Indian Railways Recruitment 2023: 1,104 ಹುದ್ದೆಗಳಿಗೆ ಅರ್ಜಿ ಆಹ್ವಾನ- ಕೊನೆಯ ದಿನಾಂಕ ಯಾವಾಗ ತಿಳಿಯಿರಿ

ನವದೆಹಲಿ, ನವೆಂಬರ್‌, 29: ಸಾರಿಗೆ ವಿಭಾಗದಲ್ಲಿ ಭಾರತೀಯ ರೈಲ್ವೆಯು ಅತೀ ದೊಡ್ಡ ಹಾಗೂ ತುಂಬಾ ಜನಪ್ರಿಯತೆಯನ್ನು ಪಡೆದಿರುವ ಸಾರಿಗೆಯಾಗಿದೆ. ಇದರಲ್ಲೂ ನೈರುತ್ಯ ವಲಯ, ಈಶಾನ್ಯ, ದಕ್ಷಿಣ ರೈಲ್ವೆ ಹೀಗೆ ಇನ್ನಿತರ ವಲಯಗಳನ್ನು ಕೂಡ ಹೊಂದಿದೆ. ಇದೀಗ ಭಾರತೀಯ ರೈಲ್ವೆಯ ಈಶಾನ್ಯ ವಲಯದಲ್ಲಿ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗಿದೆ. ಹಾಗಾದರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಏನೆಲ್ಲಾ ವಿದ್ಯಾರ್ಹತೆ ಹೊಂದಿರಬೇಕು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಭಾರತೀಯ ರೈಲ್ವೆಯ ಈಶಾನ್ಯ ವಲಯವು ಗೋರಖ್‌ಪುರದಲ್ಲಿ ಒಟ್ಟು 1,104 ಅಪ್ರೆಂಟಿಸ್‌ಶಿಪ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದೆ. ನೇಮಕಾತಿಯನ್ನು ಅಪ್ರೆಂಟಿಸ್‌ಶಿಪ್ ಕಾಯಿದೆ 1961 ಮತ್ತು1962ರ ಅಡಿಯಲ್ಲಿ ನಡೆಸಲಾಗುತ್ತದೆ. ಆನ್‌ಲೈನ್ ಅಪ್ಲಿಕೇಶನ್‌ಗಳು ನವೆಂಬರ್ 25, 2023ರಿಂದ ಪ್ರಾರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ ಡಿಸೆಂಬರ್ 24, 2023ರ ಮೊದಲು ಅರ್ಜಿ ಸಲ್ಲಿಸಬಹುದಾಗಿದೆ.

Indian Railways Recruitment 2023: Applications invited for 1,104 Apprenticeship Posts

ಈಶಾನ್ಯ ರೈಲ್ವೆ ವಲಯದ ಅಧಿಸೂಚನೆಯ ಪ್ರಕಾರ, ಮೆಕ್ಯಾನಿಕಲ್ ವರ್ಕ್‌ಶಾಪ್ ಗೋರಖ್‌ಪುರ, ಸಿಗ್ನಲ್ ವರ್ಕ್‌ಶಾಪ್ ಗೋರಖ್‌ಪುರ ಕ್ಯಾಂಟ್, ಬ್ರಿಡ್ಜ್ ವರ್ಕ್‌ಶಾಪ್ ಗೋರಖ್‌ಪುರ ಕ್ಯಾಂಟ್, ಮೆಕ್ಯಾನಿಕಲ್ ವರ್ಕ್‌ಶಾಪ್ ಇಜ್ಜತ್‌ ನಗರ, ಡೀಸೆಲ್ ಶೆಡ್ ಇಜ್ಜತ್‌ ನಗರ, ಕ್ಯಾರೇಜ್ ಮತ್ತು ವ್ಯಾಗನ್ ಇಜ್ಜತ್‌ ನಗರ, ಕ್ಯಾರೇಜ್ ಮತ್ತು ವ್ಯಾಗನ್ ಲಕ್ನೋ, ಡೀಸೆಲ್ ಶೆಡ್ ಗೊಂಡ, ಕ್ಯಾರೇಜ್‌ ಮತ್ತು ವ್ಯಾಗನ್ ವಾರಣಾಸಿಯಲ್ಲಿ ಅಪ್ರೆಂಟಿಸ್‌ಶಿಪ್ ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದೆ.

ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಕನಿಷ್ಠ 50% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಜೊತೆಗೆ ಅವರು ಸಂಬಂಧಿತ ಐಟಿಐ ಪ್ರಮಾಣಪತ್ರವನ್ನು ಹೊಂದಿರಬೇಕು. ಕನಿಷ್ಠ 15 ವರ್ಷ ವಯಸ್ಸಿನವರಾಗಿರಬೇಕು ಮತ್ತು 24 ವರ್ಷಕ್ಕಿಂತ ಹೆಚ್ಚಿರಬಾರದು. SC ಮತ್ತು ST ಅಭ್ಯರ್ಥಿಗಳು 5 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ಹೊಂದಿರುತ್ತಾರೆ. ಮತ್ತು ಒಬಿಸಿ ಅಭ್ಯರ್ಥಿಗಳು ಮೂರು ವರ್ಷಗಳ ವಿಶ್ರಾಂತಿಯನ್ನು ಪಡೆಯುತ್ತಾರೆ. ಇನ್ನು ಅಂಗವಿಕಲ ಅಭ್ಯರ್ಥಿಗಳಿಗೆ ಗರಿಷ್ಠ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕದ ಮಾಹಿತಿ

ರೈಲ್ವೆಯಲ್ಲಿ ಅಪ್ರೆಂಟಿಸ್‌ಶಿಪ್ ನೇಮಕಾತಿಗಾಗಿ, ಅರ್ಜಿ ಶುಲ್ಕ 100 ರೂಪಾಯಿ ಆದರೆ, SC, ST, EWS, ಅಂಗವಿಕಲರು ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಶುಲ್ಕದಿಂದ ವಿನಾಯಿತಿ ಪಡೆದಿರುತ್ತಾರೆ.

ಅರ್ಜಿ ಸಲ್ಲಿಸುವುದು ಹೇಗೆ?

ಅಪ್ರೆಂಟಿಸ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈಶಾನ್ಯ ರೈಲ್ವೆಯ ಅಧಿಕೃತ ವೆಬ್‌ಸೈಟ್ www.ner.indianrailways.gov.inಗೆ ಭೇಟಿ ನೀಡಬೇಕು. ಭಾರತೀಯ ರೈಲ್ವೆಯ ಈಶಾನ್ಯ ವಲಯದ ಅಪ್ರೆಂಟಿಸ್‌ಶಿಪ್ ಅರ್ಜಿಯ ಅಂತಿಮ ದಿನಾಂಕ ಡಿಸೆಂಬರ್ 24, 2023ರಂದು ಸಂಜೆ 5:00 ಗಂಟೆ ಆಗಿದೆ. ಅಪ್ರೆಂಟಿಸ್‌ಶಿಪ್‌ಗೆ ಆಯ್ಕೆಯು 10ನೇ ತರಗತಿಯ ಬೋರ್ಡ್ ಪರೀಕ್ಷೆ ಮತ್ತು ಐಟಿಐ ಅಂಕಗಳನ್ನು ಸಂಯೋಜಿಸುವ ಮೂಲಕ ಮೆರಿಟ್ ಅನ್ನು ಆಧರಿಸಿರುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ಎರಡೂ ಫಲಿತಾಂಶಗಳು ಸಮಾನ ತೂಕವನ್ನು ಹೊಂದಿರುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+