11 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಹೆಚ್‌ಪಿಸಿಎಲ್
ಬೆಂಗಳೂರು, ಆಗಸ್ಟ್ 09 : ಹೆಚ್‍ಪಿಸಿಎಲ್ 11 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಆಗಸ್ಟ್ 31, 2018 ಕೊನೆಯ ದಿನವಾಗಿದೆ.
ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಹೆಚ್‍ಪಿಸಿಎಲ್) ಫೈರ್ ಅಂಡ್ ಸೇಫ್ಟಿ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಇ/ಬಿ.ಟೆಕ್ ಅನ್ನು ಫೈರ್ ಇಂಜಿನಿಯರಿಂಗ್ ಅಥವ ಸೇಫ್ಟಿ ಇಂಜಿನಿಯರಿಂಗ್‌ನಲ್ಲಿ ಎಐಸಿಟಿಇ ಮಾನ್ಯತೆ/ಯುಜಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಡೆದಿರಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 27 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. 31 ಆಗಸ್ಟ್ 2018ಕ್ಕೆ ಅನ್ವಯವಾಗುವಂತೆ.
ವೇತನ ಶ್ರೇಣಿ 60000 ದಿಂದ 180000 ಪ್ರತಿ ತಿಂಗಳು.
ಅರ್ಜಿ ಶುಲ್ಕ : ಸಾಮಾನ್ಯ/ಒಬಿಸಿ ಅಭ್ಯರ್ಥಿಗಳಿಗೆ 590 ರೂ.ಗಳು,ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಗ್ರೂಪ್ ಟಾಸ್ಕ್, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications