Karnataka government jobs; 5151 ಹುದ್ದೆಗಳು ಭರ್ತಿ, ವಿವರಗಳು
ಬೆಂಗಳೂರು, ಜನವರಿ 12: ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸಿಹಿಸುದ್ದಿ. ರಾಜ್ಯದಲ್ಲಿನ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆ ಶೀಘ್ರವೇ ಆರಂಭವಾಗಲಿದೆ. ಯಾವ ಇಲಾಖೆಯಲ್ಲಿ ಯಾವ-ಯಾವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ವಿವರ ನೀಡಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಣೆ ಮೂಲಕ ಈ ಕುರಿತು ಮಾಹಿತಿ ನೀಡಿದೆ. ಈ ಪ್ರಕಟಣೆ ಕರ್ನಾಟಕ ರಾಜ್ಯದಲ್ಲಿನ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಎಂಬ ವಿಷಯವನ್ನು ಒಳಗೊಂಡಿದೆ. ನೇರ ನೇಮಕಾತಿ ಸಂಬಂಧ ವಿವರವಾದ ಅಧಿಸೂಚನೆಯನ್ನು ಶೀಘ್ರವೇ ಪ್ರಕಟಿಸಲಾಗುತ್ತದೆ ಎಂದು ಹೇಳಿದೆ.

ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ ಸಂಸ್ಥೆಗಳಲ್ಲಿ ಖಾಲಿ ಇರುವ ಮಿಕ್ಕುಳಿದ ವೃಂದ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ (ಸ್ಥಳೀಯ) ವೃಂದದ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಸಂಬಂಧ ವಿವರವಾದ ಅಧಿಸೂಚನೆ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದೆ.
ಸಂಸ್ಥೆ ಹಾಗೂ ಒಟ್ಟು ಹುದ್ದೆಗಳ ವಿವರಗಳು
* ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ. ಸಹಾಯಕ ಇಂಜಿನಿಯರ್ (ಸಿವಿಲ್) 50, ಪ್ರಥಮ ದರ್ಜೆ ಲೆಕ್ಕ ಸಹಾಯಕ (ಗ್ರೂಪ್-ಸಿ) 14.
* ಬಿಎಂಟಿಸಿಯಲ್ಲಿ ನಿರ್ವಾಹಕ 2500, ಸಹಾಯಕ ಲೆಕ್ಕಿಗ, ಸ್ಟಾಫ್ ನರ್ಸ್, ಫಾರ್ಮಸಿಸ್ಟ್ ತಲಾ 1 ಹುದ್ದೆಗಳ ನೇಮಕಾತಿ.
* ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ. ಸಹಾಯಕ ಗ್ರಂಥಪಾಲಕ 1, ಜೂನಿಯರ್ ಪ್ರೋಗ್ರಾಮರ್ 5, ಸಹಾಯಕ ಇಂಜಿನಿಯರ್ 1, ಸಹಾಯಕ 12, ಕಿರಿಯ ಸಹಾಯಕ 25.
* ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ. ಸಹಾಯಕ ಆಡಳಿತಾಧಿಕಾರಿ (ದರ್ಜೆ-2) 3. ಸಹಾಯಕ ಲೆಕ್ಕಾಧಿಕಾರಿ 2, ಸಹಾಯಕ ಅಂಕಿಸಂಖ್ಯಾಧಿಕಾರಿ 1, ಸಹಾಯಕ ಉಗ್ರಾಣಾಧಿಕಾರಿ 2, ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ 7, ಸಹಾಯಕ ಕಾನೂನು ಅಧಿಕಾರಿ 7, ಸಹಾಯಕ ಅಭಿಯಂತರು (ಕಾಮಗಾರಿ) 1 ಹುದ್ದೆಗಳ ಭರ್ತಿ.
* ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ. ಸಹಾಯಕ ತಾಂತ್ರಿಕ ಶಿಲ್ಪಿ 11, ಸಹಾಯಕ ಸಂಚಾರ ವ್ಯವಸ್ಥಾಪಕ 11, ಕಿರಿಯ ಅಭಿಯಂತರರು (ಕಾಮಗಾರಿ) 5, ಕಿರಿಯ ಅಭಿಯಂತರರು (ವಿದ್ಯುತ್) 8, ಗಣಕ ಮೇಲ್ವಿಚಾರಕ 14, ಸಂಚಾರ ನಿರೀಕ್ಷಕ 18, ಚಾರ್ಜ್‌ಮನ್ 52, ಸಹಾಯಕ ನಿರೀಕ್ಷಕ (ದರ್ಜೆ-3) 28, ಕುಶಲ ಕರ್ಮಿ (ದರ್ಜೆ-3) 80, ತಾಂತ್ರಿಕ ಸಹಾಯಕ (ದರ್ಜೆ-3) 500 ಹುದ್ದೆಗಳು.
* ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್. ಅಧಿಕಾರಿ (ಲೆಕ್ಕಪತ್ರ) (ಮಾರುಕಟ್ಟೆ) (ಗ್ರೂಪ್-ಬಿ) 6. ಅಧಿಕಾರಿ (ಲೆಕ್ಕಪತ್ರ) (ಗ್ರೂಪ್-ಬಿ) 1, ಕಿರಿಯ ಅಧಿಕಾರಿ ಕ್ಯೂಎಡಿ 2, ಕಿರಿಯ ಅಧಿಕಾರಿ (ಆರ್ & ಡಿ) 1, ಕಿರಿಯ ಅಧಿಕಾರಿ (ಉತ್ಪಾದನೆ ನಿರ್ವಹಣೆ) 2, ಕಿರಿಯ ಅಧಿಕಾರಿ (ಸಾಮಾಗ್ರಿ/ ಉಗ್ರಾಣ ವಿಭಾಗ) 2, ಉಪ ಪ್ರಧಾನ ವ್ಯವಸ್ಥಾಪಕರು (ಮಾರುಕಟ್ಟೆ) (ಗ್ರೂಪ್-ಎ) 1, ಸಹಾಯಕ ಪ್ರಧಾನ ವ್ಯವಸ್ಥಾಪಕರು (ಮಾರುಕಟ್ಟೆ) (ಗ್ರೂಪ್-ಎ) 1, ನಿರ್ವಾಹಕರು (ಮಾರುಕಟ್ಟೆ) (ಗ್ರೂಪ್-ಎ) 1, ಅಧಿಕಾರಿ (ಮಾರುಕಟ್ಟೆ) (ಗ್ರೂಪ್-ಬಿ) 2, ಕಿರಿಯ ಅಧಿಕಾರಿ (ಮಾರುಕಟ್ಟೆ) (ಗ್ರೂಪ್-ಸಿ) 1,ಮಾರಾಟ ಪ್ರತಿನಿಧಿ (ಮಾರುಕಟ್ಟೆ) (ಗ್ರೂಪ್-ಸಿ) 4, ಕಿರಿಯ ಮಾರಾಟ ಪ್ರತಿನಿಧಿ (ಮಾರುಕಟ್ಟೆ) (ಗ್ರೂಪ್-ಸಿ) 3, ಅಸಿಸ್ಟೆಂಟ್ ಆಪರೇಟರ್ (ಅರೆಕುಶಲ) (ಗ್ರೂಪ್-ಡಿ) 11 ಹುದ್ದೆಗಳು.
* ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ. ಸಹಾಯಕ ಲೆಕ್ಕಿಗ 15, ನಿರ್ವಾಹಕ 1737.
ಈ ಎಲ್ಲಾ ಹುದ್ದೆಗಳಿಗೆ ವಿದ್ಯಾರ್ಹತೆ, ವೇತನ ಶ್ರೇಣಿ, ಇಲಾಖೆವಾರು, ವೃಂದವಾರು ವರ್ಗೀಕರಣ ಹಾಗೂ ಇತರೆ ಪರೀಕ್ಷಾ ಸಂಬಂಧ ಮಾಹಿತಿಯನ್ನು ವಿವಿವರವಾದ ಅಧಿಸೂಚನೆಯಲ್ಲಿ ಪ್ರಕಟಿಸಲಾಗುವುದು. ಮೇಲ್ಕಂಡ ಹುದ್ದೆಗಳ ಸಂಖ್ಯೆ ಹಾಗೂ ವೃಂದ ತಾತ್ಕಾಲಿಕವಾಗಿದ್ದು, ಬದಲಾವಣೆ ಷರತ್ತಿಗೆ ಒಳಪಟ್ಟಿರುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪಷ್ಟಪಡಿಸಿದೆ.












Click it and Unblock the Notifications