Intelligence Bureau Jobs 2023: 10ನೇ ತಗರತಿ ಪಾಸಾದವರಿಗೆ ಕೇಂದ್ರ ಸರ್ಕಾರಿ ಉದ್ಯೋಗ, ಕೈತುಂಬ ವೇತನ

ನವದೆಹಲಿ, ನವೆಂಬರ್ 12: ಗುಪ್ತಚರ ದಳ ಇಲಾಖೆ (IB)ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ನಿಮಿತ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕೇಂದ್ರ ಸರ್ಕಾರಿ ಉದ್ಯೋಗ ಉಡುಕುತ್ತಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ.

ಗುಪ್ತಚರ ದಳ ಇಲಾಖೆ (IB) ತನ್ನಲ್ಲಿರುವ ಒಟ್ಟು 677 ಸೆಕ್ಯುರಿಟಿ ಅಸಿಸ್ಟೆಂಟ್/ ಮೋಟಾರ್ ಟ್ರಾನ್ಸ್​ಪೋರ್ಟ್​ ಮತ್ತು ಎಂಟಿಎಸ್ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಆಸಕ್ತು ಅಭ್ಯರ್ಥಿಗಳು ನಾಳೆ ನವೆಂಬರ್ 13 ರಂದು ಸೋಮವಾರ ಸಂಜೆಯೊಳಗೆ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬೇಕು ಎಂದು ಸಂಸ್ಥೆ ತಿಳಿಸಬೇಕು. ಈಮೂಲಕ ಕೇಂದ್ರ ಸರ್ಕಾರ ವ್ಯಾಪ್ತಿಯ ನೇಮಕಾತಿಯ ಲಾಭ ಪಡೆದುಕೊಳ್ಳುವಂತೆ ಕೋರಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೂ ಮೊದಲು ನೇಮಕಾತಿ ಬಗ್ಗೆ ಈ ಕೆಳಗೆ ನೀಡಲಾಗಿರುವ ಮಾಹಿತಿ ತಿಳಿಯಿರಿ.

Intelligence Bureau Recruitment 2023: Apply for 677 Vacancies of Central Govt Under

ನೇಮಕಾತಿ ಪೂರ್ಣ ಮಾಹಿತಿ

ನೇಮಕಾತಿ ಸಂಸ್ಥೆ: ಗುಪ್ತಚರ ಇಲಾಖೆ

ಹುದ್ದೆ ಹೆಸರು: ಸೆಕ್ಯುರಿಟಿ ಅಸಿಸ್ಟೆಂಟ್/ಮೋಟಾರ್ ಟ್ರಾನ್ಸ್​ಪೋರ್ಟ್​, ಎಂಟಿಎಸ್

ಖಾಲಿ ಹುದ್ದೆ ಎಷ್ಟು: ಒಟ್ಟು 677

ಮಾಸಿಕ ವೇತನ: 21,700 ನಿಂದ 69,100 ರೂಪಾಯಿ

ಪೋಸ್ಟಿಂಗ್: ಭಾರತದಲ್ಲಿ

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ನವೆಂಬರ್ 13

ಹುದ್ದೆಗಳ ಇನ್ನಿತರ ಮಾಹಿತಿ ನೋಡುವುದಾದರೆ, ಸೆಕ್ಯುರಿಟಿ ಅಸಿಸ್ಟೆಂಟ್/ಮೋಟಾರ್ ಟ್ರಾನ್ಸ್​ಪೋರ್ಟ್ ಹುದ್ದೆಗಳು​ ಒಟ್ಟು 362 ಖಾಲಿ ಇವೆ. ಮಲ್ಟಿ ಟಾಸ್ಕಿಂಗ್ ಸ್ಟಾಫ್/ಜನರಲ್ ಹುದ್ದೆಗಳು ಒಟ್ಟು 315 ಮತ್ತು ಬೆಂಗಳೂರಿನಲ್ಲಿ ಸೆಕ್ಯುರಿಟಿ ಅಸಿಸ್ಟೆಂಟ್/ ಮೋಟಾರ್ ಟ್ರಾನ್ಸ್​ಪೋರ್ಟ್ ಎಂಟು ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್/ಜನರಲ್ ಒಟ್ಟು 14 ಹುದ್ದೆಗಳು ಖಾಲಿ ಇವೆ ಎಂದು ಸಂಸ್ಥೆಯ ಅಧಿಸೂಚನೆ ತಿಳಿಸಿದೆ.

ಶೈಕ್ಷಣಿಕ ಅರ್ಹತೆ

ಅರ್ಜಿ ಸಲ್ಲಿಸಬೇಕಿರುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಇಲ್ಲವೇ ಮಂಡಳಿಯಲ್ಲಿ 10ನೇ ತರಗತಿ ಪೂರ್ಣಗೊಳಿಸಿರಬೇಕು ಎಂಬ ನಿಯಮ ಕಡ್ಡಾಯ ಮಾಡಲಾಗಿದೆ.

Intelligence Bureau Recruitment 2023: Apply for 677 Vacancies of Central Govt Under

ವಯಸ್ಸಿನ ಮಿತಿ

ಗುಪ್ತಚರ ದಳ ನೇಮಕಾತಿ ಅಧಿಸೂಚನೆ ಪ್ರಕಾರ, ಸೆಕ್ಯುರಿಟಿ ಅಸಿಸ್ಟೆಂಟ್/ ಮೋಟಾರ್ ಟ್ರಾನ್ಸ್​ಪೋರ್ಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 27 ವರ್ಷ ಹಾಗೂ ಮಲ್ಟಿ ಟಾಸ್ಕಿಂಗ್ ಸ್ಟಾಫ್/ ಜನರಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ಕನಿಷ್ಠ 18ರಿಂದ ಗರಿಷ್ಠ 25 ವರ್ಷ ವಯಸ್ಸಾಗಿರಬೇಕು ಎಂದು ತಿಳಿಸಲಾಗಿದೆ.

ವಯೋಮಿತಿಯಲ್ಲಿ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು

PwD ಅಭ್ಯರ್ಥಿಗಳಿಗೆ ಒಟ್ಟು 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಿದೆ.

ಮಾಸಿಕ ವೇತನ

ಗುಪ್ತಚರ ನೇಮಕಾತಿ ಅಧಿಸೂಚನೆ ಪ್ರಕಾರ, ಸೆಕ್ಯುರಿಟಿ ಅಸಿಸ್ಟೆಂಟ್/ ಮೋಟಾರ್ ಟ್ರಾನ್ಸ್​ಪೋರ್ಟ್ ಹುದ್ದೆಗಳಿಗೆ ಆಯ್ಕೆ ಆಗುವವರಿಗೆ ಮಾಸಿಕ 21,700-69,100 ರೂಪಾಯಿ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್/ ಜನರಲ್ ಹುದ್ದೆಗಳ ಅಭ್ಯರ್ಥಿಗಳಿಗೆ ತಿಂಗಳಿಗೆ 18,000-56,900 ರೂಪಾಯಿ ವೇತನ ಸಿಗಲಿದೆ.

ಅರ್ಜಿ ಶುಲ್ಕ ಮಾಹಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕ 50 ರೂಪಾಯಿ ಮತ್ತು ನೇಮಕಾತಿ ಪ್ರಕ್ರಿಯೆ ಶುಲ್ಕ 450 ರೂಪಾಯಿ ನಿಗದಿ ಮಾಡಲಾಗಿದೆ. ಇನ್ನೂ ಮಲ್ಟಿ ಟಾಸ್ಕಿಂಗ್ ಸ್ಟಾಫ್/ ಜನರಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಪೈಕಿ PwD ಅಭ್ಯರ್ಥಿಗಳಿಗೆ 450 ರೂ., ಸಾಮಾನ್ಯ/OBC/EWS ಪುರುಷ ಅಭ್ಯರ್ಥಿಗಳಿಗೆ 500 ರೂಪಾಯಿ ನಗದಿ ಮಾಡಲಾಗಿದೆ.

ಸೆಕ್ಯುರಿಟಿ ಅಸಿಸ್ಟೆಂಟ್/ ಮೋಟಾರ್ ಟ್ರಾನ್ಸ್​ಪೋರ್ಟ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಎಲ್ಲ ಅಭ್ಯರ್ಥಿಗಳಿಗೆ ಒಟ್ಟು 500 ರೂಪಾಯಿ ನಿಗದಿಗೊಳಿಸಲಾಗಿದೆ. ಈ ಹಣವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು ಎಂದು ಸೂಚಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಆನ್‌ಲೈನ್ ಲಿಂಕ್

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಆನ್​​ಲೈನ್ ಪರೀಕ್ಷೆ ಎದುರಿಸಬೇಕಾಗುತ್ತದೆ. ನಂತರ ಮೋಟಾರ್ ಮೆಕ್ಯಾನಿಸಂ

ಡ್ರೈವಿಂಗ್ ಟೆಸ್ಟ್​ ಮತ್ತು ಡಿಸ್​ಕ್ರಿಪ್ಟಿವ್​ ಟೆಸ್ಟ್ ಗೆ ಒಳಗಾಗಬೇಕಾಗುತ್ತದೆ. ಇದರಲ್ಲಿ ಉತ್ತೀರ್ಣ ಆಗುವವರಿಗೆ ನೇರ ಸಂದರ್ಶನನಡೆಯಲಿದೆ.

ಅಭ್ಯರ್ಥಿಗಳು ಆನ್​​ಲೈನ್ ಮೂಲಕ ಅಪ್ಲೈ ಮಾಡಲು ಈ ಅಧಿಕೃತ ಜಾಲತಾಣ (https://cdn.digialm.com/EForms/configuredHtml/1258/85755/Registration.html) ಭೇಟಿ ನೀಡಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9986640811 ಗೆ ಕರೆ ಮಾಡುವಂತೆ ಇಲಾಖೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+