KKRTC Recruitment: ಖಾಲಿ ಹುದ್ದೆಗಳು ಭರ್ತಿ, ಅಭ್ಯರ್ಥಿಗಿಳಿಗೆ ನೇಮಕಾತಿ ಆದೇಶ ವಿತರಣೆ

ಬೆಂಗಳೂರು, ಜನವರಿ 21: ಉತ್ತರ ಕರ್ನಾಟಕ ಹೊಂದಿಕೊಂಡಿರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (KKRTC) ಖಾಲಿ ಹುದ್ದೆಗಳಿಗೆ ನೇಮಕವಾದ ಉದ್ಯೋಗಿಗಳಿಗೆ ಸರ್ಕಾರ ನೇಮಕಾತಿ ಆದೇಶ ಹೊರಿಡಿಸದೆ. ಈವರೆಗೆ ನೂರಾರು ಹುದ್ದೆಗಳಿಗೆ ಈಗಾಗಲೇ ನೇಮಕಾತಿ ನಡೆದಿದೆ. ಆಯ್ಕೆ ಆದವರಿಗೆ ಆದೇಶ ನೀಡುವ ಜೊತೆಗೆ ಸ್ಥಳ ನಿಯೋಜನೆ ಮಾಡಲಾಯಿತು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ಮಂಗಳವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಕೇಂದ್ರ ಕಛೇರಿಯಲ್ಲಿ ಸಮಾರಂಭ ನಡೆಯಿತು. ಈ ವೇಳೆ ರಾಜ್ಯ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಅಭ್ಯರ್ಥಿಗಳಿಗೆ ನೇಮಕಾತಿ ಆದೇಶಗಳನ್ನು ವಿತರಣೆ ಮಾಡಿದರು. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ (KKRTC) ನಡೆದ 26 ಬ್ಯಾಕ್ ಲಾಗ್ ಹುದ್ದೆಗಳಿಗೆ ನೇಮಕಾತಿಯಲ್ಲಿ ಆಯ್ಕೆ ಆದವರು ಆದೇಶ ಪ್ರತಿ ಸ್ವೀಕರಿಸಿದರು.

Karnataka Issues Issues Recruitment Orders for KKRTC 26 Backlog Posts

2017ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ (SC) ಹಾಗೂ ಪರಿಶಿಷ್ಟ ಪಂಗಡದ (ST) ಮೀಸಲಾತಿಯ 36 ಹುದ್ದೆಗಳನ್ನು ಹಿಂಬಾಕಿ ಹುದ್ದೆಗಳೆಂದು ಗುರುತಿಸಲಾಗಿದೆ. ಅವುಗಳ ಪೈಕಿ 1 ಸಹಾಯಕ ಲೆಕ್ಕಿಗ, 8 ಕುಶಲಕರ್ಮಿ, 6 ಸಹಾಯಕ ಸಂಚಾರ ನಿರೀಕ್ಷಕ, 3 ತಾಂತ್ರಿಕ ಸಹಾಯಕ ಹಾಗೂ 7 ರಾಜ್ಯ ಸಾರಿಗೆ ಪೇದೆ ಹುದ್ದೆಗಳಿಗೆ ಒಟ್ಟು 25 ಅಭ್ಯರ್ಥಿಗಳು ಆಯ್ಕೆಗೊಂಡಿದ್ದಾರೆ.

ಒಟ್ಟು 1745 ಹುದ್ದೆಗಳ ನೇಮಕಾತಿ ನಡೆದಿದೆ.

ಅವರಿಗೆಲ್ಲ ಇಂದಿನ ಕಾರ್ಯಕ್ರಮದಲ್ಲಿ ನೇಮಕಾತಿ ಆದೇಶ ನೀಡಲಾಗಿದೆ. ಕೌನ್ಸೆಲಿಂಗ್ ಮೂಲಕ ಕಾರ್ಯಸ್ಥಳ ನಿಯೋಜನೆ ಮಾಡಲಾಗಿದೆ. 2024ನೇ ಸಾಲಿನಲ್ಲಿ 1619 ಚಾಲಕ ಹಾಗೂ ಚಾಲಕ-ಕಂ-ನಿರ್ವಾಹಕರನ್ನು ನೇರ ನೇಮಕಾತಿ ಮೂಲಕ ಹಾಗೂ 100 ಮೃತರಾವಲಂಬಿತರನ್ನು ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಒಟ್ಟು 1745 ನೇಮಕಾತಿ ಕಳೆದ ಒಂದುವರೆ ವರ್ಷದಲ್ಲಿ ‌ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ನಡೆದಿದೆ ಎಂದು ಹೇಳಿದರು.

ನಿಗಮದಲ್ಲಿ 1014 ಹೊಸ ಬಿಎಸ್‌6 ಮಾದರಿಯ ಬಸ್ ಗಳನ್ನು ಸೇರ್ಪಡೆಗೊಳಿಸಲಾಗಿದೆ. 123 ನಗರ ಸಾರಿಗೆ ಬಸ್ ಹಾಗೂ 56 ಪ್ರೀಮಿಯಂ ಬಸ್ ಗಳ ಖರೀದಿಗೆ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಬಸ್ ಖರೀದಿ, ಹೊಸ ಬಸ್‌ಗಳ ಸಂಚಾರ ಕುರಿತು ಮಾಹಿತಿ ನೀಡಿದರು.

315 ಹುದ್ದೆಗಳ ನೇಮಕಾತಿ

ಇದೇ ಕೆಕೆಆರ್‌ಟಿಸಿ ನಿಗಮದಲ್ಲಿ ಒಟ್ಟು ಖಾಲಿ ಇರುವ 315 ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಜ್ಜಾಗಿದೆ. ಸರ್ಕಾರ ಅನುಮತಿ ನೀಡುತ್ತಿದ್ದಂತೆ ಈ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ನಿಯಮಗಳ ಪ್ರಕಾರ ಅರ್ಹರನ್ನು ಪ್ರಾಧಿಕಾರ ಆಯ್ಕೆ ಮಾಡಿಕೊಳ್ಳಲಿದೆ. ದ್ವಿತಿಯ ಪಿಯುಸಿ, ಪದವಿಧರರಿಗೆ ಇಲ್ಲಿನ ಕೆಲಸ ಮಾಡಲು ಅವಕಾಶ ನೀಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+