ಕಲಬುರಗಿ ರಂಗಾಯಣದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕಲಬುರಗಿ, ಜೂ. 22 : ಕಲಬುರಗಿಯ ರಂಗಾಯಣಕ್ಕೆ ತಾತ್ಕಾಲಿಕವಾಗಿ 3 ವರ್ಷಗಳ ಅವಧಿಗೆ 3 ಜನ ತಂತ್ರಜ್ಞರು ಹಾಗೂ 12 ಕಲಾವಿದರನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂ.27, 2015.
ಮೂರು ಜನ ತಂತ್ರಜ್ಞರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತದೆ. ತಂತ್ರಜ್ಞರು ಸಂಗೀತ, ಧ್ವನಿ-ಬೆಳಕು, ರಂಗ ಸಜ್ಜಿಕೆ, ಪರಿಕರ ಇತ್ಯಾದಿ ಪ್ರತಿ ವಿಭಾಗದಲ್ಲಿ ಕನಿಷ್ಠ 10 ವರ್ಷಗಳ ಅನುಭವ ಹೊಂದಿರಬೇಕು. ಕನ್ನಡ ಭಾಷೆಯನ್ನು ಓದುವ, ಬರೆಯಲು ಬರಬೇಕು. ರಂಗಾನುಭವದ ಜೊತೆಗೆ ಶೈಕ್ಷಣಿಕ ಅರ್ಹತೆಗಳು ಇದ್ದಲ್ಲಿ ಅಂತಹವರಿಗೆ ಆದ್ಯತೆ ನೀಡಲಾಗುತ್ತದೆ. [ಕೊಪ್ಪಳ ಕಂದಾಯ ಇಲಾಖೆಯಲ್ಲಿ ಕೆಲಸ ಖಾಲಿ ಇದೆ]
ವೇತನ : ಈ ನೇಮಕ ತಾತ್ಕಾಲಿಕವಾಗಿದ್ದು, ಗರಿಷ್ಠ 3 ವರ್ಷಗಳ ಅವಧಿಯದ್ದಾಗಿದೆ. ತಂತ್ರಜ್ಞರಿಗೆ ಸಂಚಿತ ವೇತನ ಮಾಸಿಕ 20,000 ರೂ.ಗಳನ್ನು ನೀಡಲಾಗುತ್ತದೆ. ಇತರ ಯಾವುದೇ ಭತ್ಯೆಗಳನ್ನು ನೀಡಲಾಗುವುದಿಲ್ಲ. ನೇಮಕದ ಸಂದರ್ಭದಲ್ಲಿ ರೋಸ್ಟರ್ ನಿಯಮಗಳು ಕಡ್ಡಾಯವಾಗಿರುವುದಿಲ್ಲ, ತಂತ್ರಜ್ಞರಿಗೆ ವಯಸ್ಸಿನ ಮಿತಿ ಇರುವುದಿಲ್ಲ.

12 ಕಲಾವಿದರ ನೇಮಕ : 12 ಜನ ಕಲಾವಿದರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. 12ರಲ್ಲಿ ಕನಿಷ್ಠ 04 ಹುದ್ದೆಗಳು ಮಹಿಳೆಯರಿಗೆ ಮೀಸಲು, 04 ಹುದ್ದೆಗಳನ್ನು ಪ.ಜಾತಿ ಮತ್ತು ಪ.ವರ್ಗದ ಕಲಾವಿದರಿಗೆ ಮೀಸಲಿಡಲಾಗಿದೆ. ಅಲ್ಲದೇ ಶೇ. 50 ರಷ್ಟು ಹುದ್ದೆಗಳನ್ನು ಪ್ರಾದೇಶಿಕ ವಲಯದ ಕಲಾವಿದರಿಗೆ ಮೀಸಲಿಡಲಾಗಿದೆ. [ಇಂಧನ ಇಲಾಖೆಯ 8 ಸಾವಿರ ಹುದ್ದೆ ನೇಮಕಾತಿ ವಿವರ]
ವೇತನ : ರಂಗಪ್ರಯೋಗಗಳಲ್ಲಿ ಭಾಗವಹಿಸಿದವರಿಗೆ ಆದ್ಯತೆ ನೀಡಲಾಗುತ್ತದೆ. ಕಲಾವಿದರಿಗೆ ಪ್ರಥಮ ವರ್ಷದಲ್ಲಿ ಸಂಚಿತ ವೇತನವಾಗಿ ಮಾಸಿಕ 12,000 ರೂ., ಎರಡನೇ ವರ್ಷದಲ್ಲಿ 14,000 ರೂ., ಮೂರನೇ ವರ್ಷದಲ್ಲಿ 16,000 ರೂ.ಗಳನ್ನು ನೀಡಲಾಗುವುದು. ಇತರ ಯಾವುದೇ ಭತ್ಯೆಗಳನ್ನು ನೀಡಲಾಗುವುದಿಲ್ಲ. ಕಲಾವಿದರ ವಯಸ್ಸು ಗರಿಷ್ಠ 25 ಮೀರಿರಬಾರದು.
ಪಾರಂಪರಿಕ ಕಲೆಯ ಕುಟುಂಬಗಳಿಂದ ಬಂದ ಹಾಗೂ ರಂಗಶಿಕ್ಷಣ ಪಡೆದ ಪದವಿ ಕಲಾವಿದರಿಗೆ ಆದ್ಯತೆ ನೀಡಲಾಗುತ್ತದೆ ಮತ್ತು 5 ವರ್ಷದ ವಯೋಮಿತಿ ಸಡಿಲಿಸಲಾಗುತ್ತದೆ. ಕಲಾವಿದರನ್ನು ರಂಗಾಯಣಗಳ ನಿರ್ದೇಶಕರ ಅಧ್ಯಕ್ಷತೆಯಲ್ಲಿ ರಚಿಸುವ ಉಪಸಮಿತಿಯು ಆಯ್ಕೆ ಮಾಡುತ್ತದೆ.
ಅರ್ಜಿ ಸಲ್ಲಿಸುವ ವಿಳಾಸ : ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಬಿಳಿ ಹಾಳೆಯ ಮೇಲೆ ಸ್ವ-ವಿವರಗಳನ್ನು ಬರೆದು, ಜೂ.27 ರ ಸಂಜೆ 5 ಗಂಟೆ ಒಳಗಾಗಿ ಖುದ್ದಾಗಿ, ಅಥವ ಅಂಚೆ ಮೂಲಕ ಕಳುಹಿಸಬಹುದಾಗಿದೆ.
ಅರ್ಜಿಯನ್ನು ಆಡಳಿತಾಧಿಕಾರಿಗಳು, ರಂಗಾಯಣ/ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸುವರ್ಣ ಸಾಂಸ್ಕೃತಿ ಸಮುಚ್ಛಯ, ಸೇಡಂ ಶಹಬಾದ್ ವರ್ತುಲ ರಸ್ತೆ, ಕಲಬುರಗಿ-585105 ಈ ವಿಳಾಸಕ್ಕೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 08472-227734 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ.












Click it and Unblock the Notifications