ಶಿವಮೊಗ್ಗ, ಕೊಪ್ಪಳದಲ್ಲಿ ಮೇ 31ರಂದು ಉದ್ಯೋಗ ಮೇಳ
ಬೆಂಗಳೂರು, ಮೇ 30; ಶಿವಮೊಗ್ಗ ಮತ್ತು ಕೊಪ್ಪಳದಲ್ಲಿ ಮೇ 31ರಂದು ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ. ದಾವಣಗೆರೆಯ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೇರ ಸಂದರ್ಶನ ನಡೆಯಲಿದೆ. ಆಸಕ್ತರು ಸದುಪಯೋಗ ಪಡೆದುಕೊಳ್ಳಬಹುದು.
ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮೇ 31ರ ಬುಧವಾರ ಬೆಳಗ್ಗೆ 10 ಗಂಟೆಗೆ ಉದ್ಯೋಗ ಮೇಳವನ್ನು ಕಚೇರಿಯಲ್ಲಿ ಆಯೋಜಿಸಿದೆ. ಪ್ರತಿಷ್ಠಿತ ಖಾಸಗಿ ಕಂಪನಿಗಳು ಈ ಮೇಳದಲ್ಲಿ ಪಾಲ್ಗೊಳ್ಳಲಿವೆ.

ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ. ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಮತ್ತು ಇತರೆ ಪದವಿ ತೇರ್ಗಡೆ ಹೊಂದಿದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ರೆಸ್ಯೂಮ್, ಆಧಾರ್ ಕಾರ್ಡ್ ಪ್ರತಿಯೊಂದಿಗೆ ಭಾಗವಹಿಸಬಹುದು. ಪ್ರವೇಶ ಉಚಿತ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182-255293, 9380663606, 9482023412 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಕೊಪ್ಪಳದಲ್ಲಿ ನೇರ ಸಂದರ್ಶನ; ಶಿಶಿಕ್ಷು ತರಬೇತಿಗಾಗಿ ಕ್ಯಾಂಪಸ್ ಸಂದರ್ಶನವನ್ನು ಮೇ 31ರ ಬುಧವಾರ ಕೊಪ್ಪಳದ ಕುಷ್ಟಗಿ ರಸ್ತೆಯ ಟಣಕನಕಲ್ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ.

ಪ್ರತಿಷ್ಠಿತ ಕಂಪನಿಯಾದ ಮೆ. ಹೋಂಡಾ ಮೋರ್ಸ್ ಪ್ರೈಲಿ ನರಸಾಪೂರ ಆಗಮಿಸಲಿದ್ದು, ಐಟಿಐ ಪಾಸಾದ ಹಾಗೂ ಪ್ರಸ್ತುತ ಎರಡನೇಯ ವರ್ಷದಲ್ಲಿ ತರಬೇತಿ ಪಡೆಯುತ್ತಿರುವ ಎಲ್ಲಾ ವೃತ್ತಿಗಳ ಅಭ್ಯರ್ಥಿಗಳಿಗೆ ಶಿಶಿಕ್ಷು ತರಬೇತಿಗಾಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆ.
ಬೆಳಗ್ಗೆ 9ಕ್ಕೆ ನೇರ ಸಂದರ್ಶನ ನಡೆಯಲಿದ್ದು, ಆಸಕ್ತರು ತಮ್ಮ ಆಧಾರ್ ಕಾರ್ಡ, ಫೋಟೋ, ವಿದ್ಯಾರ್ಹತೆಗೆ ಸಂಬಂಧಿಸಿದ ಎಲ್ಲಾ ಮೂಲ ದಾಖಲಾತಿಗಳು ಹಾಗೂ 2 ಸೆಟ್ ಝೆರಾಕ್ಸ್ ಪ್ರತಿಗಳೊಂದಿಗೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆಗಳು 9019233400, 9008536895, 9448813422, 9742532353, 9945577155.
ದಾವಣಗೆರೆಯಲ್ಲಿ ನೇರ ಸಂದರ್ಶನ; ದಾವಣಗೆರೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಬುಧವಾರ ಮಾದರಿ ವೃತ್ತಿ ಕೇಂದ್ರ ದಾವಣಗೆರೆ ಇವರ ವತಿಯಿಂದ ಬೆಳಗ್ಗೆ 10ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೇರ ಸಂದರ್ಶನ ಆಯೋಜಿಸಿದೆ.
ನೇರ ಸಂದರ್ಶನದಲ್ಲಿ ದೇಶಪಾಂಡೆ ಫೌಂಡೇಶನ್, ಅನ್‍ಮೋಲ್ ಪಬ್ಲಿಕ್ ಸ್ಕೂಲ್ ಹಾಗೂ ಇತರೆ ದಾವಣಗೆರೆಯ ಖಾಸಗಿ ಕಂಪನಿಗಳು ಭಾಗವಹಿಸುತ್ತಿವೆ. ಬಿಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ/ ಬಿ.ಬಿ.ಎಂ, ಬಿ.ಸಿ.ಎ, ಎಂ.ಎ, ಬಿಇಡಿ, ಎಂಎಸ್ಸಿ ಬಿಇಡಿ, ಎಂ.ಕಾಂ, ಎಂಬಿಎ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿದವರು ಪಾಲ್ಗೊಳ್ಳಬಹುದು.
ಅಭ್ಯರ್ಥಿಗಳಿಗೆ ವಯೋಮಿತಿ 18 ರಿಂದ 30 ವರ್ಷಗಳು. ಹೆಚ್ಚಿನ ಮಾಹಿತಿಗೆ 6361550016 ಸಂಖ್ಯೆಗೆ ಕರೆ ಮಾಡಬಹುದಾಗಿದೆ.












Click it and Unblock the Notifications