ಬಳ್ಳಾರಿ; ಗುರುವಾರ ಮಿನಿ ಉದ್ಯೋಗ ಮೇಳ

ಬಳ್ಳಾರಿ, ಅಕ್ಟೋಬರ್ 05; ಬಳ್ಳಾರಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಗುರುವಾರ ಮಿನಿ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ. ಅಭ್ಯರ್ಥಿಗಳು ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಬಳ್ಳಾರಿ ಜಿಲ್ಲಾ ಉದ್ಯೋಗ ಮಿನಿಮಯ ಕೇಂದ್ರದಲ್ಲಿ ಅಕ್ಟೋಬರ್ 6ರ ಬೆಳಗ್ಗೆ 10ಕ್ಕೆ ಮಿನಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ತಾಲೂಕು ಕಚೇರಿ ಹಿಂಭಾಗದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳ ನಡೆಯಲಿದೆ.

ವಿವಿಧ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆಸಕ್ತರು ಉದ್ಯೋಗ ಮೇಳದ ಉಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿಗಳಾದ ಪಿ. ಎಸ್. ಹಟ್ಟಪ್ಪ ತಿಳಿಸಿದ್ದಾರೆ.

Job Fair In Ballari District Employment Exchange Office On October 6th

ವಿದ್ಯಾರ್ಹತೆಯ ವಿವರಗಳು; ಯಾವುದೇ ಪದವಿ/ ಬಿಇ, ಬಿಟೆಕ್, ಕಲಾ & ವಿಜ್ಞಾನ, ಬಿಕಾಂ ಪದವಿ ಹೊಂದಿರುವ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು. ಸಂದರ್ಶನದಲ್ಲಿ ಪಾಲ್ಗೊಳ್ಳುವವರು ತಮ್ಮ ಆಧಾರ್ ಕಾರ್ಡ್ ಪ್ರತಿ ಮತ್ತು ಸ್ವ ವಿವರಗಳೊಂದಿಗೆ ಭಾಗವಹಿಸಬೇಕು.

ಆಸಕ್ತ ಮತ್ತು ಅರ್ಹರು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಸಂಪರ್ಕಿಸಬಹುದು. ಕರೆ ಮಾಡಲು ಮೊಬೈಲ್ ಸಂಖ್ಯೆ 8073365184, 9019692898, 8904213400.

ಅಕ್ಟೋಬರ್ 7 ರಂದು ಸಂದರ್ಶನ; ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಬೆಂಗಳೂರು ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಸ್ವಯಂ ಉದ್ಯಮಗಳನ್ನು ಪ್ರಾರಂಭಿಸಲು ಆಸಕ್ತರಿರುವ ಕಲಬುರಗಿ ಜಿಲ್ಲೆಯ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮಹಿಳಾ ಅಭ್ಯರ್ಥಿಗಳಿಗೆ 10 ದಿನಗಳ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಅಕ್ಟೋಬರ್ ತಿಂಗಳ 2ನೇ ವಾರದಲ್ಲಿ ತರಬೇತಿ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳಲು ವಯೋಮಿತಿ 20 ರಿಂದ 40 ವರ್ಷಗಳು. ಎಸ್. ಎಸ್. ಎಲ್. ಸಿ. ಉತ್ತೀರ್ಣ, ಅನುತ್ತೀರ್ಣರಾದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮಹಿಳಾ ಅಭ್ಯರ್ಥಿಗಳು ತರಬೇತಿಯಲ್ಲಿ ಪಾಲ್ಗೊಳ್ಳಬಹುದಾಗಿದೆ.

ತರಬೇತಿಯಲ್ಲಿ ಪಾಲ್ಗೊಳ್ಳುವ ಮಹಿಳೆಯರ ಆಯ್ಕೆಗಾಗಿ ಅಕ್ಟೋಬರ್ 7ರಂದು ಬೆಳಗ್ಗೆ 11 ಗಂಟೆಗೆ ಜಂಟಿ ನಿರ್ದೇಶಕರು, ಸಿಡಾಕ್, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ (ವಿಭಾಗೀಯ ಕಚೇರಿ) ಸಿಓಇ ಕಟ್ಟಡ, ಸರ್ಕಾರಿ ಬಾಲಕರ ಐಟಿಐ ಆವರಣ, ಎಂ.ಎಸ್.ಕೆ. ಮಿಲ್ ರಸ್ತೆ, ಕಲಬುರಗಿ-585102 ವಿಳಾಸದಲ್ಲಿ ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಅಭ್ಯರ್ಥಿಗಳು ಆಧಾರ್ ಕಾರ್ಡ್ ಪ್ರತಿ, ರೇಷನ್ ಕಾರ್ಡ್‌ ಪ್ರತಿ, ಜಾತಿ ಪ್ರಮಾಣ ಪತ್ರ ಪ್ರತಿ, ಇತ್ತೀಚಿನ 2 ಭಾವಚಿತ್ರ, ವಿದ್ಯಾಭ್ಯಾಸದ ಅಂಕಪಟ್ಟಿ ಪ್ರತಿ ಮತ್ತು ಇತರೆ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಸಿಡಾಕ್ ಜಂಟಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು. ಕರೆ ಮಾಡಲು ಮೊಬೈಲ್ ಸಂಖ್ಯೆ 9108972833.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+