ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾರ್ಟ್ ಟೈಂ, ಫುಲ್ ಟೈಂ ಕೆಲಸ ಹುಡುಕುತ್ತಿರುವ ಮಹಿಳೆಯರಿಗೆ ಸುವರ್ಣಾವಕಾಶ

|
Google Oneindia Kannada News

ಬೆಂಗಳೂರು, ಡಿ. 01: ಡಿಸೆಂಬರ್ 3 ರಂದು ಬೆಂಗಳೂರಿನಲ್ಲಿ ಮಹಿಳೆಯರಿಗಾಗಿಯೇ ಉದ್ಯೋಗ ಮೇಳ ಆಯೋಜಿಸಲಾಗಿದೆ. ಮಹಿಳಾ ಸಬಲೀಕರಣವನ್ನು ಬೆಂಬಲಿಸುವ ಉದ್ದೇಶದಿಂದ ಜಯನಗರದಲ್ಲಿ ಮಹಿಳೆಯರಿಗೆ ವಿಶೇಷ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ.

ಜಯನಗರದ 4ನೇ 'ಟಿ' ಬ್ಲಾಕ್ ಶಾಸಕರ ಕಚೇರಿಯಲ್ಲಿ ಈ ಮೇಳ ನಡೆಯಲಿದ್ದು, ಶನಿವಾರ (ಡಿಸೆಂಬರ್ 3 ರಂದು) ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರಗೆ ನಡೆಯಲಿದೆ. ಉದ್ಯೋಗಕಾಂಕ್ಷಿಗಳು ಈ ಮೇಳದಲ್ಲಿ ಭಾಗವಹಿಸುವ ಮೂಲಕ ಉತ್ತಮ ಅವಕಾಶಗಳನ್ನು ಪಡೆದುಕೊಳ್ಳಬಹುದು ಎಂದು ಮೇಳದ ಆಯೋಜಕರಾಗಿರುವ ಸ್ಥಳೀಯ ಶಾಸಕಿ ಸೌಮ್ಯಾ ರೆಡ್ಡಿ ತಿಳಿಸಿದ್ದಾರೆ.

ರಾಯಚೂರಿನಲ್ಲಿ ಕೆಲಸ ಖಾಲಿ ಇದೆ, ಡಿ. 3ರೊಳಗೆ ಅರ್ಜಿ ಹಾಕಿರಾಯಚೂರಿನಲ್ಲಿ ಕೆಲಸ ಖಾಲಿ ಇದೆ, ಡಿ. 3ರೊಳಗೆ ಅರ್ಜಿ ಹಾಕಿ

ಮೊಬೈಲ್ ಫುಡ್ ಟ್ರಕ್ ಮ್ಯಾನೆಜರ್ ಮತ್ತು ಪುಟ್ಟ ಆಹಾರ ಅಂಗಡಿಯ ಮ್ಯಾನೆಜರ್‌ಗಳ ಹುದ್ದೆಗಳಿಗೆ ಉದ್ಯೋಗ ಮೇಳ ನಡೆಯುತ್ತಿದೆ. ಮಹಿಳೆಯರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ.

Job fair for Women in Bengalurus jayanagara

3 ವೀಲರ್ ಎಲೆಕ್ಟ್ರಿಕ್ ವಾಹನ ಚಲಾಯಿಸಲು ಚಾಲನಾ ಪರವಾನಗಿ ಹೊಂದಿರುವ ಮಹಿಳೆಯರು ಮತ್ತು ಆಹಾರ ಸಾಮಗ್ರಿಗಳನ್ನು ಗ್ರಾಹಕರಿಗೆ ಸರಿಯಾಗಿ ವಿವರಿಸಿ ಅವರಿಂದ ಆರ್ಡರ್ ಪಡೆಯುವ ಸಾಮರ್ಥ್ಯ ಹೊಂದಿರುವ ಮಹಿಳೆಯರಿಗೆ ಇದು ಸದಾವಕಾಶ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಮಹಿಳೆಯರು ತಮ್ಮ ಅನುಕೂಲಕ್ಕೆ ತಕ್ಕಂತೆ, ತಮಗೆ ಆಗುವ ಸಮಯಕ್ಕೆ ತಕ್ಕಂತೆ ಕೆಲಸಕ್ಕೆ ಹೋಗಬಹುದು. ಪಾರ್ಟ್ ಟೈಂ, ಫೂಲ್ ಟೈಂ ಅವಕಾಶಗಳು ಇವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೆಳಗ್ಗೆ 6.00 ಗಂಟೆಯಿಂದ 10.00 ಗಂಟೆಯವರೆ. ಸಂಜೆ 4.00 ರಿಂದ 8.00 ಗಂಟೆಯವರೆಗೆ ಪಾರ್ಟ್ ಟೈಂ ಕೆಲಸವಿರುತ್ತದೆ. ಫುಲ್ ಟೈಂ ಕೆಲಸ ಮಾಡುವವರು ಬೆಳಗ್ಗೆ 8.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೂ ಕೆಲಸ ಮಾಡಬಹುದು.

Job fair for Women in Bengalurus jayanagara

*ಮೊಬೈಲ್ ಫುಡ್ ಟ್ರಕ್ ಮ್ಯಾನೆಜರ್‌ಗಳ ಕೆಲಸದ ವಿವರ ಇಂತಿದೆ*

• ಫುಡ್ ಟ್ರಕ್ ಅನ್ನು ಚಲಾಯಿಸುವುದು ಮತ್ತು ಮುಖ್ಯ ಅಡುಗೆ ಮನೆಯಿಂದ ಗೊತ್ತುಪಡಿಸಿದ ಮಾರಾಟದ ಸ್ಥಳಕ್ಕೆ ತಲುಪಿಸುವುದು

• ಆಹಾರ ವಿತರಣೆಗಾಗಿ ಮೊಬೈಲ್ ಔಟ್ಲೆಟ್‌ಗಳನ್ನು ಮಾಡುವುದು.

• ಗ್ರಾಹಕರು ಸಮೀಪಿಸುತ್ತಿದ್ದಂತೆ ಅವರನ್ನು ಸ್ವಾಗತಿಸಿ, ಪದಾರ್ಥಗಳು ಮತ್ತು ಅಡುಗೆ ವಿಧಾನಗಳನ್ನು ವಿವರಿಸುವ ವಿವಿಧ ಮೆನುಗಳನ್ನು ಅವರಿಗೆ ವಿವರಿಸುವುದು. ಆರ್ಡರ್‌ ತೆಗೆದುಕೊಂಡು ಅವರಿಗೆ ಆಹಾರ ಅಥವಾ ಡ್ರಿಂಕ್ಸ್ ಒದಗಿಸುವುದು.

• ಇತರ ಸಿಬ್ಬಂದಿಯೊಂದಿಗೆ ಕೆಲಸ ಮಾಡುವುದು, ಆಹಾರ ಸ್ಟಾಕ್ ಅನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಆಹಾರ ವಿತರಿಸುವ ತಂಡದೊಂದಿಗೆ ಸಹಕರಿಸುವುದು.

*ಆಹಾರ ಕಿಯೋಸ್ಕ್ ಮ್ಯಾನೆಜರ್‌ಗಳ ಕೆಲಸದ ವಿವರ ಇಂತಿದೆ*

• ಪ್ರತಿದಿನ ಆಹಾರ ಕೌಂಟರ್ ಅನ್ನು ಸಿದ್ಧಪಡಿಸುವುದು ಮತ್ತು ಗ್ರಾಹಕರಿಗೆ ವಿತರಿಸಲು ಸಿದ್ಧವಾಗಿರುವುದು

• ಗ್ರಾಹಕರು ಕಿಯೋಸ್ಕ್ ಅನ್ನು ಸಮೀಪಿಸುತ್ತಿದ್ದಂತೆ ಅವರನ್ನು ಸ್ವಾಗತಿಸಬೇಕು. ಜೊತೆಗೆ ಮೆನುನಲ್ಲಿರುವ ಆಹಾರ ಪದಾರ್ಥಗಳನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ಅವರಿಗೆ ವಿವರಿಸಬೇಕು. ಆಹಾರ ಪದಾರ್ಥಗಳು, ಅದರ ಆರೋಗ್ಯ ಪ್ರಯೋಜನಗಳು ಮತ್ತು ಅಡುಗೆ ವಿಧಾನಗಳನ್ನು ವಿವರಿಸುವುದು.

• ಆರ್ಡರ್ ತೆಗೆದುಕೊಳ್ಳುವುದು ಮತ್ತು ಗ್ರಾಹಕರಿಗೆ ಆಹಾರ ಅಥವಾ ಪಾನೀಯಗಳನ್ನು ಒದಗಿಸುವುದು.

12 ನೇ ತರಗತಿ ಪಾಸಾಗಿರುವ ಮಹಿಳೆಯರು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ಕನ್ನಡದ ಜೊತೆಗೆ ಸ್ವಲ್ಪ ಹಿಂದಿ, ಇಂಗ್ಲೀಷ್ ಬಲ್ಲವರಾಗಿದ್ದರೇ ಉತ್ತಮ. ಉದ್ಯೋಗ ಮೇಳದಲ್ಲಿ ಆಯ್ಕೆಯಾದವರಿಗೆ ಈ ಕೆಲಸಗಳಿಗೆ ಬೇಕಾದ ಬೇಸಿಕ್ ತರಬೇತಿಯನ್ನು ನೀಡಲಾಗುತ್ತದೆ.

ಕೆಲಸದ ಹುಡುಕಾಟದಲ್ಲಿರುವ ಮಹಿಳೆಯರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಮೊಬೈಲ್ ನಂ. 9241669999 ಸಂಪರ್ಕಿಸಬಹುದು ಎಂದು ಸೌಮ್ಯಾ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
Job fair for women in Bengaluru's jayanagara on december 3rd. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X