Infosys Layoffs update: ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಕೆ: ಕಂಪನಿ & ವಜಾ ಬಗ್ಗೆ ವರದಿಯಲ್ಲೇನಿದೆ?
ಬೆಂಗಳೂರು, ಫೆಬ್ರವರಿ 28: ಮಾಹಿತಿ ಮತ್ತು ತಂತ್ರಜ್ಞಾನ (ಐಟಿ) ಕಂಪನಿಗಳ ಪೈಕಿ ದೈತ್ಯ ಕಂಪನಿಯಾದ ಭಾರತೀಯ ಇನ್ಫೋಸಿಸ್ ಕಂಪನಿಯು (Infosys) ಇತ್ತೀಚೆಗೆ ಮೈಸೂರು ಕ್ಯಾಂಪಸ್‌ನಿಂದ ನೂರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ. ಈ ಕ್ರಮ ಖಂಡನೀಯ ಎಂದು ದೂರು ಸಲ್ಲಿಕೆಯಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಮಧ್ಯಂತರ ವರದಿಯೊಂದು ಸಲ್ಲಿಕೆ ಆಗಿದೆ. ವರದಿಯಲ್ಲಿ ಮಹತ್ವದ ಅಂಶಗಳನ್ನು ಉಲ್ಲೇಖಿಸಲಾಗಿದೆ.
ಕರ್ನಾಟಕ ಕಾರ್ಮಿಕ ಇಲಾಖೆಯು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಮಧ್ಯಂತರ ವರದಿ ಸಲ್ಲಿಸಿದೆ. ಮೈಸೂರು ಕ್ಯಾಂಪನ್‌ನಿಂದ ಇನ್ಫೋಸಿಸ್ ಸುಮಾರು 300 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಈ ವಜಾ ಪ್ರಕ್ರಿಯೆಯಲ್ಲಿ ಕಂಪನಿಯು ಯಾವುದೇ ಕಾರ್ಮಿಕ ಕಾನೂನುಗಳ ಉಲ್ಲಂಘನೆ ಆಗಿಲ್ಲ ಎಂದು ಆ ವರದಿಯಲ್ಲಿ ತಿಳಿಸಲಾಗಿದೆ.

ಕಂಪನಿಯು ವಜಾಗೊಳಿಸಿದ ವ್ಯಕ್ತಿಗಳು ಅವರು ಕಂಪನಿಯು ಉದ್ಯೋಗಿಗಳು ಅಲ್ಲ. ಬದಲಾಗಿ ತರಬೇತಿ ಪಡೆದವರು ಎಂದು ಇಲಾಖೆಯು ಸ್ಪಷ್ಟಪಡಿಸಿದೆ. ಹೀಗಾಗಿ ಇದರಲ್ಲಿ ಕಾರ್ಮಿಕ ಕಾನೂನು ಉಲ್ಲಂಘನೆ ಆಗಿಲ್ಲ ಎಂದು ಹೇಳಿದೆ. ಇನ್ನೊಂದು ವಾರದಲ್ಲಿ ಅಂತಿಮ ವರದಿಯೊಂದನ್ನು ಮತ್ತೆ ಸಲ್ಲಿಸಲಾಗುವುದು. ಸದ್ಯ ಈ ವರದಿ ಪ್ರತಿಯನ್ನು ಕೇಂದ್ರಕ್ಕೆ ರವಾನಿಸಲಾಗುವುದು ಎಂದು ಇಲಾಖೆ ತಿಳಿಸಿದೆ ಎಂದು 'ದಿ ಎಕನಾಮಿಕ್ ಟೈಮ್ಸ್ (ET)' ವರದಿ ಮಾಡಿದೆ.
ಈ ಪ್ರಕರಣ ತನಿಖೆ ಸಂಬಂಧ ಪಾಲ್ಗೊಂಡ ಹಿರಿಯ ಸರ್ಕಾರಿ ಅಧಿಕಾರಿಯ ವಜಾ ಸಂಬಂಧ ಯಾವುದೇ ಕಾನೂನುಗಳನ್ನು ಉಲ್ಲಂಘಿಸಿಲ್ಲ ಎಂಬುದು ದೃಢೌಆಗಿದೆ. ಇನ್ಫೋಸಿಸ್ ನಿಂದ ಹೊರ ಬಂದ ನೂರಾರು ವ್ಯಕ್ತಿಗಳು ಮತ್ತು ಕಂಪನಿ ಮಧ್ಯೆ ಉದ್ಯೋಗಿ-ಉದ್ಯೋಗದಾತ ಯಾವ ಸಂಬಂಧವು ಇರಲಿಲ್ಲ. ಅವರು ಕಂಪನಿ ನೌಕರರ ಎಂದು ಕರೆಯಲು ಯಾವ ನೇಮಕಾತಿ ಪತ್ರ ಸಹ ನೀಡಿರಲಿಲ್ಲ. ಅವರು ತರಬೇತಿ ಪಡೆದವರಾಗಿದ್ದಾರೆ. ಮೂರು ತಿಂಗಳು ಅಪ್ರೆಂಟಿಸ್ ತರಬೇತಿ ಪಡೆದಿದ್ದರು. ಅದಕ್ಕಾಗಿ ಸ್ಟೇಫಂಡ್ ಸ್ವೀಕರಿಸಿದ್ದಾರೆ ಎಂದು ತಿಳಿಸಲಾಗಿದೆ.
ಮಾರ್ಚ್ ಮೊದಲ ವಾರ ಅಂತಿಮ ವರದಿ
ಖಾಸಗಿ ಕಂಪನಿಗಳ ನೇಮಕಾತಿ, ಆಯ್ಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ ಈ ಪ್ರಕರಣದಲ್ಲಿ ಕಂಪನಿ ತಪ್ಪು ಮಾಡಿದೆಯೋ ಎಂಬುದರ ಕುರಿತು ದೂರಿನ ಮೇರೆಗೆ ವರದಿ ತಯಾರಿಸಲಾಗಿದೆ. ಇದರಲ್ಲಿ ತಪ್ಪುಗಳು ಕಂಡು ಬಂದಿಲ್ಲ. ಸದ್ಯ ಸಲ್ಲಿಕೆಯಾಗಿದ್ದು, ಪ್ರಾಥಮಿಕ ವರದಿ. ಮಾರ್ಚ್ ಮೊದಲ ವಾರ ಅಂದರೆ ಮಾರ್ಚ್ 5 ಒಳಗಾಗಿ ಅಂತಿಮ ವರದಿ ನೀಡಲಾಗುವುದು ಎಂದು ಇಲಾಖೆ ತಿಳಿಸಿದೆ.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಸೂಚನೆಯಂತೆ ಆಯುಕ್ತರ ನೇತೃತ್ವದ ತಂಡ ತನಿಖೆ ನಡೆಸಿತು. ಕೇವಲ ಮೈಸೂರು ಮಾತ್ರವಲ್ಲದೇ, ಬೆಂಗಳೂರಿನ ಕ್ಯಾಂಪಸ್‌ಗೂ ಭೇಟಿ ನೀಡಿ ಪರಿಶೀಲಿಸಿದೆ. ಕಂಪನಿಯು ಸರಿಯಾದ ಮಾರ್ಗದಲ್ಲಿದೆಯೇ? ನಿಯಮಗಳನ್ವಯ ನೇಮಕಾತಿ, ಆಯ್ಕೆ, ಮಾಡಿಕೊಂಡಿದೆ ಎಂದು ಕೆಲವು ದಾಖಲೆಗಳನ್ನು ತಡಕಾಡಿದ್ದಾರೆ.
ಅಧಿಕಾರಿಗಳ ಈ ಪರಿಶೀಲನೆಯಲ್ಲಿ 329 ತರಬೇತಿದಾರರು ಮೌಲ್ಯಮಾಪನ ಪರೀಕ್ಷೆಯಲ್ಲಿ ಉತ್ತೀರ್ಣ ಆಗಿಲ್ಲ. ಹೀಗಾಗಿ 2022 ರ ಬ್ಯಾಚ್‌ನ 600 ಕ್ಕೂ ಹೆಚ್ಚು ತರಬೇತಿದಾರರು ಮಾತ್ರವೇ ಮುಂದಿನ ಪ್ರಕ್ರಿಯೆಗೆ ಒಳಪಟ್ಟಿದ್ದಾರೆ. ಉಳಿದವರು ಒಳಪಟ್ಟಿಲ್ಲ. ಇದನ್ನು ವಜಾಗೊಂಡವರಿಗೆ ಹೇಳುವ ರೀತಿ ತಪ್ಪಾಗಿದೆ. ಅಂದರೆ ವಜಾಗೊಳಿಸಿದೆ. ಹೀಗಾಗಿ ಇದು ದೊಡ್ಡ ಪ್ರಮಾದದಂತೆ ಕಂಡು ಬಂದಿದೆ ಎಂಬುದು ಕಾರ್ಮಿಕ ಇಲಾಖೆ ಗಮನಕ್ಕೆ ಬಂದಿದೆ. ಇದರ ಆಧಾರದಲ್ಲಿಯೇ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿ, ಸ್ಪಷ್ಟನೆ ನೀಡಿದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications