಯನ್ನು ನೀಡಿದೆ. ವಯೋಮಿತಿ ಸಡಿಲಿಕೆಯು ಈ ಒಂದು ಬಾರಿಗೆ ಮಾತ್ರ ಸೀಮಿತವಾಗಿದೆ.
ಸರ್ಕಾರಿ ಇಲಾಖೆಗಳಲ್ಲಿ ಈಗಾಗಲೇ ಸೇವೆ ಸಲ್ಲಿಸುತ್ತಿರುವ ಅಭ್ಯರ್ಥಿಗಳು ಅರ್ಜಿಗಳನ್ನು ತಮ್ಮ ನೇಮಕಾತಿ ಪ್ರಾಧಿಕಾರದ ಮೂಲಕ ಪ್ರಮಾಣಪತ್ರದೊಂದಿಗೆ ನಿಗದಿತ ದಿನಾಂಕದೊಳಗೆ ಸಲ್ಲಿಸಬೇಕು. ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಗಳು 1977ರ ಪ್ರಕಾರ, ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ಹಾಗೂ ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) (ಕಲ್ಯಾಣ ಕರ್ನಾಟಕ ಪ್ರದೇಶ) (ಅರ್ಹತಾ ಪ್ರಮಾಣಪತ್ರಗಳ ನೀಡಿಕೆ) ನಿಯಮಗಳು, 2013 (2021ರವರೆಗೆ ತಿದ್ದುಪಡಿಯಂತೆ) ರನ್ವಯ ನೇಮಕಾತಿ ಹೊಂದಲು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಮಾತ್ರ ನೇಮಕಾತಿಗೆ ಅರ್ಹರಾಗಿರುತ್ತಾರೆ.
ಅರ್ಜಿಗಳನ್ನು ಸಲ್ಲಿಸುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. ಉಳಿದ ಸಾಮಾನ್ಯ ವರ್ಗದ ಮತ್ತು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಕ್ರಾಸ್ ಮಾಡಿದ ರೂ. 500ರ ಇಂಡಿಯನ್ ಫೋಸ್ಟಲ್ ಆರ್ಡರ್ ಅನ್ನು ಈ ಅಧಿಸೂಚನೆ ಹೊರಡಿಸಿರುವ ದಿನಾಂಕದಿಂದ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗಿರುವಂತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ ಸಚಿವಾಲಯ, ಮೊದಲನೆ ಮಹಡಿ, ವಿಧಾನಸೌಧ, ಬೆಂಗಳೂರು-560 001, ಇವರ ಹೆಸರಿನಲ್ಲಿ ಖರೀದಿಸಿ, ಅರ್ಜಿಯಲ್ಲಿ ವಿವರದೊಂದಿಗೆ ಲಗತ್ತಿಸತಕ್ಕದ್ದು, ಒಮ್ಮೆ ಪಾವತಿಸಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ.
ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಗಳು 1977ರ ಪ್ರಕಾರ ಅಭ್ಯರ್ಥಿಗಳು ನೇರ ನೇಮಕಾತಿಗೆ ಅರ್ಹತೆಯನ್ನು ಪಡೆದಿರಬೇಕು ಹಾಗೂ ಅವನು/ ಅವಳು ಕೆಳಗೆ ತಿಳಿಸಿರುವ ವಿದ್ಯಾರ್ಹತೆಯನ್ನು ಹೊಂದಿರತಕ್ಕದ್ದು.
ಜ್ಯೂನಿಯರ್ ಪ್ರೋಗ್ರಾಮರ್. ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್/ ಮಾಹಿತಿ ವಿಜ್ಞಾನ/ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್‌ನಲ್ಲಿ ಪದವೀಧರರಾಗಿರಬೇಕು ಅಥವಾ ಕಂಪ್ಯೂಟರ್ ಅಪ್ಲಿಕೇಶನ್ (MCA) ನಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದು hardware and softwareಗಳ ಜ್ಞಾನವುಳ್ಳವರಾಗಿರಬೇಕು.
ಕನ್ನಡ ವರದಿಗಾರರು. ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸಿರುವ ಪ್ರವೀಣ ದರ್ಜೆಯ ಕನ್ನಡ ಶೀಘ್ರಲಿಪಿ ಹಾಗೂ ಪ್ರೌಢ ದರ್ಜೆಯ ಕನ್ನಡ ಬೆರಳಚ್ಚು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು. ಹಿಂದಿ ಪ್ರವೀಣ ದರ್ಜೆಯ ಶೀಘ್ರಲಿಪಿಯಲ್ಲಿ ಉತ್ತೀರ್ಣರಾದವರಿಗೆ ಆದ್ಯತೆ ನೀಡಲಾಗುವುದು.
ಕಂಪ್ಯೂಟರ್ ಆಪರೇಟರ್. ಅಂಗೀಕೃತ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಅಪ್ಲಿಕೇಷನ್‌ನಲ್ಲಿ ಸ್ನಾತಕ ಪದವಿ (ಬಿ.ಸಿ.ಎ.) ಅಥವಾ ಕಂಪ್ಯೂಟರ್ ಸೈನ್ಸ್ ಅಥವಾ ಎಲೆಕ್ಟ್ರಾನಿಕ್ಸ್‌ನಲ್ಲಿ ಬಿ.ಎಸ್ಸಿ. ಪದವಿ ಹೊಂದಿರಬೇಕು.
ಕಿರಿಯ ಸಹಾಯಕರು. ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು ಹಾಗೂ ಗಣಕಯಂತ್ರದ ಸಾಮಾನ್ಯ ಜ್ಞಾನವುಳ್ಳವಾಗಿರಬೇಕು. ಕರ್ನಾಟಕ ವಿಧಾನಸಭೆ ಸಚಿವಾಲಯದ ಗ್ರೂಪ್ 'ಡಿ' ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಅಂಗೀಕೃತ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಹೊಂದಿರುವ ನೌಕರರಿಗೆ ಆದ್ಯತೆ ನೀಡಲಾಗುವುದು.
ಕಿರಿಯ ಗ್ರಂಥಾಲಯ ಸಹಾಯಕರು. ಅಂಗೀಕೃತ ವಿಶ್ವವಿದ್ಯಾಲಯದಿಂದ ಲೈಬ್ರರಿ ಸೈನ್ಸ್‌ನಲ್ಲಿ ಪದವಿ ಹೊಂದಿದ್ದು ಗಣಕ ಯಂತ್ರದ ಜ್ಞಾನವುಳ್ಳವಾಗಿರಬೇಕು.
ಮಸಾಜರ್. ಏಳನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಯಾವುದಾದರು ಹೆಲ್ತ್ ಕ್ಲಬ್‌ನಲ್ಲಿ ಮಸಾಜರ್ ಆಗಿ ಕಾರ್ಯ ನಿರ್ವಹಿಸಿರುವ ಬಗ್ಗೆ ಐದು ವರ್ಷಗಳ ಅನುಭವವಿರಬೇಕು.
ಬಡಗಿ. ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಮಾನ್ಯತೆ ಪಡೆದಿರುವ ಸಂಸ್ಥೆಯಿಂದ ಬಡಗಿ ಕೋರ್ಸ್ ಅಥವಾ ಜಿಲ್ಲಾ ಕೈಗಾರಿಕಾ ತರಬೇತಿ ಕೇಂದ್ರದಿಂದ ಅಥವಾ ಕೈಗಾರಿಕಾ ಸಂಸ್ಥೆಯ (ಐ.ಟಿ.ಐ.)ಯಿಂದ ಪ್ರಮಾಣ ಪತ್ರ ಹೊಂದಿರಬೇಕು.
ದಲಾಯತ್. 7ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಸ್ವೀಪರ್ ಹುದ್ದೆಗೆ 4 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ: ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ ಸಚಿವಾಲಯ, ಅಂಚೆ ಪೆಟ್ಟಿಗೆ ಸಂಖ್ಯೆ : 5074, ಮೊದಲನೆ ಮಹಡಿ, ವಿಧಾನ ಸೌಧ, ಬೆಂಗಳೂರು-560 001.
-
Horoscope March 4: ಈ ರಾಶಿಯವರಿಗೆ ವೃತ್ತಿಯಲ್ಲಿ ಸುಧಾರಣೆ, ಆರೋಗ್ಯ ಕಾಳಜಿ ಮುಖ್ಯ, ದಿನ ಭವಿಷ್ಯ ಇಲ್ಲಿದೆ -
Horoscope March 6: ಈ ರಾಶಿಯವರ ವೈವಾಹಿಕ ಜೀವನದಲ್ಲಿ ಒಳಿತು, ಪ್ರೇಮಿಗಳಿಗೆ ಕಾದಿವೆ ಮಧುರ ಕ್ಷಣ, ದಿನ ಭವಿಷ್ಯ -
Bengaluru-Hyderabad ಬುಲೆಟ್ ಟ್ರೈನ್: ಕೇವಲ 2 ಗಂಟೆ ಪ್ರಯಾಣ, 626 ಕಿಮೀ ಉದ್ದದ ಹಾದಿಯಲ್ಲಿ 12 ನಿಲ್ದಾಣಗಳು -
Karnataka Weather: ರಾಜ್ಯದಲ್ಲಿ ಏರುತ್ತಿದೆ ಬಿಸಿಲಿನ ಝಳ; ಬೆಂಗಳೂರಿನ ತಾಪಮಾನ 34 ಡಿಗ್ರಿಗೆ ಏರಿಕೆ -
ಮಾರ್ಚ್ 5ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Middle East War: ಗಲ್ಫ್ ದೇಶಗಳಿಗೆ ರಫ್ತು ಸ್ಥಗಿತ; ರಾಜ್ಯದಲ್ಲೇ ಉಳಿದ ತರಕಾರಿ, ಮೊಟ್ಟೆ, ಹಾಲಿನ ಉತ್ಪನ್ನ- ರೈತರು ಕಂಗಾಲು -
Dog Satish: ಇನ್ಸ್ಟಾಗ್ರಾಂ ಯಾರ ಅಪ್ಪಂದೂ ಅಲ್ಲ, ವಿಡಿಯೋ ಡಿಲೀಟ್ ಮಾಡಲ್ಲ, ನನಗೆ ಮೀಟರ್ ಇದೆ: ಡಾಗ್ ಸತೀಶ್ -
Toxic: ಅವಸರಕ್ಕಿಂತ ತಾಳ್ಮೆ ಮುಖ್ಯ: ಟಾಕ್ಸಿಕ್ ಬಿಡುಗಡೆ ಮುಂದೂಡಿದ ಬೆನ್ನಲ್ಲೇ ಯಶ್ ಬೆಂಬಲಕ್ಕೆ ನಿಂತ ಅಭಿಮಾನಿಗಳು -
Karna Serial: "ಕರ್ಣ" ಧಾರಾವಾಹಿಯಿಂದ ಹೊರಬಂದ ಟಿ.ಎಸ್.ನಾಗಾಭರಣ, ಹಿರಿಯ ನಟ ಅಭಿಜಿತ್ ಎಂಟ್ರಿ -
'ವಂತಾರ'ಕ್ಕೆ ಒಂದು ವರ್ಷ: ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ -
Bengaluru: ಗೊರಗುಂಟೆಪಾಳ್ಯದ ಟ್ರಾಫಿಕ್ಗೆ ಸಿಗಲಿದ್ಯಾ ಮುಕ್ತಿ? ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು 'ಸುರಂಗ ರಸ್ತೆ' ಪ್ರಸ್ತಾಪ -
Horoscope March 4: ಈ ರಾಶಿಯವರಿಗೆ ವೃತ್ತಿಯಲ್ಲಿ ಸುಧಾರಣೆ, ಆರೋಗ್ಯ ಕಾಳಜಿ ಮುಖ್ಯ, ದಿನ ಭವಿಷ್ಯ ಇಲ್ಲಿದೆ












Click it and Unblock the Notifications