Get Updates
Get notified of breaking news, exclusive insights, and must-see stories!

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಉದ್ಯೋಗ ಭರ್ತಿಗೆ ಗ್ರೀನ್‌ ಸಿಗ್ನಲ್‌

ಬೆಂಗಳೂರು, ಏಪ್ರಿಲ್‌ 11: ಮಾನವ ಸಂಪನ್ಮೂಲ ಇಲ್ಲದೆ ಜನಪರ ಕೆಲಸ ಸಾಧ್ಯವಿಲ್ಲ. ಹೀಗಾಗಿ ಇಲಾಖೆಗೆ ಮತ್ತಷ್ಟ ಬಲ ತುಂಬಲು ಖಾಲಿ ಇರುವ ಎಲ್ಲಾ ಸ್ಥಾನಗಳನ್ನು ಭರ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಗ್ರೀನ್‌ ಸಿಗ್ನಲ್‌ ನೀಡಿದ್ದು, ಈ ನಿರ್ಧಾರ ಇಲಾಖೆಯನ್ನು ಮತ್ತಷ್ಟು ಜನಪರವಾಗಿ ಕೆಲಸ ಮಾಡಲು ಅನುವು ಮಾಡಿಕೊಟ್ಟಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಮೂಲಕ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದ್ದು, ಸಿದ್ದರಾಮಯ್ಯನವರು ಕಳೆದ ವರ್ಷವೇ 750 ಜನ ಸರ್ಕಾರಿ ಸರ್ವೇಯರ್ ನೇಮಕಾತಿಗೆ ಒಪ್ಪಿಗೆ ಸೂಚಿಸಿದ್ದರು. ಹುದ್ದೆ ಭರ್ತಿಗೆ ಈಗಾಗಲೇ ಕೆಪಿಎಸ್‌ಸಿ ಪರೀಕ್ಷೆ ಮುಗಿಸಿ ಅಂತಿಮ ಪರೀಕ್ಷೆ ಮುಂದಿನ ಮೇ 10-11ಕ್ಕೆ ನಿಗದಿಯಾಗಿದೆ. ಸಂದರ್ಶನ ಇಲ್ಲದೆ ಮೆರಿಟ್‌ ಆಧಾರದಲ್ಲಿ ನೇಮಕಾತಿ ನಡೆಯಲಿದ್ದು, ಒಂದು ರೂಪಾಯಿಯೂ ಲಂಚಕ್ಕೆ ಆಸ್ಪದವಿಲ್ಲ. ಅಲ್ಲದೆ, ಖಾಲಿ ಇರುವ 39 ಎಡಿಎಲ್‌ಆರ್‌ ಸ್ಥಾನಗಳನ್ನೂ ತುಂಬಲು ಒಪ್ಪಿಗೆ ದೊರೆತಿದೆ ಎಂದರು.

Information About Job Vacancies In The Revenue Department

11 ಇ ಸ್ಕೆಚ್‌ ಜೀಮೀನಿನ ಹದ್ದುಬಸ್ತು, ತತ್ಕಾಲ್‌ ಪೋಡಿ, ಇ ಸ್ವತ್ತು, ಸ್ವಾವಲಂಭಿ, ಭೂ ಮಂಜೂರಿ ಪ್ರಕರಣಗಳ ಸರ್ವೇ, ಕೆರೆ ಬಂಡಿದಾರಿ ಸರ್ವೇ, ಭೂ ಪರಿವರ್ತನೆ ಸರ್ವೇ, ಕಂದಾಯ ಅರಣ್ಯ ಗಡಿ ನಿಗದಿಗೊಳಿಸುವ ಜಂಟಿ ಸರ್ವೇ, ಇವು ನಮ್ಮ ಇಲಾಖೆಯ ಪ್ರಮುಖ ಕೆಲಸ. ಕಳೆದ 23 ತಿಂಗಳಲ್ಲಿ ಈವರೆಗೆ 26 ಲಕ್ಷ ಸರ್ವೇ ಪ್ರಕರಣಗಳನ್ನು ಜನತೆಗೆ ಮಾಡಿಕೊಟ್ಟಿದ್ದೇವೆ. ಒಂದು ದಿನಕ್ಕೆ ಸರಾಸರಿ 5 ರಿಂದ 6 ಸಾವಿರ ಪ್ರಕರಣಗಳ್ನು ಸರ್ವೇ ಮಾಡಿಕೊಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ನಮ್ಮ ಸರ್ಕಾರ ಬರುವ ಮೊದಲು ಹದ್ದುಬಸ್ತಿಗೆ ಸರಾಸರಿ ಒಂದು ಅರ್ಜಿ ಕೊಟ್ರೆ ಸುಮಾರು 3 ರಿಂದ 6 ತಿಂಗಳಾಗುತ್ತಿತ್ತು. ಆದರೆ ಈಗ ಗರಿಷ್ಟ 8 ದಿನದಲ್ಲಿ ನಮ್ಮ ಸರ್ಕಾರದಲ್ಲಿ ಹದ್ದುಬಸ್ತು ಮಾಡಿಕೊಡುತ್ತಿದ್ದೇವೆ. ಹಾವೇರಿಯಲ್ಲಿ ಒಂದು ಹದ್ದುಬಸ್ತು ಸರ್ವೇಗೆ 2 ವರ್ಷ ಆದರೂ ಆಗಿಲ್ಲ ಎಂದು ಶಾಸಕರೇ ನನ್ನನ್ನು ಪ್ರಶ್ನೆ ಮಾಡಿದ್ರು. ಈ ಬಗ್ಗೆ ನಾನು ವಿಚಾರಿಸಿದಾಗ ಆ ದೂರು ನಿಜವಾಗಿತ್ತು. ನಮ್ಮ ಹಿಂದಿನ ಸಿಎಂ ಹಾವೇರಿ ಜಿಲ್ಲೆಯವರೇ ಆಗಿದ್ದರು. ನಾನು ಇಂದಿನ ಡೇಟಾ ಪ್ರಕಾರ ಹೇಳೋದಾದ್ರೆ 8 ದಿನಕ್ಕೆ ಹದ್ದುಬಸ್ತು ಮತ್ತು ಕೇವಲ ಮೂರು ದಿನಕ್ಕೆ 11ಇ ಸ್ಕೆಚ್‌ ಮಾಡಿಕೊಡುತ್ತಿದ್ದೇವೆ. ಈ ಮೊದಲು ತಿಂಗಳಾನುಗಟ್ಟಲೆ ಕಾಯಬೇಕಾದ್ದ ಪರಿಸ್ಥಿತಿಯನ್ನು ಬದಲಿಸಿದ್ದೇವೆ ಎಂದರು.

ರಾಜ್ಯದಲ್ಲಿ ಸುಮಾರು 10 ಲಕ್ಷ ರೈತರಿಗೆ ಹತ್ತಾರು ವರ್ಷಗಳ ಹಿಂದೆ ಸರ್ಕಾರಿ ಜಮೀನು ಅಕ್ರಮ ಸಕ್ರಮದಡಿ ಮಂಜೂರಾಗಿದೆ. ಜಮೀನು ಮಂಜೂರಾಗಿದ್ದರೂ ಪೋಡಿಯಾಗಿ ಆರ್.ಟಿ.ಸಿ ಆಗದೆ ಇರುವುದರಿಂದ, ಅಂತಹ ರೈತರ ಪರಿಸ್ಥಿತಿ ತ್ರಿಶಂಕುವಿನಂತೆ ಆಗಿದೆ. ತಾಲ್ಲೂಕು ಕಛೇರಿ, ಸರ್ವೆ ಕಛೇರಿಗಳಿಗೆ ಅಲೆದು ಅಲೆದು ಪ್ರಯೋಜನವಾಗದೆ ತೀವ್ರ ತೊಂದರೆಗೆ ತುತ್ತಾಗಿದ್ದಾರೆ. ಈ ಬಗ್ಗೆ ಬಹಳ ವರ್ಷಗಳಿಂದ ಚರ್ಚೆಗಳು, ಪ್ರಯತ್ನಗಳು ಆಗುತ್ತಿದ್ದರೂ ಸರಿಯಾದ ಪರಿಹಾರ ದೊರೆತಿರುವುದಿಲ್ಲ.

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ಈ ಸಮಸ್ಯೆಯನ್ನು ಪರಿಹರಿಸಲು, ಸೂಕ್ತ ಪರಿಹಾರ ಕ್ರಮಕೈಗೊಳ್ಳಲು ಸೂಚಿಸಿದ ಹಿನ್ನೆಲೆಯಲ್ಲಿ, ಇಲಾಖೆ ಈ ಕೆಲಸವನ್ನು ಗಂಭೀರವಾಗಿ ಪರಿಗಣಿಸಿತ್ತು. ಪರಿಣಾಮ ಸರಳೀಕೃತ ದುರಸ್ಥಿ ಪೋಡಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈಗ ಇಲಾಖೆಯ ನೌಕರರ ಸಹಾಯದಿಂದ ಎಲ್ಲವನ್ನೂ ಆನ್‌ಲೈನ್‌ ಮೂಲಕವೇ ಮಾಡಲಾಗುತ್ತಿದ್ದು, ಕಳೆದ ಮೂರು ತಿಂಗಳಲ್ಲಿ 20 ಸಾವಿರ ರೈತರಿಗೆ ದುರಸ್ಥಿ ಮಾಡಿಕೊಟ್ಟಿದ್ದೇವೆ. ಅಲ್ಲದೆ, ಒಂದು ರೂಪಾಯಿಯೂ ಲಂಚವಿಲ್ಲದೆ ಪಾರದರ್ಶಕವಾಗಿ ಈ ಕೆಲಸವನ್ನು ಮಾಡಲಾಗುತ್ತಿದೆ ಎಂಬುದು ಗಮನಾರ್ಹ ಎಂದರು.

ಹತ್ತಾರು ವರ್ಷದಿಂದ ಪೋಡಿ ಆಗದ ಖಾಸಗಿ ಜಮೀನಿಗೆ ಪೋಡಿ ಮುಕ್ತ ಅಭಿಯಾನ ನಡೆಸಬೇಕು ಎಂದು ಸಿದ್ದರಾಮಯ್ಯನವರು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗಲೇ ಕೆಲಸ ಆರಂಭಿಸಿದ್ದರು. ಆಗಲೇ ರಾಜ್ಯದ 30 ಸಾವಿರ ಗ್ರಾಮಗಳ ಪೈಕಿ 16630 ಗ್ರಾಮಗಳನ್ನು ಪೋಡಿ ಮಾಡಲಾಗಿತ್ತು. ಆದರೆ, ಕಳೆದ ನಾಲ್ಕು ವರ್ಷ ಹಿಂದಿನ ಸರ್ಕಾರದ ಅವಧಿಯಲ್ಲಿ ಕೇವಲ 2 ಸಾವಿರ ಗ್ರಾಮಗಳಲ್ಲಿ ಮಾತ್ರ ಪೋಡಿ ಮಾಡಲಾಗಿದೆ. ಆದರೆ, ಪ್ರಸ್ತುತ 23 ತಿಂಗಳಲ್ಲಿ 2079 ಗ್ರಾಮಗಳನ್ನು ಈಗಾಗಲೇ ಪೋಡಿ ಮುಕ್ತ ಮಾಡಲಾಗಿದೆ. ಅಲ್ಲದೆ, ಉಳಿದ ಗ್ರಾಮಗಳನ್ನು ಮುಂದಿನ ಒಂದು ವರ್ಷದಲ್ಲಿ ಪೋಡಿ ಮುಕ್ತ ಮಾಡುವ ಸವಾಲನ್ನು ತೆಗೆದುಕೊಳ್ಳಲಾಗಿದೆ ಎಂದರು.

11 ಇ ಸ್ಕೆಚ್‌ ಜೀಮೀನಿನ ಹದ್ದುಬಸ್ತು, ತತ್ಕಾಲ್‌ ಪೋಡಿ, ಇ ಸ್ವತ್ತು, ಸ್ವಾವಲಂಭಿ, ಭೂ ಮಂಜೂರಿ ಪ್ರಕರಣಗಳ ಸರ್ವೇ, ಕೆರೆ ಬಂಡಿದಾರಿ ಸರ್ವೇ, ಭೂ ಪರಿವರ್ತನೆ ಸರ್ವೇ, ಕಂದಾಯ ಅರಣ್ಯ ಗಡಿ ನಿಗದಿಗೊಳಿಸುವ ಜಂಟಿ ಸರ್ವೇ, ಇವು ನಮ್ಮ ಇಲಾಖೆಯ ಪ್ರಮುಖ ಕೆಲಸ. ಕಳೆದ 23 ತಿಂಗಳಲ್ಲಿ ಈವರೆಗೆ 26 ಲಕ್ಷ ಸರ್ವೇ ಪ್ರಕರಣಗಳನ್ನು ಜನತೆಗೆ ಮಾಡಿಕೊಟ್ಟಿದ್ದೇವೆ. ಒಂದು ದಿನಕ್ಕೆ ಸರಾಸರಿ 5 ರಿಂದ 6 ಸಾವಿರ ಪ್ರಕರಣಗಳ್ನು ಸರ್ವೇ ಮಾಡಿಕೊಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ನಮ್ಮ ಸರ್ಕಾರ ಬರುವ ಮೊದಲು ಹದ್ದುಬಸ್ತಿಗೆ ಸರಾಸರಿ ಒಂದು ಅರ್ಜಿ ಕೊಟ್ರೆ ಸುಮಾರು 3 ರಿಂದ 6 ತಿಂಗಳಾಗುತ್ತಿತ್ತು. ಆದರೆ ಈಗ ಗರಿಷ್ಟ 8 ದಿನದಲ್ಲಿ ನಮ್ಮ ಸರ್ಕಾರದಲ್ಲಿ ಹದ್ದುಬಸ್ತು ಮಾಡಿಕೊಡುತ್ತಿದ್ದೇವೆ. ಹಾವೇರಿಯಲ್ಲಿ ಒಂದು ಹದ್ದುಬಸ್ತು ಸರ್ವೇಗೆ 2 ವರ್ಷ ಆದರೂ ಆಗಿಲ್ಲ ಎಂದು ಶಾಸಕರೇ ನನ್ನನ್ನು ಪ್ರಶ್ನೆ ಮಾಡಿದ್ರು. ಈ ಬಗ್ಗೆ ನಾನು ವಿಚಾರಿಸಿದಾಗ ಆ ದೂರು ನಿಜವಾಗಿತ್ತು. ನಮ್ಮ ಹಿಂದಿನ ಸಿಎಂ ಹಾವೇರಿ ಜಿಲ್ಲೆಯವರೇ ಆಗಿದ್ದರು. ನಾನು ಇಂದಿನ ಡೇಟಾ ಪ್ರಕಾರ ಹೇಳೋದಾದ್ರೆ 8 ದಿನಕ್ಕೆ ಹದ್ದುಬಸ್ತು ಮತ್ತು ಕೇವಲ ಮೂರು ದಿನಕ್ಕೆ 11ಇ ಸ್ಕೆಚ್‌ ಮಾಡಿಕೊಡುತ್ತಿದ್ದೇವೆ. ಈ ಮೊದಲು ತಿಂಗಳಾನುಗಟ್ಟಲೆ ಕಾಯಬೇಕಾದ್ದ ಪರಿಸ್ಥಿತಿಯನ್ನು ಬದಲಿಸಿದ್ದೇವೆ ಎಂದರು.

ರಾಜ್ಯದಲ್ಲಿ ಸುಮಾರು 10 ಲಕ್ಷ ರೈತರಿಗೆ ಹತ್ತಾರು ವರ್ಷಗಳ ಹಿಂದೆ ಸರ್ಕಾರಿ ಜಮೀನು ಅಕ್ರಮ ಸಕ್ರಮದಡಿ ಮಂಜೂರಾಗಿದೆ. ಜಮೀನು ಮಂಜೂರಾಗಿದ್ದರೂ ಪೋಡಿಯಾಗಿ ಆರ್.ಟಿ.ಸಿ ಆಗದೆ ಇರುವುದರಿಂದ, ಅಂತಹ ರೈತರ ಪರಿಸ್ಥಿತಿ ತ್ರಿಶಂಕುವಿನಂತೆ ಆಗಿದೆ. ತಾಲ್ಲೂಕು ಕಛೇರಿ, ಸರ್ವೆ ಕಛೇರಿಗಳಿಗೆ ಅಲೆದು ಅಲೆದು ಪ್ರಯೋಜನವಾಗದೆ ತೀವ್ರ ತೊಂದರೆಗೆ ತುತ್ತಾಗಿದ್ದಾರೆ. ಈ ಬಗ್ಗೆ ಬಹಳ ವರ್ಷಗಳಿಂದ ಚರ್ಚೆಗಳು, ಪ್ರಯತ್ನಗಳು ಆಗುತ್ತಿದ್ದರೂ ಸರಿಯಾದ ಪರಿಹಾರ ದೊರೆತಿರುವುದಿಲ್ಲ.

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ಈ ಸಮಸ್ಯೆಯನ್ನು ಪರಿಹರಿಸಲು, ಸೂಕ್ತ ಪರಿಹಾರ ಕ್ರಮಕೈಗೊಳ್ಳಲು ಸೂಚಿಸಿದ ಹಿನ್ನೆಲೆಯಲ್ಲಿ, ಇಲಾಖೆ ಈ ಕೆಲಸವನ್ನು ಗಂಭೀರವಾಗಿ ಪರಿಗಣಿಸಿತ್ತು. ಪರಿಣಾಮ ಸರಳೀಕೃತ ದುರಸ್ಥಿ ಪೋಡಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈಗ ಇಲಾಖೆಯ ನೌಕರರ ಸಹಾಯದಿಂದ ಎಲ್ಲವನ್ನೂ ಆನ್‌ಲೈನ್‌ ಮೂಲಕವೇ ಮಾಡಲಾಗುತ್ತಿದ್ದು, ಕಳೆದ ಮೂರು ತಿಂಗಳಲ್ಲಿ 20 ಸಾವಿರ ರೈತರಿಗೆ ದುರಸ್ಥಿ ಮಾಡಿಕೊಟ್ಟಿದ್ದೇವೆ. ಅಲ್ಲದೆ, ಒಂದು ರೂಪಾಯಿಯೂ ಲಂಚವಿಲ್ಲದೆ ಪಾರದರ್ಶಕವಾಗಿ ಈ ಕೆಲಸವನ್ನು ಮಾಡಲಾಗುತ್ತಿದೆ ಎಂಬುದು ಗಮನಾರ್ಹ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+