ಕಲಬುರಗಿ; ಸೇಡಂನಲ್ಲಿ ಅ. 13ರಂದು ಉದ್ಯೋಗ ಮೇಳ

ಕಲಬುರಗಿ, ಅಕ್ಟೋಬರ್ 10; ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕಲಬುರಗಿಯ ಸೇಡಂನಲ್ಲಿ ಅಕ್ಟೋಬರ್ 13ರಂದು ಉದ್ಯೋಗ ಮೇಳವನ್ನು ಆಯೋಜನೆ ಮಾಡಿದೆ. ಆಸಕ್ತರು ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಲಾಗಿದೆ.

13/10/2023ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯ ತನಕ ಕಲಬುರಗಿಯ ಸೇಡಂನ ಮಿನಿ ವಿಧಾನಸೌಧದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. 7 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂದು ಮಾಹಿತಿ ನೀಡಲಾಗಿದೆ.

Job Fair In Sedam Vini Vidhana Soudha On October 13

ಆಸಕ್ತ ಉದ್ಯೋಗಕಾಂಕ್ಷಿ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ, ರೆಸ್ಯೂಮ್‌ನ 10 ಪ್ರತಿಗಳೊಂದಿಗೆ ವಿವಿಧ ಕಂಪನಿಗಳು ನಡೆಸುವ ನೇರ ಸಂದರ್ಶನದಲ್ಲಿ ಭಾಗಿಯಾಗಿ ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳಬಹುದು.

ವಿವಿರಗಳು; ಈ ಉದ್ಯೋಗ ಮೇಳದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಡಿಗ್ರಿ ಮತ್ತು ಇಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿರುವವರು ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 18005999918, 9606492216 ಸಂಖ್ಯೆಗೆ ಕರೆ ಮಾಡಬಹುದು.

ಸಂದರ್ಶನ ಪೂರ್ವಭಾವಿ ತರಬೇತಿ; ಅಕ್ಟೋಬರ್ 13ರಂದು ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ. ಇದಕ್ಕೆ ಮೊದಲು ಅಕ್ಟೋಬರ್ 10, 11ರಂದು ಸಂದರ್ಶನ ಪೂರ್ವಭಾವಿ ತರಬೇತಿ ಶಿಬಿರ ಆಯೋಜನೆ ಮಾಡಲಾಗಿದೆ. ಶಿಬಿರ ಆಡಿಟೋರಿಯಂ ಹಾಲ್ ಮಿನಿ ವಿಧಾನಸೌಧ, ಕೆಇಬಿ ರೋಡ್, ಸೇಡಂ ಇಲ್ಲಿ ನಡೆಯಲಿದೆ. ಆಸಕ್ತರು ಪಾಲ್ಗೊಳ್ಳಬಹುದು.

ಧಾರವಾಡದಲ್ಲಿ ಕೆಲಸ ಖಾಲಿ ಇದೆ; ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಸ್ತರಣಾ ಶಿಕ್ಷಣ ವಿಭಾಗದಲ್ಲಿ 2023-24ನೇ ಸಾಲಿನ ಪ್ರಥಮ ವರ್ಷದ ಬಿ.ಎಸ್ಸಿ. ಅಗ್ರಿ ಮೊದಲ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲೀಶ್‌ ಮತ್ತು ಮನೋವಿಜ್ಞಾನ ವಿಷಯಗಳಿಗಾಗಿ ಬೋಧಿಸಲು ಸಹಾಯಕ ಪ್ರಾಧ್ಯಾಪಕರ ಮೂರು ತಾತ್ಕಾಲಿಕ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

ಅಭ್ಯರ್ಥಿಗಳು ಎಂ.ಎ ಪದವಿ ಜೊತೆಗೆ ನೆಟ್, ಸೆಟ್ ಹೊಂದಿರಬೇಕು. ಆಸಕ್ತರು ಅರ್ಜಿ ನಮೂನೆಯ ಎರಡು ಪ್ರತಿಗಳೊಂದಿಗೆ ಅಕ್ಟೋಬರ್ 18ರಂದು ಬೆಳಗ್ಗೆ 11 ಗಂಟೆಗೆ ಡೀನ್ (ಕೃಷಿ), ಕೃಷಿ ಮಹಾವಿದ್ಯಾಲಯದ ಕಚೇರಿಯಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕೃವಿವಿ ಜಾಲತಾಣ www.uasd.eduಗೆ ಭೇಟಿ ನೀಡಬಹುದು ಎಂದು ಡೀನ್, ಕೃಷಿ ಮಹಾವಿದ್ಯಾಲಯ, ಕೃವಿವಿ, ಧಾರವಾಡ ಇವರ ಪ್ರಕಟಣೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+