ಐಬಿಪಿಎಸ್: 7875 ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಬೆಂಗಳೂರು, ಸೆಪ್ಟೆಂಬರ್ 08 : ದೇಶದಾದ್ಯಂತ ವಿವಿಧ ಬ್ಯಾಂಕ್ ಗಳಲ್ಲಿ ಖಾಲಿ ಇರುವ ಒಟ್ಟು 7875 ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ ಇನ್‌ಸ್ಟಿಟ್ಯೂಟ್‌ ಆಫ್ ಬ್ಯಾಂಕಿಂಗ್‌ ಪರ್ಸನಲ್‌ ಸೆಲೆಕ್ಷನ್‌ (ಐಬಿಪಿಎಸ್) ಅರ್ಜಿ ಆಹ್ವಾನಿಸಿದೆ.

ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ಅಕ್ಟೋಬರ್ 03, 2017ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

IBPS Recruitment 2017 Apply online for 7875 Clerks-VII Posts

ವಿದ್ಯಾರ್ಹತೆ: ಈ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯುಜಿಸಿಯಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ ಪದವಿ (ಡಿಗ್ರಿ) ಪೂರ್ಣಗೊಳಿಸಿರಬೇಕು.

ವಯೋಮಿತಿ: ಸಾಮಾನ್ಯ ಅಭ್ಯರ್ಥಿಗಳಿಗೆ 20 ರಿಂದ 28 ವರ್ಷ, ಹಿಂದೂಳಿದ ವರ್ಗದವರಿಗೆ 3 ವರ್ಷ ಸಡಿಲಿಕೆ, ಎಸ್ಸಿ ಮತ್ತು ಎಸ್ಟಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ 5 ವರ್ಷ ಸಡಿಲಿಕೆ ಇರಲಿದೆ.

ಪರೀಕ್ಷೆ ದಿನಾಂಕ: ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಎರಡು ರೀತಿಯ ಪರೀಕ್ಷೆಗಳನ್ನು ಐಬಿಪಿಎಸ್ ನಡೆಸಲಿದೆ. ಪ್ರಾಥಮಿಕ ಪರೀಕ್ಷೆಯು ಡಿಸೆಂಬರ್ 2017 ರಲ್ಲಿ ನಡೆಯಲಿದ್ದು, ಮುಖ್ಯ ಪರೀಕ್ಷೆ 2018 ಜನವರಿಯಲ್ಲಿ ನಡೆಯಲಿದೆ.

ಆಯ್ಕೆ ವಿಧಾನ: ಮೇಲೆ ತಿಳಿಸಲಾಗಿರುವ ಎರಡು ಪರೀಕ್ಷೆಗಳಲ್ಲಿ ಅರ್ಹತೆ ಪಡೆದ ಬಳಿಕ ಅಭ್ಯರ್ಥಿ ಸಂದರ್ಶನ ಹಾಗೂ ಮೂಲ ದಾಖಲಾತಿಗಳ ಪರಿಶೀಲನೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಇನ್ನು ಈ ಬಗ್ಗೆ ಹಿಚ್ಚಿನ ಮಾಹಿತಿ ತಿಳಿದುಕೊಳ್ಳಬೇಕಿದ್ದಲ್ಲಿ ಇಲ್ಲಿ ಕ್ಲಿಕ್ಕಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+