ಭವಿಷ್ಯದ ಉದ್ಯೋಗಿಗಳನ್ನು ವಿಫಲಗೊಳಿಸುತ್ತಿದೆಯೇ ಭಾರತದ ಶಿಕ್ಷಣ ವ್ಯವಸ್ಥೆ?

ಇತ್ತೀಚೆಗೆ ನಡೆದ ಒಂದು ಸಮೀಕ್ಷೆಯೊಂದರ ಪ್ರಕಾರ, ಭಾರತದ ಅರ್ಧದಷ್ಟು ಪದವೀಧರರು ಮಾತ್ರವೇ ಉದ್ಯೋಗ ಪಡೆದುಕೊಳ್ಳಲು ಅರ್ಹರಾಗಿದ್ದಾರೆ. ಇದು ಭಾರತ ಸಾಧಿಸುತ್ತಿರುವ ಕ್ಷಿಪ್ರ ಪ್ರಗತಿ, ಭಾರತದ ಅತಿದೊಡ್ಡ ಯುವ ಜನಸಂಖ್ಯೆ ಮತ್ತು ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಯಲ್ಲಿ ಬೇಡಿಕೆಗಳ ನಡುವೆ ಇರುವ ಅಂತರಕ್ಕೆ ಸಾಕ್ಷಿಯಾಗಿದೆ.

ದಿ ಇಂಡಿಯಾ ಸ್ಕಿಲ್ ರಿಪೋರ್ಟ್ 2024 ಭಾರತದ ಲಕ್ಷಾಂತರ ಪದವಿ ಮತ್ತು ಸ್ನಾತಕೋತ್ತರ ಪದವಿ ಹೊಂದಿರುವ ಉದ್ಯೋಗಿಗಳ ಸಮೀಕ್ಷೆ ನಡೆಸಿ, ಅವರ ಉದ್ಯೋಗಶೀಲತೆಯ ಮಟ್ಟವನ್ನು ಅರಿಯಲು ಪ್ರಯತ್ನ ನಡೆಸಿತು. ಈ ಸಮೀಕ್ಷೆ ವಿವಿಧ ಕ್ಷೇತ್ರಗಳಿಗೆ ಸೇರಿದ ಅಂದಾಜು 150 ಸಂಸ್ಥೆಗಳಿಂದ ಮಾಹಿತಿ ಕಲೆಹಾಕಿತು. ಅವರ ಪೈಕಿ, ಕೇವಲ 51.25% ಜನರು ಮಾತ್ರವೇ ಉದ್ಯೋಗಕ್ಕೆ ಅರ್ಹರು ಎಂದು ತಿಳಿಸಿತ್ತು.

India s Education System Failing the Employees of Future

2014ರ ಸಮೀಕ್ಷೆಯ ಪ್ರಕಾರ, ಕೇವಲ 34% ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರು ಮಾತ್ರವೇ ಉದ್ಯೋಗಕ್ಕೆ ಸಮರ್ಥರಾಗಿದ್ದರು. ಇದಕ್ಕೆ ಹೋಲಿಸಿದರೆ, 2024ರ ಸಮೀಕ್ಷೆ ಒಂದು ಧನಾತ್ಮಕ ಬದಲಾವಣೆಯಾಗಿದೆ. ಆದರೆ, ಹಲವಾರು ಅರ್ಥಶಾಸ್ತ್ರಜ್ಞರು ಇಂದಿಗೂ ಭಾರತದ ಬಹಳಷ್ಟು ವಿಶ್ವವಿದ್ಯಾಲಯಗಳು ತಮ್ಮ ವಿದ್ಯಾರ್ಥಿಗಳನ್ನು ಪ್ರಾಯೋಗಿಕ, ನೈಜ ಜಗತ್ತಿನ ಕೌಶಲಗಳಿಗೆ ಸಿದ್ಧಪಡಿಸಲು ವಿಫಲವಾಗುತ್ತಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಉದ್ಯೋಗ ಪಡೆದುಕೊಳ್ಳಲು ಇಂದು ಕೇವಲ ಪದವಿ ಒಂದೇ ಸಾಕಾಗುವುದಿಲ್ಲ. ಯಾಕೆಂದರೆ, ಉದ್ಯೋಗ ಸಿದ್ಧತೆಯಲ್ಲಿ ಅಪ್ರೆಂಟಿಸ್‌ಶಿಪ್‌ನಂತಹ ಔದ್ಯೋಗಿಕ ಅನುಭವಗಳೊಡನೆ, ಪ್ರಾಯೋಗಿಕ ಕೌಶಲಗಳನ್ನು ಹೊಂದುವುದೂ ಪ್ರಮುಖವಾಗುತ್ತದೆ. ಅದರೊಡನೆ, ಇಂದು ಬಹಳಷ್ಟು ಸಂಖ್ಯೆಯಲ್ಲಿ ಇಂಜಿನಿಯರಿಂಗ್ ಪದವೀಧರರು ಉದ್ಯಮದ ಅವಶ್ಯಕತೆಗಳಿಗೆ ಸೂಕ್ತರಾಗಿಲ್ಲ ಎಂದು ಒಂದು ವರದಿಗಳಿಂದ ತಿಳಿದುಬಂದಿದೆ.

ವೈದ್ಯರು ಮತ್ತು ಶುಶ್ರೂಷಕರ ಕೊರತೆ: ಈ ವರದಿ ಭಾರತದ ಆರೋಗ್ಯ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳತ್ತ ಬೆಳಕು ಚೆಲ್ಲಿದ್ದು, ಅದರಲ್ಲೂ ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಮತ್ತು ಶುಶ್ರೂಷಕರನ್ನು ಹೊಂದುವುದು ಅತ್ಯಂತ ಕಷ್ಟಕರವಾಗಿದೆ ಎಂದು ವಿವರಿಸಿದೆ. ಸಾಕಷ್ಟು ಸಂಖ್ಯೆಯಲ್ಲಿ ತರಬೇತಿ ಹೊಂದಿರುವ ವೃತ್ತಿಪರರಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ತಜ್ಞ ವೈದ್ಯರ ಕೊರತೆಯಿದೆ. ಈ ಸಮಸ್ಯೆ ಹಿಂದಿನಿಂದಲೇ ಇದ್ದರೂ, ಅದು ಈಗ ಇನ್ನಷ್ಟು ತೀವ್ರವಾಗಿದೆ.

ಒಂದು ಸಮೀಕ್ಷೆಯ ಪ್ರಕಾರ, ಮಾರ್ಚ್ 2023ರ ವೇಳೆಗೆ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕೇವಲ 4,413 ತಜ್ಞ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಸಮುದಾಯ ಆರೋಗ್ಯ ಕೇಂದ್ರಗಳಿಗೆ 22,000 ತಜ್ಞ ವೈದ್ಯರ ಅವಶ್ಯಕತೆಯಿದೆ. ಆದರೆ ಇಂದಿನ ಶಿಕ್ಷಣ ಮತ್ತು ತರಬೇತಿ ವ್ಯವಸ್ಥೆ ಆರೋಗ್ಯ ಕ್ಷೇತ್ರಕ್ಕೆ ಅವಶ್ಯಕವಾದ ಪ್ರಾಯೋಗಿಕ ಕೌಶಲಗಳನ್ನು ಪದವೀಧರರಿಗೆ ಒದಗಿಸಲು ವಿಫಲವಾಗುತ್ತಿವೆ.

ಅಥವಾ ಸ್ಥಳೀಯ ಸಮುದಾಯಗಳ ನಿರ್ದಿಷ್ಟ ಅವಶ್ಯಕತೆಗಳನ್ನು ಪೂರೈಸುವ ಸಾಮರ್ಥ್ಯವನ್ನು ಒದಗಿಸುತ್ತಿಲ್ಲ. ಇದರ ಪರಿಣಾಮವಾಗಿ, ಸಂಪನ್ಮೂಲಗಳ ಬಳಕೆ ಅಸಮರ್ಪಕವಾಗಿ, ಆರೋಗ್ಯ ಕ್ಷೇತ್ರದ ಉದ್ಯೋಗಿಗಳ ಹಂಚಿಕೆಯೂ ಅಸಮಾನ ಆಗಿರುತ್ತದೆ.

ಕಾರ್ಪೋರೇಟ್ ಉದ್ಯೋಗಗಳ ಕುರಿತು ಅತಿಯಾದ ನಿರೀಕ್ಷೆ: ಈ ವರ್ಷದ ಇಂಡಿಯಾ ಎಂಪ್ಲಾಯ್‌ಮೆಂಟ್ ವರದಿ ಪ್ರಕಾರ, ಭಾರತದ ನಿರುದ್ಯೋಗಿಗಳ ಪ್ರಮಾಣದಲ್ಲಿ ಅತಿದೊಡ್ಡ, ಅಂದರೆ ಬಹುತೇಕ ಶೇಕಡ 83ರಷ್ಟು ಪಾಲನ್ನು 15ರಿಂದ 29 ವರ್ಷಗಳ ನಡುವಿರುವ ಯುವ ಜನತೆ ಹೊಂದಿದ್ದಾರೆ. ಆಸಕ್ತಿಕರ ಅಂಶವೆಂದರೆ, 2022ರ ವೇಳೆ ನಿರುದ್ಯೋಗಿಗಳಾಗಿದ್ದವರ ಪೈಕಿ ಬಹುತೇಕ ಮೂರನೇ ಎರಡರಷ್ಟು ಭಾಗ ಯುವ ಜನರು ಮತ್ತು ವಿದ್ಯಾವಂತರೇ ಆಗಿದ್ದರು. ಅವರು ಕನಿಷ್ಠ ಪ್ರೌಢಶಾಲಾ ವ್ಯಾಸಂಗವನ್ನಾದರೂ ಪೂರ್ಣಗೊಳಿಸಿದವರಾಗಿದ್ದರು.

ಇದಕ್ಕೆ ಹೆಚ್ಚಿನ ಕೌಶಲಗಳನ್ನು ಹೊಂದಿರುವ ಯುವ ಜನರು ಉನ್ನತ ಹುದ್ದೆಯ ಉದ್ಯೋಗಳಿಗೆ ಕಾಯುತ್ತಿದ್ದುದೂ ಕಾರಣವಾಗಿರಬಹುದು. ವೈಟ್ ಕಾಲರ್ ಉದ್ಯೋಗವನ್ನೇ ಹೊಂದಬೇಕೆಂಬ ಅವರ ಬಯಕೆ ಯುವಕರು ಶೀಘ್ರವಾಗಿ ಔದ್ಯೋಗಿಕ ಮಾರುಕಟ್ಟೆ ಪ್ರವೇಶಿಸುವುದನ್ನು ತಡೆಯುತ್ತಿದೆ.

ಭಾರತದ ಶಿಕ್ಷಣ ವ್ಯವಸ್ಥೆಗೆ ಬೇಕು ಸುಧಾರಣೆ: ವಾಸ್ತವ ವಿಚಾರವೆಂದರೆ, ಸರ್ಕಾರ ಇಂದಿಗೂ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಅವಶ್ಯಕತೆ ಇರುವಷ್ಟು ಹೂಡಿಕೆ ನಡೆಸಿಲ್ಲ. ಜೊತೆಗೆ, ದೇಶದ ಒಟ್ಟಾರೆ ಪ್ರಗತಿಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಮಹತ್ವವನ್ನೂ ಸಂಪೂರ್ಣವಾಗಿ ಅರಿತುಕೊಂಡಿಲ್ಲ. ಶಿಕ್ಷಣ ವ್ಯವಸ್ಥೆ ಸಾಕಷ್ಟು ಬಹಳಷ್ಟು ಲೋಪದೋಷಗಳನ್ನು ಹೊಂದಿದ್ದು, ಅವುಗಳನ್ನು ಸುಧಾರಿಸುವುದು ನಮ್ಮ ಆದ್ಯತೆಯಾಗಬೇಕಿದೆ.

ಭಾರತ 50,000ದಷ್ಟು ಜಾಗತಿಕ ಗುಣಮಟ್ಟದ ವಿದ್ಯಾರ್ಥಿಗಳನ್ನು ಸೃಷ್ಟಿಸಿದರೆ, ಅವರಲ್ಲಿ ಬಹುತೇಕರು ವಿದೇಶಗಳಿಗೆ ತೆರಳಿ, ಕೆಲವರು ಮಾತ್ರ ಭಾರತದಲ್ಲಿ ಉಳಿದುಕೊಳ್ಳುತ್ತಾರೆ. ಭಾರತಕ್ಕೆ ಈಗಿನ ಸನ್ನಿವೇಶದಲ್ಲಿ ನಿಜಕ್ಕೂ ಬೇಕಾಗಿರುವುದು ಲಕ್ಷಾಂತರ ಕೌಶಲಭರಿತ ಉದ್ಯೋಗಿಗಳು. ಒಂದು ವೇಳೆ ಭಾರತ ಕೌಶಲ ಮತ್ತು ತಂತ್ರಜ್ಞಾನಗಳ ನೆಲೆಯಾಗಿ ಹೊರಹೊಮ್ಮುವ ಬಯಕೆ ಹೊಂದಿದ್ದರೆ, ಅಧಿಕಾರದಲ್ಲಿ ಇರುವವರು ಈಗಿನ ಪರಿಸ್ಥಿತಿಯ ಹಿಂದಿರುವ ಕಾರಣಗಳನ್ನು ಗಂಭೀರವಾಗಿ ಗಮನಿಸಬೇಕು.

ಭಾರತದ ಭವಿಷ್ಯ ಇತ್ತೀಚಿನ ಆ್ಯನುವಲ್ ಸ್ಟೇಟಸ್ ಆಫ್ ಎಜುಕೇಷನ್ ವರದಿ (ಎಎಸ್ಇಆರ್) ಜೊತೆ ನಿಕಟ ಸಂಬಂಧ ಹೊಂದಿದೆ. ಎಎಸ್ಇಆರ್ ಶಿಕ್ಷಣದ ಮುಖ್ಯ ಅಂಶಗಳಾದ ವಿದ್ಯಾರ್ಥಿಗಳ ನೇಮಕಾತಿ ಪ್ರಮಾಣ, ಕಲಿಕಾ ಮಟ್ಟ ಮತ್ತು ವಿದ್ಯಾಭ್ಯಾಸ ಕೈಬಿಡುವ ಪ್ರಮಾಣವನ್ನು ದಾಖಲಿಸುತ್ತದೆ.

14ರಿಂದ 18 ವರ್ಷ ವಯಸ್ಸಿನವರ ಕುರಿತು ನಡೆಸಿದ ಸಮೀಕ್ಷೆ ಪ್ರಕಾರ, 42% ವಿದ್ಯಾರ್ಥಿಗಳಿಗೆ ಸರಳ ಇಂಗ್ಲಿಷ್ ವಾಕ್ಯಗಳನ್ನು ಓದಲು ಬರುವುದಿಲ್ಲ ಮತ್ತು ಸರಳ ಭಾಗಾಕಾರ ಸಮಸ್ಯೆಗಳನ್ನು ಪೂರೈಸುವ ಸಾಮರ್ಥ್ಯವಿಲ್ಲ. 14 ವರ್ಷಕ್ಕಿಂತ ಹೆಚ್ಚಿನ 96% ವಿದ್ಯಾರ್ಥಿಗಳು ಶಾಲೆಗಳಿಗೆ ದಾಖಲಾಗಿದ್ದರೂ, ಅವರಲ್ಲಿ ಕೇವಲ 67.4% ವಿದ್ಯಾರ್ಥಿಗಳು ಮಾತ್ರ 18 ವರ್ಷವಾದಾಗಲೂ ವಿದ್ಯಾಭ್ಯಾಸ ಮುಂದುವರಿಸಿರುತ್ತಾರೆ. ಇದು ಹದಿಹರೆಯದ ಯುವ ಜನರಲ್ಲಿ ವಿದ್ಯಾಭ್ಯಾಸ ತ್ಯಜಿಸುವಿಕೆಯ ಪ್ರಮಾಣ ಹೆಚ್ಚಾಗಿರುವುದನ್ನು ತೋರಿಸಿದೆ.

ಭಾರತದ ಅಪಾರ ಜನಸಂಖ್ಯೆ ಮತ್ತು ಬೆಳೆಯುತ್ತಿರುವ ಆರ್ಥಿಕತೆಗಳ ಆಧಾರದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತವನ್ನು ಜಾಗತಿಕ ನಾಯಕ ಅಥವಾ 'ವಿಶ್ವ ಗುರು' ಆಗಿಸುವ ಕುರಿತು ಮಾತನಾಡಿದ್ದಾರೆ. ಆದರೆ, ಸೂಕ್ತ ಮತ್ತು ಅವಶ್ಯಕ ಬದಲಾವಣೆಗಳನ್ನು ಜಾರಿಗೆ ತರದಿದ್ದರೆ ಈ ಗುರಿಯನ್ನು ಸಾಧಿಸಲು ಸಾಧ್ಯವಿಲ್ಲ.

ಜನಸಂಖ್ಯಾ ಲಾಭಾಂಶದ ಹಂತ: ಬಹಳಷ್ಟು ಯುವಜನರು ಇಂದು ಭಾರತದಲ್ಲಿ ಉದ್ಯೋಗಕ್ಕೆ ಸೇರುತ್ತಿದ್ದಾರೆ. ಭಾರತದ ಸರಾಸರಿ ವಯಸ್ಸು 28 ವರ್ಷಗಳಾಗಿದ್ದು, ಜಗತ್ತಿನ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾದ ಭಾರತ ಈಗ 'ಜನಸಂಖ್ಯಾ ಲಾಭಾಂಶದ ಹಂತ' ಪ್ರವೇಶಿಸಲು ಸಿದ್ಧವಾಗುತ್ತಿದೆ. ಜನಸಂಖ್ಯಾ ಲಾಭಾಂಶದ ಹಂತ ಎಂದರೆ, ಜನಸಂಖ್ಯೆಯ ಬಹುದೊಡ್ಡ ಪಾಲು ಉದ್ಯೋಗ ನಡೆಸುತ್ತಿರುವ ಯುವ ಜನತೆ ಆಗಿದ್ದು, ಅವಲಂಬಿತರ, ಅಂದರೆ ಮಕ್ಕಳು, ವಯಸ್ಸಾದವರು ಮತ್ತು ನಿರುದ್ಯೋಗಿಗಳ ಸಂಖ್ಯೆ ಸಾಕಷ್ಟು ಸಣ್ಣದಾಗಿರುವುದಾಗಿದೆ.

ಇಂತಹ ಸಮತೋಲನದ ಕಾರಣದಿಂದ, ಹೆಚ್ಚು ಜನರು ಆದಾಯ ಗಳಿಸುತ್ತಾ, ದೇಶದ ಬೊಕ್ಕಸಕ್ಕೆ ಕೊಡುಗೆ ನೀಡುತ್ತಿದ್ದಾರೆ. ಇದರಿಂದ ಆರ್ಥಿಕ ಬೆಳವಣಿಗೆ ಸಾಧಿಸಲು ಅವಕಾಶಗಳು ಸೃಷ್ಟಿಯಾಗುತ್ತವೆ ಮತ್ತು ಉತ್ಪಾದಕತೆ ಹೆಚ್ಚಾಗಿ, ಪ್ರಗತಿ ಸಾಧಿತವಾಗುತ್ತದೆ. ಇಂತಹ ಸನ್ನಿವೇಶದಲ್ಲಿ, ಕಡಿಮೆ ಜನರಿಗೆ ಆರ್ಥಿಕ ನೆರವು ಬೇಕಾಗಿರುತ್ತದೆ.

ತಜ್ಞರ ಅಭಿಪ್ರಾಯದ ಪ್ರಕಾರ, ಭಾರತ ತನ್ನ ಉದ್ಯೋಗ ನಡೆಸುತ್ತಿರುವ ಅತಿದೊಡ್ಡ ಜನಸಂಖ್ಯೆಯ ಲಾಭ ಪಡೆಯಬೇಕಾದರೆ, ಭಾರತದ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳಿಗೆ ಔದ್ಯೋಗಿಕ ಮಾರುಕಟ್ಟೆಗೆ ಪೂರಕವಾದ ಕೌಶಲಗಳು ಮತ್ತು ಜ್ಞಾನವನ್ನು ಒದಗಿಸಬೇಕು. ಇದರಿಂದಾಗಿ ಅವರಿಗೆ ಉತ್ತಮ ಅವಕಾಶಗಳು ಲಭಿಸಿ, ಆರ್ಥಿಕತೆ ಪ್ರಗತಿ ಹೊಂದುತ್ತದೆ.

ಈ ವರ್ಷದ ಬಜೆಟ್‌ನಲ್ಲಿ, ಸರ್ಕಾರ ಶಿಷ್ಯವೃತ್ತಿಗೆ (ಅಪ್ರೆಂಟಿಸ್) ಗಮನ ಕೇಂದ್ರೀಕರಿಸಿ ಒಂದಷ್ಟು ಮಹತ್ವದ ಯೋಜನೆಗಳನ್ನು ಪರಿಚಯಿಸಿದೆ. ಇವು ಕೌಶಲ್ಯಾಭಿವೃದ್ಧಿ ನಡೆಸಿ, ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ. ಇಂತಹ ಸುಧಾರಣೆಗಳು ಮುಂದಿನ 5 ವರ್ಷಗಳಲ್ಲಿ ಒಂದು ಕೋಟಿ ಯುವ ಜನತೆಗೆ ಪ್ರಯೋಜನ ಒದಗಿಸಲಿದೆ. ಆದರೆ, ನೈಜ ಸವಾಲು ಕೌಶಲ ಮತ್ತು ಉದ್ಯೋಗಗಳ ನಡುವೆ ಇಂದು ಇರುವ ಅಂತರವನ್ನು ತಗ್ಗಿಸುವುದು ಮಾತ್ರವಲ್ಲ.

ಜೊತೆಗೆ, ಹೊಸ ತಂತ್ರಜ್ಞಾನಗಳು ಮತ್ತು ಬೆಳೆಯುತ್ತಿರುವ ಆರ್ಥಿಕ ಬೇಡಿಕೆಗಳಿಂದ ಔದ್ಯೋಗಿಕ ಮಾರುಕಟ್ಟೆಯಲ್ಲಿ ಮುಂದೆ ಬರಬಹುದಾದ ಬದಲಾವಣೆಗಳಿಗೆ ಸಿದ್ಧವಾಗುವುದೂ ಮುಖ್ಯ ಸವಾಲಾಗಿದೆ. ಅಂದರೆ, ನಾಳಿನ ಅವಶ್ಯಕತೆಗಳಿಗೆ ಉದ್ಯೋಗಿಗಳ ಸರಿಯಾದ ಕೌಶಲಗಳನ್ನು ಹೊಂದಿರುವಂತೆ ಮಾಡುವ ಸಲುವಾಗಿ ಯೋಜನೆಗಳನ್ನು ರೂಪಿಸಬೇಕು.

ಪ್ರಮುಖ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳ ಕೊರತೆ: ಸಮೀಕ್ಷೆಯ ಪ್ರಕಾರ, ಲಕ್ಷಾಂತರ ಪದವೀಧರರು, ಅದರಲ್ಲೂ ಆರೋಗ್ಯ ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳ ಪದವೀಧರರು ಕಡಿಮೆ ಉದ್ಯೋಗಾವಕಾಶಗಳನ್ನು ಹೊಂದಿದ್ದು, ತಮ್ಮ ಕೌಶಲಗಳು ಮತ್ತು ಸಾಮರ್ಥ್ಯವನ್ನು ಪೂರ್ಣವಾಗಿ ಉಪಯೋಗಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಭಾರತದಲ್ಲಿ ಅಂದಾಜು 25 ಲಕ್ಷ ವೈದ್ಯಕೀಯ ವಿದ್ಯಾರ್ಥಿಗಳು ಕೇವಲ ಒಂದು ಲಕ್ಷ ಸೀಟುಗಳಿಗೆ ಪ್ರಯತ್ನ ನಡೆಸುತ್ತಿದ್ದಾರೆ. ಅವರು ಎದುರಿಸುತ್ತಿರುವ ಒತ್ತಡವನ್ನು ಈ ಅಂಕಿಅಂಶಗಳಿಂದಲೇ ಊಹಿಸಬಹುದು.

ಆದರೆ, ಈ ಒಂದು ಲಕ್ಷ ಸ್ಥಾನಗಳಲ್ಲಿ ಇರದ ವಿದ್ಯಾರ್ಥಿಗಳ ಪರಿಸ್ಥಿತಿ ಏನು? ಆದ್ದರಿಂದ, ತರಬೇತಿ ಫಲಿತಾಂಶವನ್ನು ವಾಸ್ತವ ಸಮಯದಲ್ಲಿ ಅಳೆದು, ಉದ್ಯೋಗಿಗಳ ಕೌಶಲ ಮತ್ತು ಲಭ್ಯವಿರುವ ಉದ್ಯೋಗಗಳಿಗೆ ಹೊಂದಿಕೆ ನಡೆಸುವ ವ್ಯವಸ್ಥೆಯನ್ನು ಭಾರತ ಜಾರಿಗೆ ತರಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+