ಕರ್ನಾಟಕ ಆರೋಗ್ಯ ಇಲಾಖೆ ನೇಮಕಾತಿ; ವಿವರಗಳು
ಬೆಂಗಳೂರು, ಸೆಪ್ಟೆಂಬರ್ 10 : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಶೇಷ ನೇಮಕಾತಿ ಸಮಿತಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆದಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಆರೋಗ್ಯ ಇಲಾಖೆಯ ಆಯುಕ್ತರಾದ ಪಂಕಜ್ ಕುಮಾರ್ ಪಾಂಡೆ ಈ ಕುರಿತು ಟ್ವೀಟ್ ಮಾಡಿದ್ದಾರೆ. ವೈದ್ಯರು, ದಂತ ವೈದ್ಯರು, ತಜ್ಞ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಸ್ಪೆಷಲಿಸ್ಟ್ 824, ಜನರಲ್ ಡ್ಯುಟಿ ಮೆಡಿಕಲ್ ಆಫೀಸರ್ 1246, ಡೆಂಟಲ್ ಹೆಲ್ತ್ ಆಫೀಸರ್ 88 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ವಿಶೇಷ ನೇಮಕಾತಿ ಸಮಿತಿಯ ಒಪ್ಪಿಗೆಯಂತೆ ಈ ನೇಮಕಾತಿಯನ್ನು ಕೈಗೊಳ್ಳಲಾಗುತ್ತಿದೆ.

ಆರೋಗ್ಯ ಇಲಾಖೆಯ ಈ ವಿಶೇಷ ನೇಮಕಾತಿ ಕುರಿತ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 080-22340197 ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ವಿಶೇಷ ನೇಮಕಾತಿ ಸಮಿತಿಯು ಬೆಂಗಳೂರಿನ ಆನಂದ್ ರಾವ್ ವೃತ್ತದಲ್ಲಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖ್ಯ ಕಚೇರಿಯಲ್ಲಿ ಇದೆ. ಆರೋಗ್ಯ ಇಲಾಖೆ ನೇಮಕಾತಿ ಬಗ್ಗೆ ಆಸಕ್ತಿ ಹೊಂದಿರುವವರು ವೆಬ್ ಸೈಟ್‌ಗೆ ಭೇಟಿ ನೀಡಬಹುದಾಗಿದೆ.
Calling Doctors, Dentists and Specialists to join the Govt. service in Health Department and help us serve the State better.@CMofKarnataka @BSYBJP @sriramulubjp @DrKSudhakar4 @CovidKarnataka @nimmasuresh @drashwathcn @mysurucitycorp @shalinirajnish @IASassociation @BBMPCOMM pic.twitter.com/5ooyHKZrs9
— PANKAJ KUMAR PANDEY, IAS (@iaspankajpandey) September 10, 2020
ವೆಬ್ ಸೈಟ್ ವಿಳಾಸ, ಜಾಹೀರಾತು ಇಲ್ಲಿದೆ












Click it and Unblock the Notifications