4055 ಅತಿಥಿ ಉಪನ್ಯಾಸಕರ ನೇಮಕಾತಿ; ಯಾವ ಜಿಲ್ಲೆಗೆ ಎಷ್ಟು ಹುದ್ದೆಗಳು?
ಬೆಂಗಳೂರು, ಜೂನ್ 05; ಕರ್ನಾಟಕ ಸರ್ಕಾರ 2023-24ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ಉಪನ್ಯಾಸಕರುಗಳ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರುಗಳನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಆದೇಶ ಹೊರಡಿಸಿದೆ. ಯಾವ ಜಿಲ್ಲೆಗೆ ಎಷ್ಟು ಹುದ್ದೆಗಳು ಎಂದು ಸಹ ಹೇಳಿದೆ. ಒಟ್ಟು 4055 ಹುದ್ದೆ ಭರ್ತಿ ಮಾಡಲಾಗುತ್ತಿದೆ.
ಸರ್ಕಾರದ ಆದೇಶ ದಿನಾಂಕ 02/06/2023, ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿ ಪತ್ರ ದಿನಾಂಕ 19/01/2023 ಮತ್ತು ಜಿಲ್ಲಾ ಉಪ ನಿರ್ದೇಶಕರಿಂದ ಬಂದ ವರದಿಗಳನ್ನು ಉಲ್ಲೇಖಿಸಿ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ಉಪನ್ಯಾಸಕರ ಹುದ್ದೆಗಳು, ಬಡ್ತಿ, ವಯೋನಿವೃತ್ತಿ, ನಿಧನ ಹಾಗೂ ಇತರೆ ಕಾರಣಗಳಿಂದ ತೆರವಾಗಬಹುದಾದ ಉಪನ್ಯಾಸಕರ ಹುದ್ದೆಗಳು ಹಾಗೂ ಹೊಸ ಸಂಯೋಜನೆಗಳಿಗೆ ಹುದ್ದೆ ಮಂಜೂರಾಗದ ವಿಷಯಗಳಿಗೆ ನೇಮಕ ಮಾಡಿಕೊಳ್ಳಬೇಕಾದ ಅತಿಥಿ ಉಪನ್ಯಾಸಕರ ಸಂಖ್ಯೆ ನಿರ್ಧರಿಸಲಾಗಿದೆ.

ಒಟ್ಟು 4055 ಉಪನ್ಯಾಸಕರ ಹುದ್ದೆಗಳನ್ನು ಮಾಸಿಕ 12,000 ರೂ. ಗೌರವಧನದ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಆದೇಶಿಸಲಾಗಿದೆ. ಮಾರ್ಚ್ 2024ರ ಅಂತ್ಯಕ್ಕೆ ಖಾಲಿಯಾಗುವ ಹುದ್ದೆಗಳಿಗೆ, ಕಾರ್ಯಭಾರ ಕಡಿಮೆ ಇರುವ ವಿವಿಧ ವಿಷಯಗಳ ಉಪನ್ಯಾಸಕರುಗಳನ್ನು ಸರಿದೂಗಿಸಿದ ನಂತರ ಲಭ್ಯವಾಗುವ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಲು ಅನುಮತಿಸಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ವಿವಿಧ ವಿಷಯಗಳ ಉಪನ್ಯಾಸಕರ ಹುದ್ದೆಗಳನ್ನು ಕಡಿಮೆ ಕಾರ್ಯಭಾರವಿರುವ ವಿಷಯಗಳ ಉಪನ್ಯಾಸಕರುಗಳಿಂದ ಸರಿದೂಗಿಸಿದ ನಂತರ
ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕಾದ ಸಂಖ್ಯೆ, ಸಂಯೋಜನೆಯನ್ನು ಮಂಜೂರು ಮಾಡಿ ಹುದ್ದೆ ಮಂಜೂರು ಮಾಡದ ವಿಷಯಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕಾದ ಸಂಖ್ಯೆಯನ್ನು ಹಾಗೂ ನೇಮಕ ಮಾಡಿಕೊಳ್ಳಬೇಕಾದ ಒಟ್ಟು ಅತಿಥಿ ಉಪನ್ಯಾಸಕರ ಸಂಖ್ಯೆ ಮಾಹಿತಿಯನ್ನು ಒದಗಿಸುವಂತೆ ಈ ಹಿಂದೆ ಜಿಲ್ಲಾ ಉಪನಿರ್ದೇಶಕರುಗಳನ್ನು ಕೋರಲಾಗಿತ್ತು.

ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನೇಮಕಾತಿ:
* ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ. 55ರಷ್ಟು ಅಂಕಗಳನ್ನು ಪಡೆದುಕೊಂಡ ಅಭ್ಯರ್ಥಿಗಳನ್ನು ಅತಿಥಿ ಉಪನ್ಯಾಸಕರಾಗಿ ನೇಮಕ ಮಾಡಿಕೊಳ್ಳುವುದು. ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ, ಕಡಿಮೆ ಕಾರ್ಯಭಾರ ಹೊಂದಿರುವ ವಿಷಯಗಳ ಉಪನ್ಯಾಸಕರನ್ನು ಜಿಲ್ಲೆಯ ಇತರೆ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನಿಯೋಜಿಸಿದ ನಂತರ ಉಳಿಕೆ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸುವುದು.
* ಉಪನ್ಯಾಸಕರೇ ಇಲ್ಲದಿರುವ ಕಡೆ ಹಾಗೂ ನಿಯೋಜನೆಯಂತಹ ಬದಲಿ ವ್ಯವಸ್ಥೆ ಮಾಡಲು ಸಾಧ್ಯವಿಲ್ಲದಿರುವ ಕಡೆ ಮಾತ್ರ ಅತಿಥಿ ಉಪನ್ಯಾಸಕರನ್ನು ಉಪಯೋಗಿಸಿಕೊಳ್ಳಬಹುದು. ಮಂಜೂರಾದ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳಿಗೆ ಹಾಗೂ ಸಂಯೋಜನೆಯನ್ನು ಮಂಜೂರು ಮಾಡಿ ಹುದ್ದೆ ಮಂಜೂರಾಗದ ವಿಷಯಗಳಿಗೆ ಮಾತ್ರ ಅತಿಥಿ ಉಪನ್ಯಾಸಕರ ಸೇವೆಯನ್ನು ಉಪಯೋಗಿಸಿಕೊಳ್ಳತಕ್ಕದ್ದು.
* ಪ್ರತಿ ಅತಿಥಿ ಉಪನ್ಯಾಸಕರಿಗೆ ವಾರದಲ್ಲಿ ಗರಿಷ್ಠ 10 ಗಂಟೆಗಳ ಕಾರ್ಯಭಾರವನ್ನು ಮಾತ್ರ ನಿರ್ವಹಿಸಲು ಅನುಮತಿ ನೀಡಬಹುದು. ಯಾವುದೇ ಕಾಲೇಜಿನಲ್ಲಿ ಪ್ರತಿ ವಿಷಯದಲ್ಲಿ ವಾರದಲ್ಲಿ 10/12 ಗಂಟೆಗಳಿಗಿಂತ ಹೆಚ್ಚು ಕಾರ್ಯಭಾರವಿದ್ದಲ್ಲಿ ಇಬ್ಬರು ಅತಿಥಿ ಉಪನ್ಯಾಸಕರನ್ನು ಉಪಯೋಗಿಸಿಕೊಳ್ಳಬಹುದು.
* ಈ ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂ ಉಪನ್ಯಾಸಕರ ನೇಮಕಾತಿ ಆಗುವವರೆಗೆ ಅಥವಾ 2023-24ನೇ ಶೈಕ್ಷಣಿಕ ವರ್ಷದ ಅಂತ್ಯದ ವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮಾತ್ರ ಬಳಸಿಕೊಳ್ಳತಕ್ಕದ್ದು. ಸರ್ಕಾರದ ನಿಯಮಗಳಲ್ಲಿ ಈ ಅವಧಿಯಲ್ಲಿ ಖಾಯಂ ಉಪನ್ಯಾಸಕರು ನೇಮಕಾತಿ ಹೊಂದಿ ಕರ್ತವ್ಯಕ್ಕೆ ಹಾಜರಾದ ತಕ್ಷಣದಿಂದ ಅತಿಥಿ ಉಪನ್ಯಾಸಕರ ಕಾರ್ಯ ನಿರ್ವಹಣೆಯು ತಂತಾನೆ ರದ್ದಾಗುತ್ತದೆ.
* ಪ್ರಾಚಾರ್ಯರ ಬೋಧನಾ ವಿಷಯವೇ ಇರುವ ಹುದ್ದೆ ಖಾಲಿ ಇದ್ದಲ್ಲಿ, ಅಂತಹ ಹುದ್ದೆಯ ಕಾರ್ಯಭಾರವು ವಾರದಲ್ಲಿ 10 ಗಂಟೆಗೆ ಮೀರದಿದ್ದಲ್ಲಿ ಅತಿಥಿ ಉಪನ್ಯಾಸಕರ ಸೇವೆಯನ್ನು ಬಳಸುವಂತಿಲ್ಲ.ಆಯಾ ವಿಷಯದಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಲು ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳು ಮುಂದೆ ಬಂದಲ್ಲಿ ಅಂತಹವರ ಪೈಕಿ ಸ್ನಾತಕೋತ್ತರ ಪದವಿಯಲ್ಲಿ ಹೆಚ್ಚಿನ ಅಂಕ ಪಡೆವರನ್ನು ಆಯಾ ಕಾಲೇಜಿನ ಪ್ರಾಚಾರ್ಯರು ಹಾಗೂ ಕಾಲೇಜಿನ ಹಿರಿಯ ಉಪನ್ಯಾಸಕರು ಇರುವ ಸಮಿತಿಯ ಮೂಲಕ ಆಯ್ಕೆ ಮಾಡತಕ್ಕದ್ದು.
* ಅತಿಥಿ ಉಪನ್ಯಾಸಕರಿಗೆ ನೀಡುವ ಗೌರವ ಧನವನ್ನು ವೇತನ ಲೆಕ್ಕ ಶೀರ್ಷಿಕೆ 2202-02-109-0-13-324(ಗೌರವಧನ) ಇದರಡಿ ಭರಿಸುವುದು. ಅತಿಥಿ ಉಪನ್ಯಾಸಕರುಗಳ ಸೇವೆಯನ್ನು ಬಳಸಿಕೊಳ್ಳುವಾಗ ಅವರಿಗೆ ಸಕ್ಷಮ ಪ್ರಾಧಿಕಾರದ ಆದೇಶವಿಲ್ಲದೆ ಯಾವುದೇ ಆದೇಶವನ್ನು ನೀಡಬಾರದು. ಇವರ ಹೆಸರುಗಳನ್ನು ಖಾಯಂ ಸಿಬ್ಬಂದಿಯ ಹಾಜರಾತಿ ವಹಿಯಲ್ಲಿ ನಮೂದಿಸಬಾರದು. ಗೌರವಧನ ವಿತರಿಸಿದ್ದಕ್ಕೆ ಅವರಿಂದ ಸೂಕ್ತ ರಸೀದಿಯನ್ನು ಪಡೆದುಕೊಳ್ಳುವುದು.
* ಈ ರೀತಿ ನೇಮಕ ಮಾಡಿಕೊಂಡ ಉಪನ್ಯಾಸಕರಿಗೆ ಯಾವುದೇ ಸೇವಾ ಪ್ರಮಾಣ ಪತ್ರ ನೀಡಬಾರದು ಹಾಗೂ ಸೇವಾ ಪುಸ್ತಕ ತೆರೆಯಬಾರದು. ಯಾವುದೇ ಸರ್ಕಾರಿ/ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ/ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರನ್ನು ಅತಿಥಿ ಉಪನ್ಯಾಸಕರಾಗಿ ನೇಮಿಸಿಕೊಳ್ಳತಕ್ಕದ್ದಲ್ಲ. ಈ ರೀತಿ ಆಯ್ಕೆಯಾಗುವ ಅತಿಥಿ ಉಪನ್ಯಾಸಕರು, ಅತಿಥಿ ಉಪನ್ಯಾಸಕರಾಗಿ ಸಲ್ಲಿಸುವ ಸೇವೆಯು ಇತರ ಯಾವುದೇ ಸರ್ಕಾರಿ ಸೇವಾ ಸಕ್ರಮಾತಿಗೆ ಪರಿಗಣಿಸತಕ್ಕದ್ದಲ್ಲ.
* ದೀರ್ಘಾವಧಿ ರಜೆಯಿಂದ ಉಂಟಾಗುವ ಖಾಲಿ ಹುದ್ದೆಗೆ ಅಥವಾ ಅನಧಿಕೃತ ಗೈರು ಹಾಜರಿಯಿಂದ ಉಂಟಾಗುವ ಖಾಲಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಬಾರದು. ನೇಮಕ ಮಾಡಿಕೊಂಡ ಅತಿಥಿ ಉಪನ್ಯಾಸಕರ ವಿವರಗಳನ್ನು ಮಾತ್ರ ಕಡ್ಡಾಯವಾಗಿ ಜಿಲ್ಲಾ ಉಪನಿರ್ದೇಶಕರಿಗೆ ಕಳುಹಿಸತಕ್ಕದ್ದು. ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಡಿಮೆ ಕಾರ್ಯಭಾರವಿರುವ ವಿಷಯಗಳ ಉಪನ್ಯಾಸಕರುಗಳನ್ನು ಜಿಲ್ಲೆಯ ಅವಶ್ಯಕ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯಭಾರ ಸರಿದೂಗಿಸಲು ತಿಳಿಸಿದೆ. ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರುಗಳು ಸದರಿ ಮಾಹಿತಿಯನ್ನು ಜಿಲ್ಲಾ ಉಪನಿರ್ದೇಶಕರುಗಳಿಗೆ ಒದಗಿಸತಕ್ಕದ್ದು.
* ಸದರಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ನಿಯಮ ಹಾಗೂ ಇಲಾಖೆಯ ನಿರ್ದೇಶನಗಳನ್ನು ಪಾಲಿಸಲು ಆದೇಶಿಸಿದೆ. ತಪ್ಪಿದಲ್ಲ, ಅಂತಹ ಜಿಲ್ಲಾ ಉಪನಿರ್ದೇಶಕರು/ ಪ್ರಾಂಶುಪಾಲರ ಮೇಲೆ ನಿಯಮಾನುಸಾರ ಸರ್ಕಾರಕ್ಕೆ ಶಿಸ್ತುಕ್ರಮ ಜರುಗಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು.
ಜಿಲ್ಲಾವಾರು ವಿವರಗಳು; ಪದವಿ ಪೂರ್ವ ಶಿಕ್ಷಣ ಇಲಾಖೆ ಯಾವ ಜಿಲ್ಲೆಗೆ ಎಷ್ಟು? ಅತಿಥಿ ಉಪನ್ಯಾಸಕರ ನೇಮಕಾತಿ ಎಂದು ಸಹ ಆದೇಶದಲ್ಲಿ ತಿಳಿಸಿದೆ. ಬೆಂಗಳೂರು ಉತ್ತರ 80, ಬೆಂಗಳೂರು ದಕ್ಷಿಣ 45, ಬೆಂಗಳೂರು ಗ್ರಾಮಾಂತರ 70, ರಾಮನಗರ 150, ಬಳ್ಳಾರಿ 160, ಚಿಕ್ಕೋಡಿ 150, ಬೆಳಗಾವಿ 140, ಬಾಗಲಕೋಟೆ 190, ವಿಜಯಪುರ 130, ಬೀದರ್ 50, ದಾವಣಗೆರೆ 150, ಚಿತ್ರದುರ್ಗ 70, ಚಿಕ್ಕಮಗಳೂರು 160 ಹುದ್ದೆಗಳು.
ಗದಗ 95, ಹಾವೇರಿ 120, ಧಾರವಾಡ 60, ಕಲಬುರಗಿ 110, ಯಾದಗಿರಿ 100, ಹಾಸನ 180, ಚಿಕ್ಕಬಳ್ಳಾಪುರ 100, ಕೋಲಾರ 180, ಚಾಮರಾಜನಗರ 95, ಮೈಸೂರು 150, ಮಂಡ್ಯ 130, ಉತ್ತರ ಕನ್ನಡ 140, ಕೊಪ್ಪಳ 140, ರಾಯಚೂರು 120, ದಕ್ಷಿಣ ಕನ್ನಡ 240, ಉಡುಪಿ 200, ಶಿವಮೊಗ್ಗ 90, ತುಮಕೂರು 200, ಕೊಡಗು 60 ಹುದ್ದೆಗಳು.
-
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ












Click it and Unblock the Notifications