ಐಡಿಬಿಐ ಬ್ಯಾಂಕ್ ನಲ್ಲಿ 500 ಎಕ್ಸಿಕ್ಯೂಟಿವ್ ಹುದ್ದೆಗಳು ಖಾಲಿ

Written By: Ramesh
Subscribe to Oneindia Kannada

ಬೆಂಗಳೂರು. ನವೆಂಬರ್. 16 : ಖಾಲಿ ಇರುವ 500 ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಐಡಿಬಿಐ ಬ್ಯಾಂಕ್ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆ ದಿನವಾಗಿದೆ.

ಒಟ್ಟು ಹುದ್ದೆಗಳು: 500
ಹುದ್ದೆ: ಎಕ್ಸಿಕ್ಯೂಟಿವ್
ಸ್ಥಳ: ಭಾರತದಾದ್ಯಂತ
ವಿದ್ಯಾರ್ಹತೆ: ಮಾನ್ಯತೆ ಪಡೆದ ವಿವಿಯಲ್ಲ ಪದವಿ ಮುಗಿಸಿರಬೇಕು. ಎಸ್ ಸಿ& ಎಸ್ ಟಿ ಅಭ್ಯರ್ಥಿಗಳು 55% ಪಡೆದಿರಬೇಕು. ಒಬಿಸಿಯವರು 60%ರಲ್ಲಿ ತೇರ್ಗಡೆಯಾಗಿರಬೇಕು.
ವೇತನ: ಮೊದಲನೇ ವರ್ಷ 17,000, 2ನೇ ವರ್ಷಕ್ಕೆ 18,500, 3ನೇ ವರ್ಷಕ್ಕೆ 20,000 (ಪ್ರತಿ ತಿಂಗಳಿಗೆ) [ಪದವಿ ಫ್ರೆಶರ್ಸ್ ಗಳಿಗೆ ವಾಕ್ ಇನ್ ಸಂದರ್ಶನ]

IDBI Bank Recruitment 2016-17 Executive (500 Vacancies)

ವಯೋಮಿತಿ: 20 ರಿಂದ 25 ವಯಸ್ಸಿನೊಳಗಿರಬೇಕು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದವರಿಗೆ 5 ವರ್ಷ ಹೆಚ್ಚಳ(30 ವರ್ಷ), ಹಿಂದೂಳಿದ ವರ್ಗದವರಿಗೆ 3 ವರ್ಷ(28).

ಅರ್ಜಿ ಶುಲ್ಕ: ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 500 ರು. ಉಳಿದವರಿಗೆ 700 ರುಗಳುನ್ನು ನಿಗದಿ ಮಾಡಲಾಗಿದ್ದು. ಶುಲ್ಕವನ್ನು ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ರಡಿಟ್ ಕಾರ್ಡ್ ಮೂಲಕ ತುಂಬಹುದು.

ಆಯ್ಕೆ ವಿದಾನ: ಆನ್ ಲೈನ್ ಪರೀಕ್ಷೆ ಇರಲಿದ್ದು. 90 ನಿಮೀಷ ಕಾಲಾವಕಾಶವಿರಲಿದೆ. ಪರೀಕ್ಷೆ ಒಟ್ಟು 150 ಅಂಕಗಳು ಇರಲಿವೆ.
ಪರೀಕ್ಷೆ ನಡೆಸುವ ಸ್ಥಳಗಳು: ಬೆಂಗಳೂರು, ಬೆಳಗಾವಿ,ಮಂಗಳೂರು,ಅಹಮದಬಾದ್, ಭೂಪಾಲ್, ಅಮೃತಸರ್, ಹೈದರಬಾದ್, ಕೊಚ್ಚಿ, ಕೊಲ್ಕತ್ತಾ, ಕಾನ್ಪುರ್, ದೆಹಲಿ, ಪುಣೆ, ರಾಜ್ ಕೋಟ್, ರಾಂಚಿ, ವಿಜಯವಾಡ, ವಿಶಾಲ ಪಟ್ಟಣಂ, ಪಾಟ್ನ, ಮುಂಬೈ, ಗ್ವಾಲಿಯರ್.

ಪರೀಕ್ಷೆ ದಿನಾಂಕ: 6 ಜನವರಿ 2017
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
IDBI Bank (A New Generation Government owned Bank) invites Online applications from eligible and suitable Indian Citizens for recruitment of Executive 2016-2017 on contract basis at its different Branches and Offices. The last date for submission of online application is 30th November 2016.
Please Wait while comments are loading...