ನಿರುದ್ಯೋಗದಿಂದ ಚೇತರಿಕೆ ಕಂಡ ಕರ್ನಾಟಕ; ದೇಶದಲ್ಲೇ ಟಾಪ್‌

ಬೆಂಗಳೂರು, ಅಕ್ಟೋಬರ್ 22 : ಲಾಕ್ ಡೌನ್ ಮುಗಿದ ಬಳಿಕ ನಿರುದ್ಯೋಗ ಸಮಸ್ಯೆಯಿಂದ ಕರ್ನಾಟಕ ಬಹು ಬೇಗ ಚೇತರಿಕೆ ಕಾಣುತ್ತಿದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ನಿರುದ್ಯೋಗ ಪ್ರಮಾಣ ರಾಜ್ಯದಲ್ಲಿ ದಾಖಲಾಗಿತ್ತು.

ಭಾರತೀಯ ಆರ್ಥಿಕ ನಿಗಾ ಸಂಸ್ಥೆ ವರದಿಯಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ. ಏಪ್ರಿಲ್‌ನಲ್ಲಿ ದೇಶದ ನಿರುದ್ಯೋಗದ ಪ್ರಮಾಣ 23.5ರಷ್ಟಿತ್ತು. ಇದೇ ಸಮಯದಲ್ಲಿ ಕರ್ನಾಟಕದಲ್ಲಿ ಈ ಪ್ರಮಾಣ 29.8ರಷ್ಟಿತ್ತು.

ಸೆಪ್ಟೆಂಬರ್‌ನಲ್ಲಿ ದೇಶದಲ್ಲಿನ ನಿರುದ್ಯೋಗ ಪ್ರಮಾಣ 6.7ರಷ್ಟಿದೆ. ಕರ್ನಾಟಕದಲ್ಲಿನ ಪ್ರಮಾಣ ಶೇ 2.4ರಷ್ಟಿದೆ. ದೇಶದ ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕ ನಿರುದ್ಯೋಗದಿಂದ ಬೇಗ ಚೇತರಿಸಿಕೊಂಡಿದೆ.

Karnataka Emerged Out Of Unemployment Crisis After Lock Down

ರಾಜ್ಯದಲ್ಲಿ ಐಟಿ ಮತ್ತು ಡಿಜಿಟಲ್ ಸೇವೆಗಳ ಉದ್ಯೋಗಗಳು ಆರಂಭವಾಗಿವೆ. ಬೇರೆ ರಾಜ್ಯಗಳಿಗೆ ವಲಸೆ ಹೋದ ಕಾರ್ಮಿಕರು ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಇದರಿಂದಾಗಿ ನಿರುದ್ಯೋಗದಿಂದ ಚೇತರಿಕೆ ಕಂಡಿದೆ ಎಂದು ಭಾರತೀಯ ಆರ್ಥಿಕ ನಿಗಾ ಸಂಸ್ಥೆ ವರದಿ ಹೇಳಿದೆ.

ಸೆಪ್ಟೆಂಬರ್‌ನಲ್ಲಿ ಮಹಾರಾಷ್ಟ್ರದಲ್ಲಿ ನಿರುದ್ಯೋದ ಪ್ರಮಾಣ ಶೇ 4.55, ಗುಜರಾತ್‌ನಲ್ಲಿ ಶೇ 3.4 ಮತ್ತು ತಮಿಳುನಾಡಿನಲ್ಲಿ ಶೇ 5ರಷ್ಟಿದೆ. ಕರ್ನಾಟಕದಲ್ಲಿ ಮೇ ತಿಂಗಳಿನಲ್ಲಿ ಶೇ 21.7, ಜೂನ್‌ನಲ್ಲಿ 10.2ರಷ್ಟು, ಜುಲೈನಲ್ಲಿ 7.4 ರಷ್ಟು ನಿರುದ್ಯೋಗ ಪ್ರಮಾಣವಿತ್ತು.

ಲಾಕ್ ಡೌನ್ ಸಮಯದಲ್ಲಿ ಬೆಂಗಳೂರು ತೊರೆದು ಸಾವಿರಾರು ಜನರು ತವರು ರಾಜ್ಯ, ಊರುಗಳಿಗೆ ತೆರಳಿದ್ದರು. ನಗರದಲ್ಲಿ ವಾಣಿಜ್ಯ ಚಟುವಟಿಕೆಗಳು ಆರಂಭವಾದ ಬಳಿಕ ಜನರು ವಾಪಸ್ ಬರುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+