ಕಲಬುರಗಿಯಲ್ಲಿ ಡಿ. 18ರಂದು ಉದ್ಯೋಗ ಮೇಳ

ಕಲಬುರಗಿ, ಡಿಸೆಂಬರ್ 15 : ಕಲಬುರಗಿಯಲ್ಲಿ ಡಿಸೆಂಬರ್ 18ರಂದು ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ. ವಿವಿಧ ಕಂಪನಿಗಳು ಪಾಲ್ಗೊಳ್ಳಲಿದ್ದು ಯುವಕ/ಯುವತಿಯರು ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಡಿಸೆಂಬರ್ 18 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯ ತನಕ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳವನ್ನು ಆಯೋಜನೆ ಮಾಡಿದೆ.

ಈ ಉದ್ಯೋಗ ಮೇಳದಲ್ಲಿ ವಿವಿಧ ಕಂಪನಿಗಳು ಭಾಗವಹಿಸಲಿದ್ದು, ವಿವಿಧ ಹುದ್ದೆಗಳಿಗೆ ನೇರ ನೇಮಕಾತಿಯನ್ನು ಮಾಡಿಕೊಳ್ಳುತ್ತಿವೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಪ್ರಕಟಣೆ ಹೇಳಿದೆ.

Job Fair In Kalaburagi On December 18

ಕಲಬುರಗಿಯ ವೈಭವ ಸೋಶಿಯಲ್ ವೆಲ್‍ಫೇರ್ ಟ್ರಸ್ಟ್‌ (ಮಹಿಳೆಯರು ಹಾಗೂ ಪುರುಷರು) 20 ಟೇಲರ್ ಹುದ್ದೆಗಳಿಗೆ ಎಸ್ಎಸ್ಎಲ್‌ಸಿಗಿಂತ ಕಡಿಮೆ ಅಥವಾ ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 45 ವರ್ಷ.

ಕಲಬುರಗಿ ವಾಯಾ ಫೀನ್‍ಸರ್ವ್ ಪ್ರೈವೇಟ್ ಲಿಮಿಟೆಡ್‍ (ಪುರುಷರಿಗೆ ಮಾತ್ರ) ಟ್ರೇನಿ, ಬ್ರ್ಯಾಂಚ್ ಮ್ಯಾನೇಜರ್, ಸಿನಿಯರ್ ಬ್ರ್ಯಾಂಚ್ ಮ್ಯಾನೇಜರ್ ಹುದ್ದೆಗಳಿಗೆ ಎಸ್ಎಸ್ಎಲ್‌ಸಿ ಮತ್ತು ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 19 ರಿಂದ 28 ವರ್ಷ.

ಬೆಂಗಳೂರಿನ ಸನ್ ಬಿಜ್ ಸಲ್ಯೂಷನ್ (ಪುರುಷರಿಗೆ ಮಾತ್ರ) ಕಲೆಕ್ಷನ್ ಎಕ್ಸಿಕ್ಯೂಟಿವ್ ಹುದ್ದೆ. ಎಸ್ಎಸ್ಎಲ್‌ಸಿ ಪಾಸಾಗಿರಬೇಕು. ವಯೋಮಿತಿ 20 ವರ್ಷ ಮೇಲ್ಪಟ್ಟು.

ಹುಬ್ಬಳ್ಳಿಯ ಫುಲ್ಲರ್‍ಟಾನ್ ಇಂಡಿಯಾ ಪ್ರೈವೆಟ್ ಲಿಮಿಟೆಡ್‍ (ಪುರುಷರಿಗೆ ಮಾತ್ರ) ಲೋನ್ ಅಪ್ರುವಲ್ ಆಫೀಸರ್ 50 ಹುದ್ದೆಗಳು. ಪಿಯುಸಿ, ಐಟಿಐ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 30 ವರ್ಷ.

ಕಲಬುರಗಿಯ ಐಸಿಐಸಿಐ ಬ್ಯಾಂಕ್‍ ಬ್ರ್ಯಾಂಚ್ ರಿಲೇಷನ್‍ಶಿಪ್ ಮ್ಯಾನೇಜರ್, ಸೇಲ್ಸ್ ಆಫೀಸರ್ (ಮಹಿಳೆಯರು ಹಾಗೂ ಪುರುಷ) ಹುದ್ದೆಗಳು. ಯಾವುದೇ ಪದವಿ (ಇಂಜಿನಿಯರಿಂಗ್ ಮತ್ತು ಎಂಬಿಎ ಹೊರತುಪಡಿಸಿ) ಪಾಸಾಗಿರಬೇಕು. ವಯೋಮಿತಿ 18 ರಿಂದ 26 ವರ್ಷ.

ಕೋಲಾರ ಹೋಂಡಾ ಮ್ಯಾನುಫ್ಯಾಕ್ಚರಿಂಗ್ ಕಂಪನಿ (ಪುರುಷ) 500 ಆಪರೇಟರ್ ಹುದ್ದೆಗಳು. ಐಟಿಐ (ಎಲ್ಲ ಟ್ರೇಡ್‍ಗಳು) ಪಾಸಾಗಿರಬೇಕು. ವಯೋಮಿತಿ 18 ರಿಂದ 28 ವರ್ಷ.

ಬೆಂಗಳೂರಿನ ಸ್ಪಂದನಾ ಬ್ರೈಟ್ ಫ್ಯೂಚರ್ ಇನೋವೇಷನ್‍ನಲ್ಲಿ ಎಕ್ಸಿಕ್ಯೂಟಿವ್ ಹುದ್ದೆ. ಯಾವುದೇ ಪದವಿ ಹೊಂದಿರಬೇಕು. ವಯೋಮಿತಿ 18 ರಿಂದ 30 ವರ್ಷ.

ಆಸಕ್ತ ಅಭ್ಯರ್ಥಿಗಳು ತಮ್ಮ (ರೆಸ್ಯೂಮ್) ಬಯೋಡಾಟಾ ಹಾಗೂ ಆಧಾರ್ ಕಾರ್ಡ್ ಹಾಗೂ ಅವಶ್ಯಕ ದಾಖಲೆಗಳೊಂದಿಗೆ ಉದ್ಯೋಗ ಮೇಳದಲ್ಲಿ ಪಾಲ್ಗೊಲ್ಳಬೇಕು. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆ ನೀಡುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದೋಗ ವಿನಿಮಯ ಕಚೇರಿಗೆ ಕರೆ ಮಾಡಬಹುದಾಗಿದೆ. ದೂರವಾಣಿ ಸಂಖ್ಯೆ 08472-274846.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+