Job Fair 2024 ಹುಬ್ಬಳ್ಳಿ ಮಂದಿಗೆ ಗುಡ್‌ನ್ಯೂಸ್: ಉದ್ಯೋಗ ಮೇಳ, ಎಲ್ಲಿ ಮತ್ತು ಯಾವಾಗ
ಹುಬ್ಬಳ್ಳಿ ಮಂದಿಗೆ ಇಲ್ಲೊಂದು ಗುಡ್‌ನ್ಯೂಸ್ ಇದೆ. ಉದ್ಯೋಗದ ಹುಡುಕಾಟದಲ್ಲಿದ್ದರೆ, ನೀವು ತಪ್ಪದೆ ಈ ಸುದ್ದಿ ಓದಿ. ಹುಬ್ಬಳ್ಳಿಯಲ್ಲಿ ಸೆಪ್ಟೆಂಬರ್ 26ಕ್ಕೆ ಉದ್ಯೋಗ ಮೇಳ ಆಯೋಜಿಸಲಾಗಿದೆ. ಮೇಳದಲ್ಲಿ ಹಲವು ಕಂಪನಿಗಳು ಭಾಗವಹಿಸುವ ಸಾಧ್ಯತೆ ಇತ್ತು. ಆದರೆ, ಮೇಳಕ್ಕೆ ಬರುವ ಮೊದಲು ಉದ್ಯೋಗಾಕಾಂಕ್ಷಿಗಳು ರಿಜಿಸ್ಟರ್ ಮಾಡಿಕೊಳ್ಳಬೇಕು ಎನ್ನುವ ಷರತ್ತು ವಿಧಿಸಲಾಗಿದೆ. ಎಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕು. ಉದ್ಯೋಗ ಮೇಳ ಎಲ್ಲಿ ನಡೆಯಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಸೆಪ್ಟೆಂಬರ್ 26ರಂದು ಮಿನಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಹುಬ್ಬಳ್ಳಿಯ ನವನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಮಿನಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಸೆಪ್ಟೆಂಬರ್ 26ರಂದು ಅಂದರೆ ಇದೇ ಗುರುವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನವನಗರದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಈ ಉದ್ಯೋಗ ಮೇಳ ನಡೆಯಲಿದೆ.

ಮೇಳದಲ್ಲಿ 8 ಖಾಸಗಿ ವಲಯದ ಕಂಪನಿಗಳು ಭಾಗವಹಿಸಲಿವೆ. ಈ ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳಿಗೆ ಅಭ್ಯರ್ಥಿಗಳ ಸಂದರ್ಶನ ನಡೆಸಲಿದ್ದಾರೆ. ಉದ್ಯೋಗ ಮೇಳದಲ್ಲೇ ಸಂದರ್ಶನವನ್ನು ಸಹ ನಡೆಸಿ, ನಿರುದ್ಯೋಗಿಗಳಿಗೆ ಉದ್ಯೋಗ ಖಾತ್ರಿ ಮಾಡುವ ಸಾಧ್ಯತೆ ಇದೆ.
ಯಾವ ಪದವಿ ಮಾಡಿರುವವರು ಅರ್ಜಿ ಸಲ್ಲಿಸಬಹುದು
ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಹಾಗೂ ಯಾವುದೇ ಪದವಿಯನ್ನು ಪಾಸು ಮಾಡಿರುವವರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಅವರು 18 ವರ್ಷದಿಂದ 35 ವರ್ಷದ ಒಳಗಿರಬೇಕು. ಈ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು. ಅಭ್ಯರ್ಥಿಗಳು ತಮ್ಮ ಆಧಾರ ಕಾರ್ಡ್, ಬಯೋಡಾಟಾ (ರೆಸ್ಯೂಮ್) ಗಳ ಹೆಚ್ಚಿನ ಪ್ರತಿಗಳೊಂದಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ಅಭ್ಯರ್ಥಿಗಳು https://forms.gle/qdtkEhLjQsdC1GD68 ವೆಬ್‌ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ಗೊಂದಲಗಳಿದ್ದರೆ ಇಲ್ಲಿ ಸಂಪರ್ಕಿಸಿ: ಉದ್ಯೋಗ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವವರು ಹಾಗೂ ಅರ್ಜಿ ಸಲ್ಲಿಸುವವರು ಯಾವುದಾದರೂ ಗೊಂದಲಗಳಿದ್ದರೆ ಅಥವಾ ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಕುವೆಂಪು ರಸ್ತೆ, ನವನಗರ ಹುಬ್ಬಳ್ಳಿಗೆ ಭೇಟಿ ನೀಡಬಹುದು. ಇಲ್ಲವೇ ದೂರವಾಣಿ ಸಂಖ್ಯೆ 0836-2225288, 9535360259, 8453208555 ಅಥವಾ 9806905751 ಸಂಖ್ಯೆಗೆ ಕಚೇರಿ (ಬೆಳಿಗ್ಗೆ 10ರಿಂದ ಸಂಜೆ 5.30ರ ಒಳಗೆ) ವೇಳೆಯಲ್ಲಿ ಕರೆ ಮಾಡಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕ ತಿಳಿಸಿದ್ದಾರೆ.
ಲಿಂಕ್ಡ್‌ಇನ್ ನಲ್ಲಿ ಪ್ರೋಫೈಲ್ ಅಪ್ಡೇಟ್ ಮಾಡಿ
ಉದ್ಯೋಗ ಹುಡುಕುವವರಿಗೆ ಲಿಂಕ್ಡ್‌ಇನ್ ತುಂಬಾ ಉಪಯುಕ್ತ ಆ್ಯಪ್ ಆಗಿದೆ. ಲಿಂಕ್ಡ್‌ಇನ್ ನಲ್ಲಿ ಪ್ರೋಫೈಲ್ ಅಪ್ಡೇಟ್ ಮಾಡಿ (Update profile on LinkedIn) ಮಾಡಿಕೊಳ್ಳುವುದರಿಂದ ನಿಮ್ಮ ಇಷ್ಟದ ಉದ್ಯೋಗಗಳನ್ನು ಹುಡುಕಿಕೊಳ್ಳಬಹುದು. ಅಲ್ಲದೇ ಲಿಂಕ್ಡ್‌ಇನ್ ನಲ್ಲಿ ಪ್ರೋಫೈಲ್ ನಲ್ಲಿ ಒಪನ್‌ಟು ವರ್ಕ್ ಎಂದು ಹಾಕುವುದರಿಂದ ನಿಮ್ಮ ಸ್ಕಿಲ್‌ಗೆ ಅನುಗುಣವಾದ ಉದ್ಯೋಗ ಅವಕಾಶಗಳನ್ನು ಕೆಲವೊಮ್ಮೆ ನಿಮ್ಮನ್ನು ಹುಡುಕಿಕೊಂಡು ಬರುವುದು ಸಹ ಇದೆ. ಲಿಂಕ್ಡ್‌ಇನ್ ಸೇವೆ ಮುಕ್ತ ಹಾಗೂ ಉಚಿತವಾಗಿದೆ. ಇಲ್ಲಿ ಉದ್ಯೋಗಾವಕಾಶಗಳ ಬಗ್ಗೆಯೂ ಪೋಸ್ಟ್‌ಗಳು ಬರುತ್ತಿರುತ್ತವೆ (ಫೇಸ್‌ಬುಕ್ ಮಾದರಿಯಲ್ಲಿ). ಹೀಗಾಗಿ, ನೀವು ಉದ್ಯೋಗಾವಕಾಶಗಳನ್ನು ಹುಡುಕುತ್ತಿದ್ದರೆ,ಲಿಂಕ್ಡ್‌ಇನ್ ನಲ್ಲಿ ಪ್ರೋಫೈಲ್ ತಪ್ಪದೇ ಅಪ್ಡೇಟ್ ಮಾಡಿಕೊಳ್ಳಿ.












Click it and Unblock the Notifications