ಇಂಧನ ಇಲಾಖೆಯ 8 ಸಾವಿರ ಹುದ್ದೆ ನೇಮಕಾತಿ ವಿವರ

ಬೆಂಗಳೂರು, ಜೂ. 16 : ಇಂಧನ ಇಲಾಖೆಯಲ್ಲಿ 8080 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಜ್ಯೂನಿಯರ್ ಸ್ಟೇಷನ್ ಅಸಿಸ್ಟೆಂಟ್ಸ್‌, ಜ್ಯೂನಿಯರ್ ಲೈನ್ ಮ್ಯಾನ್‌ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 2, 2015.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ 1,300 ಜ್ಯೂನಿಯರ್ ಸ್ಟೇಷನ್ ಅಸಿಸ್ಟೆಂಟ್ಸ್‌ ಹುದ್ದೆಗಳು ಮತ್ತು ಎಸ್ಕಾಂಗಳಲ್ಲಿ ಜ್ಯೂನಿಯರ್ ಲೈನ್ ಮ್ಯಾನ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 1,300 ಜ್ಯೂನಿಯರ್ ಸ್ಟೇಷನ್ ಅಸಿಸ್ಟೆಂಟ್ಸ್‌ ಹುದ್ದೆಗಳ ಪೈಕಿ 70 ಹುದ್ದೆ ಹೈದರಾಬಾದ್-ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಮೀಸಲಾಗಿಡಲಾಗಿದೆ. [ಅರ್ಜಿ ಸಲ್ಲಿಸಲು ವಿಳಾಸ]

job

ಹುದ್ದೆಗಳ ವಿವರ : ಬೆಸ್ಕಾಂ 1,275 ಹುದ್ದೆಗಳಿವೆ ಇವುಗಳಲ್ಲಿ 37 ಹುದ್ದೆ ಹೈ-ಕರ್ನಾಟಕ ಭಾಗದವರಿಗೆ ಮೀಸಲು, ಜೆಸ್ಕಾಂನಲ್ಲಿ 1,213 ಹುದ್ದೆಗಳಿವೆ ಇವುಗಳಲ್ಲಿ 1031 ಹುದ್ದೆ ಹೈ-ಕರ್ನಾಟಕ ಭಾಗದವರಿಗೆ ಮೀಸಲು, ಮೆಸ್ಕಾಂ 2030, ಹೆಸ್ಕಾಂ 1405, ಚೆಸ್ಕಾಂ 857 ಹುದ್ದೆಗಳಿವೆ. [ಕನ್ನಡದಲ್ಲಿ ನೇಮಕಾತಿ ಆದೇಶ ಓದಿ]

ವಿದ್ಯಾರ್ಹತೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್ಎಲ್‌ಸಿ ಉತ್ತೀರ್ಣರಾಗಿರಬೇಕು. ಕನ್ನಡ ಓದಲು, ಬರೆಯಲು ಬರಬೇಕು. ಅಭ್ಯರ್ಥಿಗಳು 100 ಮೀಟರ್ ಓಟವನ್ನು 14 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಬೇಕು. ಸ್ಕಿಪ್ಪಿಂಗ್ 1 ನಿಮಿಷದಲ್ಲಿ 50 ಸಲ, ಶಾಟ್‌ ಪುಟ್ 8 ಮೀಟರ್ ಎಸೆತ, ಕಂಬ ಏರುವುದು 8 ಮೀಟರ್ ಎತ್ತರ (ಕಡ್ಡಾಯ), 800 ಮೀಟರ್ ಓಟ 3 ನಿಮಿಷದಲ್ಲಿ.

ವಯೋಮಿತಿ : ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು. ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗ 35 ವರ್ಷ, 2ಎ/2ಬಿ/3ಎ/3ಬಿ 38 ವರ್ಷಗಳು, ಎಸ್‌ಸಿ/ಎಸ್‌ಟಿ/ಪ್ರವರ್ಗ-1 40 ವರ್ಷಗಳು.

ಅರ್ಜಿ ಶುಲ್ಕಗಳು : ಸಾಮಾನ್ಯ ವರ್ಗ, ಪ್ರವರ್ಗ 1, 2ಎ, 2ಬಿ, 3ಎ ಮತ್ತು 3 ಬಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 200 ರೂ.ಗಳು, ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 100 ರೂ.ಗಳು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 2, 2015, ಸಂಜೆ 5 ಗಂಟೆ.

ಇಂಗ್ಲಿಶ್ ನಲ್ಲಿ ಓದಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+