ಇಂಡಿಯನ್ ಬ್ಯಾಂಕಿನಲ್ಲಿ 64ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು, ಡಿಸೆಂಬರ್ 12: ಇಂಡಿಯನ್ ಬ್ಯಾಂಕ್ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ನೇಮಕಾತಿ ಪ್ರಕಟಣೆಯನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.
ಸೆಕ್ಯುರಿಟಿ ಗಾರ್ಡ್ ಕಮ್ ಪ್ಯೂನ್(peon) ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವವರು ಡಿಸೆಂಬರ್ 30,2017ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಬ್ಯಾಂಕ್ ಹೆಸರು: ಇಂಡಿಯನ್ ಬ್ಯಾಂಕ್
ಹುದ್ದೆ ಹೆಸರು: ಸೆಕ್ಯುರಿಟಿ ಗಾರ್ಡ್ ಕಮ್ Peon
ಒಟ್ಟು ಹುದ್ದೆಗಳು: 64
ಎಲ್ಲಿ ಉದ್ಯೋಗ: ಭಾರತದೆಲ್ಲೆಡೆ
ಕೊನೆ ದಿನಾಂಕ: ಡಿಸೆಂಬರ್ 30, 2017
ಸಂಬಳ ವಿವರ: 9,560-18,545/-ರು
ವಿದ್ಯಾರ್ಹತೆ: 10ನೇ ತರಗತಿ ಪರೀಕ್ಷೆಯಲ್ಲಿ ಪಾಸಾಗಿರಬೇಕು ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸ್. ಮಾಜಿ ಯೋಧರು ಭಾರತೀಯ ಆರ್ಮಿ/ನೇವಿ/ ಏರ್ ಪೋರ್ಸ್ ಸಿಬ್ಬಂದಿಗೆ ಆದ್ಯತೆ.
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಸಂಬಂಧಿಸಿದ ಅರ್ಜಿಯನ್ನು ಇಂಡಿಯನ್ ಬ್ಯಾಂಕ್ ವೆಬ್ ಸೈಟಿನಿಂದ ಡೌನ್ ಲೋಡ್ ಮಾಡಿಕೊಂಡು, ಅಗತ್ಯ ದಾಖಲೆಗಳೊಂದಿಗೆ ರಿಜಿಸ್ಟ್ರಡ್/ಸ್ಪೀಡ್ ಪೋಸ್ಟ್ ಮೂಲಕ ಪ್ರಧಾನ ವ್ಯವಸ್ಥಾಪಕರು, ಎಚ್ಆರ್ ಎಂ ವಿಭಾಗಕ್ಕೆ ಕಳಿಸತಕ್ಕದ್ದು.
ಅರ್ಜಿ ಸಲ್ಲಿಸುವ ವಿವರ ಹಾಗೂ ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ
(ಒನ್ಇಂಡಿಯಾ ಸುದ್ದಿ)












Click it and Unblock the Notifications