ಕಲಬುರಗಿ : ನವೆಂಬರ್ 29ರಂದು ಉದ್ಯೋಗ ಮೇಳ
ಕಲಬುರಗಿ, ನವೆಂಬರ್ 28 : ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ನವೆಂಬರ್ 29 ರಂದು ಉದ್ಯೋಗ ಮೇಳವನ್ನು ಆಯೋಜಿಸಿದೆ. ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಆಸಕ್ತರು ಭಾಗವಹಿಸಬಹುದು.
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಉದ್ಯೋಗ ಮೇಳ ನಡೆಯಲಿದೆ. ಆಸಕ್ತರು ಮೇಳದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಲಬುರಗಿಯ ರುನೋವಾ ಡಿಜಿಟಲ್ ಪ್ರೇಸ್‍ನಲ್ಲಿ 4 ಫೋಟೋಶಾಪ್ ಡಿಸೈನರ್, 3 ಸೇಲ್ಸ್ ಎಕ್ಸಿಕ್ಯೂಟಿವ್, ಒಂದು ಸ್ವಾಗತಕಾರಣಿ ಹಾಗೂ ಒಂದು ಬೈಂಡರ್ ಹುದ್ದೆಗಳಿವೆ. ಎಸ್.ಎಸ್.ಎಲ್.ಸಿ. ಹಾಗೂ ಯಾವುದೇ ಪದವಿ ಪಾಸಾಗಿರುವ, 20 ರಿಂದ 35 ವರ್ಷದ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಬೆಂಗಳೂರಿನ ಕ್ಯಾಪ್ ಜೆಮಿನಿ ಲಿಪ್‍ನಲ್ಲಿ ಡಾಟಾ ಅನಾಲಿಸ್ಟ್/ಸಾಫ್ಟವೇರ್ ಟೆಸ್ಟರ್ 50 ಹುದ್ದೆಗಳಿಗೆ ಇಂಜಿನಿಯರಿಂಗ್ (ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯೂನಿಕೇಷನ್/ ಇನ್‍ಫಾರ್ಮೇಶನ್ ಸೈನ್ಸ್) ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 22 ರಿಂದ 35 ವರ್ಷ.
ಹುಬ್ಬಳ್ಳಿಯ ಎಲ್.ಆಂಡ್ ಟಿ ಫೈನಾನ್ಸ್‌ನಲ್ಲಿ 150 ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಯಾವುದೇ ಪದವಿ ಹೊಂದಿರುವವರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ವಯೋಮಿತಿ 22 ರಿಂದ 35 ವರ್ಷದೊಳಗಿರಬೇಕು.
ಬೆಂಗಳೂರಿನ ಗ್ರೀಟ್ ಟೆಕ್ನಾಲಾಜಿಸ್ ಪ್ರೈ.ಲಿ. ನಲ್ಲಿ ಅಕೌಂಟ್ ಪ್ರೊಸೆಸ್ ಎಕ್ಸಿಕ್ಯೂಟಿವ್ 150 ಹುದ್ದೆಗಳಿಗೆ ಬಿ.ಕಾಂ., ಬಿ.ಬಿ.ಎ., ಎಂ.ಕಾಂ ಮತ್ತು ಎಂ.ಬಿ.ಎ. ವಿದ್ಯಾರ್ಹತೆ ಹೊಂದಿರುವವರನ್ನು ನೇಮಕಾತಿ ಮಾಡಿಕೊಳ್ಳಲಿದೆ. ವಯೋಮಿತಿ 22 ರಿಂದ 35 ವರ್ಷ.
ಜಿ4ಎಸ್ ನಲ್ಲಿ ಸಕ್ಯೂರಿಟಿ ಗಾರ್ಡ್ ಹುದ್ದೆಗೆ ಎಸ್.ಎಸ್.ಎಲ್.ಸಿ.ಯಲ್ಲಿ ಪಾಸಾಗಿರುವವರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ವಯೋಮಿತಿ 18 ರಿಂದ 35 ವರ್ಷ.
ಪ್ರಸನ್ನಾ ಟೆಕ್ನಾಲೋಜಿಸ್‍ನಲ್ಲಿ ಸರ್ವೇಯರ್ ಆಂಡ್ ಅಸಿಸ್ಟಂಟ್ ಪ್ರೊಜೆಕ್ಟ್ ಕೋ-ಆಡಿನೇಟರ್ ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ., ಐಟಿಐ, ಡಿಪ್ಲೋಮಾ ಆಂಡ್ ಇಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿರುವವರ ನೇಮಕಾತಿ. ವಯೋಮಿತಿ 18 ರಿಂದ 35 ವರ್ಷ.
ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡೇಟಾ ಹಾಗೂ ಆಧಾರ ಕಾರ್ಡ್‌ನೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಲಾಗಿದೆ.












Click it and Unblock the Notifications