Gram Panchayat; ಸಿಬ್ಬಂದಿ ನೇಮಕಾತಿ ತಿದ್ದುಪಡಿ ನಿಯಮ ತಿಳಿಯಿರಿ

ಕರ್ನಾಟಕ ಸರ್ಕಾರ ಗ್ರಾಮ ಪಂಚಾಯಿತಿ ಸಿಬ್ಬಂದಿ ನೇಮಕಾತಿ ತಿದ್ದುಪಡಿ ನಿಯಮ 2022ರ ಅಂತಿಮ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರ ಮೂಲಕ ಪ್ರಕಟಿಸಿದೆ.

ಬೆಂಗಳೂರು, ಫೆಬ್ರವರಿ 06; ಗ್ರಾಮ ಪಂಚಾಯಿತಿ ಸಿಬ್ಬಂದಿ ನೇಮಕಾತಿ (ತಿದ್ದುಪಡಿ) ನಿಯಮಗಳು 2022 ಕುರಿತು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯಪತ್ರದ ಮೂಲಕ ಅಧಿಕೃತವಾಗಿ ಇದನ್ನು ಪ್ರಕಟಿಸಲಾಗಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14)ರ ಪ್ರಕರಣ 62ರ ಉಪ ಪ್ರಕರಣ (1)ರ ಖಂಡ 'ಡಿ' ಮತ್ತು ಪ್ರಕರಣ 112 ಮತ್ತು 113ರೂಡನೆ ಓದಿಕೊಂಡಂತೆ ಪ್ರಕರಣ 311ರ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ತಿದ್ದುಪಡಿ ಮಾಡಲಾಗಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ (ಗ್ರಾಮ ಪಂಚಾಯತಿಯ ಸಿಬ್ಬಂದಿಯ ಸ್ವರೂಪ, ವೇತನ ಶ್ರೇಣಿಗಳು, ನೇಮಕಾತಿ ವಿಧಾನ ಮತ್ತು ಸೇವಾ ಷರತ್ತುಗಳು) (ತಿದ್ದುಪಡಿ) ನಿಯಮಗಳು 2022ರ ಕರಡನ್ನು ದಿನಾಂಕ 29/10/2022ರ ಕರ್ನಾಟಕ ರಾಜ್ಯ ಪತ್ರದ ಭಾಗ-IV Aರಲ್ಲಿ ಪ್ರಕಟಿಸಲಾಗಿತ್ತು. ಅದರಿಂದ ಬಾಧಿತರಾಗುವ ವ್ಯಕ್ತಿಗಳಿಂದ ಸದರಿ ಕರಡಿಗೆ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಕ್ಷೇಪಣೆ ಮಾಡಲಾಗಿತ್ತು.

ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ 15 ದಿನಗಳೊಳಗಾಗಿ ಸಲ್ಲಿಸಬೇಕೆಂದು ಕೋರಿರುವುದರಿಂದ ಮತ್ತು ಸದರಿ ರಾಜ್ಯ ಪತ್ರವು ಸಾರ್ವಜನಿಕರಿಗೆ ದಿನಾಂಕ 07/11/2022ರಂದು ಲಭ್ಯವಾಗುವಂತೆ ಮಾಡಿರುವುದರಿಂದ ಮತ್ತು, ಸದರಿ ಕರಡಿನ ಸಂಬಂಧದಲ್ಲಿ ರಾಜ್ಯ ಸರ್ಕಾರದಲ್ಲಿ ಸ್ವೀಕೃತವಾಗಿರುವ ಆಕ್ಷೇಪಣೆ ಅಥವಾ ಸಲಹೆಗಳನ್ನು ಪರಿಗಣಿಸಿ ಆದೇಶ ಹೊರಡಿಸಲಾಗಿದೆ.

ಈಗ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14)ರ 311 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಮೂಲಕ ನಿಯಮಗಳನ್ನು ರಚಿಸಿ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ನಿಯಮಗಳು ಈ ಕೆಳಗಿನಂತಿವೆ.

ಗ್ರಾಮ ಪಂಚಾಯಿತಿ ಸಿಬ್ಬಂದಿ ನೇಮಕಾತಿ ನಿಯಮಗಳು

ಗ್ರಾಮ ಪಂಚಾಯಿತಿ ಸಿಬ್ಬಂದಿ ನೇಮಕಾತಿ ನಿಯಮಗಳು

ಈ ನಿಯಮಗಳನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿ ಸಿಬ್ಬಂದಿ ಸ್ವರೂಪ, ವೇತನ ಶ್ರೇಣಿಗಳು, ನೇಮಕಾತಿ ವಿಧಾನ ಮತ್ತು ಇತರ ಸೇವಾ ಷರತ್ತುಗಳು) (ತಿದ್ದುಪಡಿ) ನಿಯಮಗಳು, 2022 ಎಂದು ಕರೆಯತಕ್ಕದ್ದು. ಇವು ರಾಜ್ಯಪತ್ರದಲ್ಲಿ ಅಂತಿಮವಾಗಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರುತ್ತದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿ ಸಿಬ್ಬಂದಿ ಸ್ವರೂಪ, ವೇತನ ಶ್ರೇಣಿಗಳು, ನೇಮಕಾತಿ ವಿಧಾನ ಮತ್ತು ಇತರ ಸೇವಾ ಷರತ್ತುಗಳು ಇದನ್ನು ಒಳಗೊಂಡಿವೆ.

ನಿಯಮಗಳು, 2020 (ಇದರಲ್ಲಿ ಇನ್ನು ಮುಂದೆ ಸದರಿ ನಿಯಮಗಳಂದು ಉಲ್ಲೇಖಿಸಲಾಗಿದೆ). 3ನೇ ಉಪನಿಯಮದಲ್ಲಿನ ಹುದ್ದೆಗಳ ಸಂಖ್ಯೆ ಎಂಬ ಪದಗಳನ್ನು ಕೈಬಿಡತಕ್ಕದ್ದು. ನಿಯಮ 4ರ ತಿದ್ದುಪಡಿ. (ಎ) 4ನೇ ನಿಯಮದಲ್ಲಿನ (1)ನೇ ಉಪನಿಯಮದ (ಬಿ) ರಲ್ಲಿ 'ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ' ಎಂಬ ಪದಗಳಿಗೆ 'ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ' ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.

ಗ್ರಾಮ ಪಂಚಾಯತಿ ಅಧ್ಯಕ್ಷರು (3) (4)ನೇ ಉಪನಿಯಮದಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಕನಿಷ್ಠ ಒಂದು ಕನ್ನಡ ದಿನ ಪತ್ರಿಕೆಯನ್ನೊಳಗೊಂಡಂತೆ ಜಿಲ್ಲೆಯಲ್ಲಿ ಹೆಚ್ಚು ಪ್ರಸಾರದಲ್ಲಿರುವ ದಿನ ಪತ್ರಿಕೆಗಳಲ್ಲಿ, ನೇಮಕಾತಿಗಾಗಿ ಜಾಹೀರಾತು ಪ್ರಕಟಪಡಿಸತಕ್ಕದ್ದು ಎಂಬ ಪದಗಳಿಗೆ ಅರ್ಹ ಅಭ್ಯರ್ಥಿಗಳಿಂದ ಕಡ್ಡಾಯವಾಗಿ ಅರ್ಜಿಗಳನ್ನು ಆಹ್ವಾನಿಸಿ ಕನಿಷ್ಠ ಒಂದು ಅಥವಾ ಎರಡು ಕನ್ನಡ ದಿನ ಪತ್ರಿಕೆಯನ್ನೊಳಗೊಂಡಂತ ಜಿಲ್ಲೆಯಲ್ಲಿ ಹೆಚ್ಚು ಪ್ರಸಾರದಲ್ಲಿರುವ ದಿನ ಪತ್ರಿಕೆಗಳಲ್ಲಿ, ನೇಮಕಾತಿಗಾಗಿ ಜಾಹೀರಾತು ಪ್ರಕಟಿಸತಕ್ಕದ್ದು ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.

ನಿಯಮಗಳ ತಿದ್ದುಪಡಿಗಳು ಹೀಗಿವೆ

ನಿಯಮಗಳ ತಿದ್ದುಪಡಿಗಳು ಹೀಗಿವೆ

ನಿಯಮ 5ರ ತಿದ್ದುಪಡಿ ನಿಯಮ 5(3) ರ ನಂತರ ಈ ಕೆಳಗಿನದ್ದು ಸೇರಿಸತಕ್ಕದ್ದು. ಜಿಲ್ಲಾ ಆಯ್ಕೆ ಸಮಿತಿಯು ಗ್ರಾಮ ಪಂಚಾಯಿತಿಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅನುಸಾರವಾಗಿ ಅರ್ಹ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ತಯಾರಿಸತಕ್ಕದ್ದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಪೂರ್ವಾನುಮೋದನೆಯೊಂದಿಗೆ ನೇಮಕಾತಿ ಪ್ರಾಧಿಕಾರವು ನೇಮಕಾತಿ ಆದೇಶವನ್ನು
ಹೊರಡಿಸತಕ್ಕದ್ದು.

ನಿಯಮ 6ರ ತಿದ್ದುಪಡಿ ನಿಯಮ 6ರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ ರಾಜ್ ಅಧಿನಿಯಮ 1993ರ ಪ್ರಕರಣ 113ರಂತೆ ನೇಮಕಗೊಂಡು ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅನುಮೋದನೆ ಪಡೆದಿದ್ದು, ಗ್ರಾಮ ಪಂಚಾಯಿತಿಗಳ ವಾಟರ್ ಆಪರೇಟರ್/ ಅಟೆಂಡಂಡ್/ ಕ್ಲೀನರ್ಸ್ ಗಳಿಗೆ ಬಿಲ್ ಕಲೆಕ್ಟರ್/ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಬಡ್ತಿ ನೀಡುವಾಗ ಪುನಃ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅನುಮೋದನೆ ಪಡೆಯುವ ಅವಶ್ಯಕತೆ ಇರುವುದಿಲ್ಲ.

ನಿಯಮ 7ರ ನಂತರ ಬಿಲ್ ಕಲೆಕ್ಟರ್ ಮತ್ತು ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್‌ಗಳ ವರ್ಗಾವಣೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಅನುಮೋದನೆಗೊಂಡು ಕರ್ತವ್ಯ ನಿರ್ವಹಿಸುತ್ತಿರುವ ಬಿಲ್ ಕಲೆಕ್ಟರ್ ಮತ್ತು ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆಯಾ ಜಿಲ್ಲೆಯ ವ್ಯಾಪ್ತಿಯಲ್ಲಿ ವಿಶೇಷ ಸಂದರ್ಭಗಳಲ್ಲಿ ನೌಕರರು ಇಚ್ಚಿಸಿದಲ್ಲಿ ಜೇಷ್ಠತೆಗೆ ದಕ್ಕೆಯಾಗದಂತ ಲಭ್ಯವಿರುವ ಖಾಲಿ ಹುದ್ಮಗಳಿಗೆ ಹಾಗೂ ಪರಸ್ಪರ ವರ್ಗಾವಣೆಯನ್ನು ಸೇವಾ ಅವಧಿಯಲ್ಲಿ ಎರಡು ಬಾರಿ ವರ್ಗಾವಣೆ ಮಾಡತಕ್ಕದ್ದು.

ನಿಯಮ 8ರ ತಿದ್ದುಪಡಿ ವಿವರಗಳು

ನಿಯಮ 8ರ ತಿದ್ದುಪಡಿ ವಿವರಗಳು

ನಿಯಮ 8ರ ತಿದ್ದುಪಡಿ (1) 8 ನೇ ನಿಯಮದಲ್ಲಿನ ಉಪನಿಯಮ (ಅ) ರಲ್ಲಿ ಅಥವಾ ವೇತನ ಬಡ್ತಿಯನ್ನು ತಡೆ ಹಿಡಿಯುವುದನ್ನು ಕೈಬಿಡತಕ್ಕದ್ದು. 8(4) ಉಪನಿಯಮದಂತೆ ವಿಚಾರಣೆಯ ನಂತರ ಲೋಕಾಯುಕ್ತವು ಎಂಬ ಪದಗಳ ನಂತರ ಅಥವಾ ಭ್ರಷ್ಟಾಚಾರ ನಿಗ್ರಹ ದಳವು ಮಾಡುವ ಶಿಫಾರಸ್ಸುಗಳನ್ನು ಅಂಗೀಕರಿಸಿ ಜಾರಿಗೊಳಿಸುವುದು ಗ್ರಾಮ ಪಂಚಾಯತಿಗಳಿಗೆ ಕಡ್ಡಾಯವಾಗಿರುತ್ತದೆ ಎಂಬುದನ್ನು ಕೈಬಿಡತಕ್ಕದ್ದು.

ನಿಯಮ 9ರ ತಿದ್ದುಪಡಿಯಂತೆ ನೌಕರನ ಸಾವು ಸಂಭವಿಸಿದ ದಿನಾಂಕದಿಂದ ಒಂದು ವರ್ಷದೊಳಗಾಗಿ ಅರ್ಹ ವ್ಯಕ್ತಿಯು ಹುದ್ದೆಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು ಎಂಬ ಪದಗಳಿಗೆ ಈ ನಿಯಮಗಳ ಮೇರೆಗೆ ನೇಮಕಾತಿಯನ್ನು ಕೋರುವ ಪ್ರತಿಯೊಬ್ಬ ಮೃತ ಗ್ರಾಮ ಪಂಚಾಯಿತಿ, ನೌಕರನ/ ಳ ಅವಲಂಬಿತನು, ಗ್ರಾಮ ಪಂಚಾಯಿತಿ, ನೌಕರನು/ ಳು ಮರಣ ಹೊಂದಿದ ದಿನಾಂಕದಿಂದ ಒಂದು ವರ್ಷದ ಒಳಗೆ ಕಾರ್ಯನಿರ್ವಹಿಸುತ್ತಿದ್ದ, ಗ್ರಾಮ ಪಂಚಾಯಿತಿಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು ಎಂದು ಸೂಚಿಸಲಾಗಿದೆ. ಅಪ್ರಾಪ್ತ ವಯಸ್ಕರಾದ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ನೌಕರನು/ ಳು ಮರಣ ಹೊಂದಿದ ದಿನಾಂಕದಿಂದ ಎರಡು ವರ್ಷಗಳ ಒಳಗೆ 18 ವರ್ಷಗಳನ್ನು ಪೂರೈಸಿರತಕ್ಕದ್ದು ಮತ್ತು ತದನಂತರ ಎರಡು ವರ್ಷಗಳ ಒಳಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು.

ಗ್ರಾಮ ಪಂಚಾಯತಿ ನೌಕರ ಮೃತಪಟ್ಟಾಗ

ಗ್ರಾಮ ಪಂಚಾಯತಿ ನೌಕರ ಮೃತಪಟ್ಟಾಗ

ಮೃತ ಪುರುಷ ವಿವಾಹಿತ ಗ್ರಾಮ ಪಂಚಾಯತಿ ನೌಕರನ ಸಂದರ್ಭದಲ್ಲಿ ಆತನಿಗೆ ಅವಲಂಬಿತರಾಗಿದ್ದ ಮತ್ತು ಆತನೊಂದಿಗೆ ವಾಸವಾಗಿದ್ದ ವಿಧವಾ ಪತ್ನಿ ಮತ್ತು ಮೃತನ ವಿಧವಾ ಪತ್ನಿಯು ನೇಮಕಾತಿಗೆ ಅರ್ಹಳಿಲ್ಲದಿದ್ದಲ್ಲಿ ಅಥವಾ ಸಮುಚಿತ ಕಾರಣಕ್ಕಾಗಿ ಅವಳು ನೇಮಕಾತಿಯನ್ನು ಒಪ್ಪದಿದ್ದಲ್ಲಿ, ಮೃತ ಗ್ರಾಮ ಪಂಚಾಯತಿ ನೌಕರನ ವಿಧವಾ ಪತ್ನಿಯು ಆಯ್ಕೆ ಮಾಡಿದ ಆತನ ಮಗ ಅಥವಾ ಮಗಳು. ಮೃತ ಗ್ರಾಮ ಪಂಚಾಯತಿ ನೌಕರನ ಪತ್ನಿಯು ಆತನಿಗೂ ಮೊದಲೇ ಮೃತಪಟ್ಟಿದ್ದಲ್ಲಿ ಮಕ್ಕಳ ವಯಸ್ಸಿಗನುಗುಣವಾಗಿ ಆದ್ಯತೆಯನ್ನು ನೀಡತಕ್ಕದ್ದು.

ಮೃತ ಪುರುಷ ಅವಿವಾಹಿತ ಗ್ರಾಮ ಪಂಚಾಯತಿ ನೌಕರನ ಸಂದರ್ಭದಲ್ಲಿ ಆತನಿಗೆ ಅವಲಂಬಿತರಾಗಿದ್ದ ಮತ್ತು ಆತನೊಂದಿಗೆ ವಾಸವಾಗಿದ್ದ ಆತನ ತಂದೆ ಅಥವಾ ತಾಯಿಯು ಆಯ್ಕೆ ಮಾಡಿದ ಅಥವಾ ಅವರ ಆಯ್ಕೆಯಲ್ಲಿ ಭಿನ್ನಾಭಿಪ್ರಾಯವಿದ್ದಲ್ಲಿ, ಆತನ ತಾಯಿಯು ಆಯ್ಕೆ ಮಾಡಿದ ಸಹೋದರ ಅಥವಾ ಸಹೋದರಿ ಅಥವ ಮೃತ ಗ್ರಾಮ ಪಂಚಾಯತಿ ನೌಕರನ ತಂದೆ/ ತಾಯಿ ಆತನಿಗೂ ಮೊದಲೇ ಮೃತಪಟ್ಟಿದ್ದಲ್ಲಿ, ಸಹೋದರ/ ಸಹೋದರಿಯ ವಯಸ್ಸಿಗನುಗುಣವಾಗಿ ಆದ್ಯತೆಯನ್ನು ನೀಡತಕ್ಕದ್ದು.

ಮೃತ ಮಹಿಳಾ ವಿವಾಹಿತ ಗ್ರಾಮ ಪಂಚಾಯತಿ ನೌಕರಳ ಸಂದರ್ಭದಲ್ಲಿ ಆಕೆಗೆ ಅವಲಂಬಿತರಾಗಿದ್ದ ಮತ್ತು ಆಕೆಯೊಂದಿಗೆ ವಾಸವಾಗಿದ್ದ ಮೃತ ಗ್ರಾಮ ಪಂಚಾಯತಿ ನೌಕರಳ ವಿಧುರ ಪತಿಯು ಆಯ್ಕೆ ಮಾಡಿದ ಮಗ ಅಥವಾ ಮಗಳು ಮತ್ತು ಮಗ ಅಥವಾ ಮಗಳು ಅರ್ಹರಿಲ್ಲದಿದ್ದಲ್ಲಿ ಅಥವಾ ಯಾವುದೇ ಸಮುಚಿತ ಕಾರಣಕ್ಕಾಗಿ ನೇಮಕಾತಿಯನ್ನು ಒಪ್ಪದಿದ್ದಲ್ಲಿ, ಮೃತ ಗ್ರಾಮ ಪಂಚಾಯತಿ ನೌಕರಳ ಪತಿಯು ಆಕೆಗೂ ಮೊದಲೇ ಮೃತಪಟ್ಟಿದ್ದಲ್ಲಿ, ಮಕ್ಕಳ ವಯಸ್ಸಿಗನುಗುಣವಾಗಿ ಆದ್ಯತೆಯನ್ನು ನೀಡತಕ್ಕದ್ದು. ಮೃತ ಮಹಿಳಾ ಅವಿವಾಹಿತ ಗ್ರಾಮ ಪಂಚಾಯತಿ ನೌಕರಳ ಸಂದರ್ಭದಲ್ಲಿ ಆಕೆಗೆ ಅವಲಂಬಿತರಾಗಿದ್ದ ಮತ್ತು ಆಕೆಯೊಂದಿಗೆ ವಾಸವಾಗಿದ್ದ ಆಕೆಯ ತಂದೆ ಅಥವಾ ತಾಯಿಯು ಆಯ್ಕೆ ಮಾಡಿದ ಅಥವಾ ಅವರ ಆಯ್ಕೆಯಲ್ಲಿ ಭಿನ್ನಾಭಿಪ್ರಾಯವಿದ್ದಲ್ಲಿ, ಆಕೆಯ ತಾಯಿಯು ಆಯ್ಕೆ ಮಾಡಿದ ಸಹೋದರ ಅಥವಾ ಸಹೋದರಿ, ನೌಕರಳ ತಂದೆ/ ತಾಯಿ ಆಕೆಗೂ ಮೊದಲೇ ಮೃತಪಟ್ಟಿದಲ್ಲಿ, ಸಹೋದರ/ ಸಹೋದರಿಯ ವಯಸ್ಸಿಗನುಗುಣವಾಗಿ ಆದ್ಯತೆಯನ್ನು ನೀಡತಕ್ಕದ್ದು.

ಅನುಕಂಪ ಆಧಾರಿತ ಉದ್ಯೋಗದ ಮಾಹಿತಿ

ಅನುಕಂಪ ಆಧಾರಿತ ಉದ್ಯೋಗದ ಮಾಹಿತಿ

ಮೃತ ವಿವಾಹಿತ ಗ್ರಾಮ ಪಂಚಾಯತಿ ನೌಕರನ/ ಳ ಪತ್ನಿ /ಪತಿ ಈಗಾಗಲೇ ಮೃತಪಟ್ಟಿದ್ದು ಮತ್ತು ಅವರಿಗೆ ಅಪ್ರಾಪ್ತ ವಯಸ್ಕ ಮಕ್ಕಳಿದ್ದ ಸಂದರ್ಭದಲ್ಲಿ, ಸಂಬಂಧಿತ ಕಾನೂನಿನ ಉಪಬಂಧಗಳನ್ವಯ ಆ ಮಕ್ಕಳೊಂದಿಗೆ ವಾಸಿಸುವ ಹಾಗೂ ಅವರನ್ನು ಪೋಷಿಸುವ ಪುಮಾಣೀಕೃತ ಪೋಷಕರು. ಮೃತ ನೌಕರನ ಕಾನೂನು ಬಾಹಿರ ಎರಡನೆ ಪತ್ನಿ ಮತ್ತು ತದನಂತರದ ಪತ್ನಿಗೆ ಜನಿಸಿದ ಮಕ್ಕಳು. ಪರಂತು, ಈ ನಿಯಮಗಳ ಅಡಿಯಲ್ಲಿ ನೇಮಕಾತಿಯನ್ನು ಕೋರುವ ಮೃತ ಗ್ರಾಮ ಪಂಚಾಯತಿ ನೌಕರನ/ ಳ ವಿಧವಾ ಪತ್ನಿ ಅಥವಾ ವಿಧುರ ಪತಿಗೆ ಈ ಮೇಲೆ ನಿರ್ದಿಷ್ಟಪಡಿಸಿರುವ ವಯೋಮಿತಿಯು ಅನ್ವಯವಾಗತಕ್ಕದಲ್ಲ. ಈ ಅವಲಂಬಿತರ ವಯೋಮಿತಿಯು ಅರ್ಜಿ ಸಲ್ಲಿಸುವ ಸಮಯದಲ್ಲಿ 55 ವರ್ಷಗಳನ್ನು ಮೀರತಕ್ಕದ್ದಲ್ಲ.

ಗ್ರಾಮ ಪಂಚಾಯತಿಯಲ್ಲಿ ಬಹುಪಯೋಗಿ ಹುದ್ದೆ ಕ್ಲೀನರ್ಸ್ ನೇಮಕಾತಿ ವಿಧಾನ. 7ನೇ ತರಗತಿ ಪರೀಕ್ಷೆಯಲ್ಲಿಗಳಿಸಿದ ಅಂಕಗಳನ್ನು ಆಧರಿಸಿ ನೇರ ನೇಮಕಾತಿ ಮೂಲಕ, ಕನ್ನಡವನ್ನು ಒಂದು ಭಾಷೆಯನ್ನಾಗಿ 7ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವವರನ್ನು ನೇಮಕ ಮಾಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+