ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ನೇಮಕಾತಿ ನಿಯಮ ತಿದ್ದುಪಡಿ, ವಿವರ

ಬೆಂಗಳೂರು, ಜನವರಿ 11: ಕರ್ನಾಟಕ ಸರ್ಕಾರ ರಾಜ್ಯಪತ್ರದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕರ್ನಾಟಕ ಸಣ್ಣ ನೀರಾವರಿ ಇಲಾಖೆ ಸೇವೆಗಳ (ವೃಂದ ಮತ್ತು ನೇಮಕಾತಿ) ನಿಯಮಗಳು, 2025ರ ಕರಡನ್ನು ಪ್ರಕಟಿಸಿದೆ. ಈ ನಿಯಮಗಳು ಅಧಿಕೃತ ರಾಜ್ಯಪತ್ರದಲ್ಲಿ ಅಂತಿಮ ಪ್ರಕಟಣೆಯ ದಿನಾಂಕದಿಂದ ಜಾರಿಗೆ ಬರತಕ್ಕದ್ದು ಎಂದು ಹೇಳಿದೆ.

ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಪಂಪನಗೌಡ ಮೇಲ್ಸೀಮೆ ಸರ್ಕಾರದ ಜಂಟಿ ಕಾರ್ಯದರ್ಶಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಆದೇಶವನ್ನು ಹೊರಡಿಸಿದ್ದಾರೆ.

Karnataka Government Announces Recruitment Rules For Minor Irrigation Department

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ-14) ರ 8ನೇ ಪ್ರಕರಣದೊಂದಿಗೆ ಓದಲಾದ, 3ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ರಚಿಸಲು ಉದ್ದೇಶಿಸಿರುವ ಕರ್ನಾಟಕ ಸಣ್ಣ ನೀರಾವರಿ ಇಲಾಖೆ ಸೇವೆಗಳ (ವೃಂದ ಮತ್ತು ನೇಮಕಾತಿ) ನಿಯಮಗಳು, 2025ರ ಕರಡನ್ನು, ಸದರಿ ಅಧಿನಿಯಮದ 3ನೇ ಪ್ರಕರಣದ (2)ನೇ ಉಪ-ಪ್ರಕರಣದ (ಎ) ಖಂಡದ ಮೂಲಕ ಅಗತ್ಯಪಡಿಸಲಾದಂತೆ, ಅದರಿಂದ ಬಾಧಿತರಾಗಬಹುದಾದ ಎಲ್ಲ ವ್ಯಕ್ತಿಗಳ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಲಾಗಿದೆ ಹಾಗೂ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಣೆಯ ದಿನಾಂಕದಿಂದ 15 ದಿನಗಳ ತರುವಾಯ ಸದರಿ ಕರಡನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ಸೂಚನೆಯನ್ನು ನೀಡಲಾಗಿದೆ ಎಂದು ಹೇಳಿದೆ.

ನಿರ್ದಿಷ್ಟಪಡಿಸಿರುವ ಅವಧಿಯು ಮುಕ್ತಾಯವಾಗುವುದಕ್ಕೆ ಮುಂಚೆ, ಸದರಿ ಕರಡು ನಿಯಮಗಳಿಗೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಯಿಂದ ರಾಜ್ಯ ಸರ್ಕಾರವು ಸ್ವೀಕರಿಸಬಹುದಾದ ಯಾವುದೇ ಆಕ್ಷೇಪಣೆ ಅಥವಾ ಸಲಹೆಗಳನ್ನು ರಾಜ್ಯ ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸರ್ಕಾರದ ಕಾರ್ಯದರ್ಶಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 208, 2ನೇ ಮಹಡಿ, ಅಂಬೇಡ್ಕರ್ ವೀಧಿ, ವಿಕಾಸ ಸೌಧ, ಬೆಂಗಳೂರು-560001 ಈ ವಿಳಾಸಕ್ಕೆ ಕಳುಹಿಸಬಹುದು.

ಕರಡು ನಿಯಮಗಳು: ಈ ನಿಯಮಗಳನ್ನು ಕರ್ನಾಟಕ ಸಣ್ಣ ನೀರಾವರಿ ಇಲಾಖೆ ಸೇವೆಗಳ (ವೃಂದ ಮತ್ತು ನೇಮಕಾತಿ) ನಿಯಮಗಳು, 2025 ಎಂದು ಕರೆಯತಕ್ಕದ್ದು.

ಈ ನಿಯಮಗಳ ಪ್ರಾರಂಭದ ದಿನಾಂಕದಂದು ಮತ್ತು ಅಂಥ ಪ್ರಾರಂಭದ ದಿನಾಂಕದಿಂದ ಹಾಗೆ 45 ದಿನಗಳ ಅವಧಿಯೊಳಗೆ ಸಣ್ಣ ನೀರಾವರಿ ಇಲಾಖೆಯಲ್ಲಿ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಜಲಸಂಪನ್ಮೂಲ ಇಲಾಖೆಯ ನೌಕರರು ಹಾಗೂ ಲೋಕೋಪಯೋಗಿ ಇಲಾಖೆ ಅಥವಾ ಜಲಸಂಪನ್ಮೂಲ ಇಲಾಖೆಯಿಂದ ನೇಮಕಗೊಂಡ ನೌಕರರು ಸಣ್ಣ ನೀರಾವರಿ ಇಲಾಖೆಯಲ್ಲಿ ವಿಲೀನಗೊಳ್ಳಲು ಇಚ್ಚಿಸಿದಲ್ಲಿ (ನಿರ್ದಿಷ್ಟಪಡಿಸಿದಂತೆ). ಕರ್ನಾಟಕ ಸಣ್ಣ ನೀರಾವರಿ ಸೇವೆಗಳಲ್ಲಿ ವಿಲೀನಗೊಳ್ಳಲು ರದ್ದುಪಡಿಸಲಾಗದ ಆಯ್ಕೆಯನ್ನು ಚಲಾಯಿಸತಕ್ಕದ್ದು, ಹಾಗೆ ವಿಲೀನಗೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿರುವ ವ್ಯಕ್ತಿಗಳ ಜೇಷ್ಠತೆಯನ್ನು, ಕರ್ನಾಟಕ ಸರ್ಕಾರಿ ನೌಕರರ (ಜೇಷ್ಠತಾ) ನಿಯಮಗಳು, 1957ರೊಂದಿಗೆ ಅನುಗುಣವಾಗಿ ಅವರ ಮಾತ್ರ ಇಲಾಖೆಯಲ್ಲಿನ ಆಂತರಿಕ ಜೇಷ್ಠತೆಯನ್ನು ಪರಿಗಣಿಸಿ ನಿರ್ಧರಿಸತಕ್ಕದ್ದು, ಕರ್ನಾಟಕ ಸಣ್ಣ ನೀರಾವರಿ ಸೇವೆಗಳ ಇಲಾಖೆಯಲ್ಲಿ ವಿಲೀನಗೊಳ್ಳಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸದ ನೌಕರರನ್ನು ಈ ಸೇವೆಯಲ್ಲಿ 'ನಿಯೋಜನೆಯಲ್ಲಿದ್ದಂತೆ' ಎಂದು ಪರಿಗಣಿಸತಕ್ಕದ್ದು.

ನೇಮಕಾತಿ ವಿಧಾನ ಮತ್ತು ಕನಿಷ್ಠ ವಿದ್ಯಾರ್ಹತೆ ಇತ್ಯಾದಿ. ಕರ್ನಾಟಕ ಸಣ್ಣ ನೀರಾವರಿ ಸೇವೆಗಳ ಇಲಾಖೆಯು ನಿರ್ದಿಷ್ಟಪಡಿಸಿರುವ ಹುದ್ದೆಗಳ ಪ್ರವರ್ಗಗಳು ಮತ್ತು ವೇತನ ಶ್ರೇಣಿಗಳನ್ನು ಒಳಗೊಂಡಿರತಕ್ಕದ್ದು, ಹುದ್ದೆಗಳ ಸಂಖ್ಯೆ, ನೇಮಕಾತಿ ವಿಧಾನ ಮತ್ತು ಕನಿಷ್ಠ ವಿದ್ಯಾರ್ಹತೆಗಳು ನಮೂದಿಸಿರುವಂತೆ ನಿರ್ದಿಷ್ಟಪಡಿಸಿರತಕ್ಕದ್ದು.

ಕರ್ನಾಟಕ ಜಲಸಂಪನ್ಮೂಲ ಸೇವೆಗಳು (ನೇಮಕಾತಿ) ನಿಯಮಗಳು, 2014ರ ತಿದ್ದುಪಡಿ. ಈ ನಿಯಮಗಳ ಪ್ರಾರಂಭದ ದಿನಾಂಕದಂದು ಮತ್ತು ಆ ದಿನಾಂಕದಿಂದ, ಕರ್ನಾಟಕ ಜಲಸಂಪನ್ಮೂಲ ಸೇವೆಗಳಿಂದ ವರ್ಗಾವಣೆ ಹೊಂದಿರುವ ಈ ನಿಯಮಗಳ 3ನೇ ನಿಯಮದಲ್ಲಿ ನಮೂದಿಸಲಾದ ಹುದ್ದೆಗಳನ್ನು ಕರ್ನಾಟಕ ಜಲಸಂಪನ್ಮೂಲ ಸೇವೆಗಳು (ನೇಮಕಾತಿ) ನಿಯಮಗಳು, 2014ರಿಂದ ಬಿಟ್ಟುಬಿಡತಕ್ಕದ್ದು ಮತ್ತು ಸಂಖ್ಯಾ ಬಲವು ಅಧಿಸೂಚನೆಗಳಲ್ಲಿರುವಂತೆಯಿರತಕ್ಕದ್ದು.

ಈ ನಿಯಮಗಳಲ್ಲಿ ಏನೇ ಒಳಗೊಂಡಿದ್ದಾಗ್ಯೂ, ಈ ನಿಯಮಗಳ ಪ್ರಾರಂಭಕ್ಕೆ ಮುಂಚಿತವಾಗಿ ಸರ್ಕಾರದ ಆದೇಶಕ್ಕೆ ಅನುಗುಣವಾಗಿ ಹುದ್ದೆಗಳ ಯಾವುದೇ ಪ್ರವರ್ಗಗಳ ನೇಮಕಾತಿ ಅಥವ ನೌಕರಿ ಭರ್ತಿಗೆ ಈಗಾಗಲೇ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದರೆ, ಅವುಗಳನ್ನು ಈ ನಿಯಮಗಳಡಿ ಮಾಡಲಾದವುಗಳಾದರೆ ಹೇಗೋ ಹಾಗೆ ಉಳಿಸತಕ್ಕದ್ದು ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+