• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 29; ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಲವಾರು ಹುದ್ದೆಗಳು ಖಾಲಿ ಇವೆ ಎಂದು ಹಲವಾರು ಬಾರಿ ಚರ್ಚೆಗಳು ನಡೆಯುತ್ತವೆ. ಹಾಗಾದರೆ ಒಟ್ಟು ಮಂಜೂರಾಗಿರುವ ಹುದ್ದೆಗಳು ಎಷ್ಟು?. ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳು ಎಷ್ಟು? ಎಂದು ಸರ್ಕಾರವೇ ಮಾಹಿತಿ ನೀಡಿದೆ.

ಕಳೆದ ವಾರ ಮುಕ್ತಾಯಗೊಂಡ ವಿಧಾನ ಮಂಡಲದ ಮುಂಗಾರು ಅಧಿವೇಶನದಲ್ಲಿ ಕರ್ನಾಟಕ ಸರ್ಕಾರ ವಿಧಾನಪರಿಷತ್‌ನಲ್ಲಿ ಈ ಕುರಿತು ಲಿಖಿತ ಉತ್ತರವನ್ನು ನೀಡಿದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತು ಪರಿಷತ್‌ಗೆ ಮಾಹಿತಿ ಕೊಟ್ಟಿದ್ದಾರೆ.

ಕರ್ನಾಟಕ; ವಿವಿಧ ಇಲಾಖೆಗಳಿಗೆ ಮಂಜೂರಾಗಿರುವ ಒಟ್ಟು ಹುದ್ದೆಗಳುಕರ್ನಾಟಕ; ವಿವಿಧ ಇಲಾಖೆಗಳಿಗೆ ಮಂಜೂರಾಗಿರುವ ಒಟ್ಟು ಹುದ್ದೆಗಳು

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೆಪಿಎಸ್‌ಸಿ ಸೇರಿದಂತೆ ವಿವಿಧ ಆಯೋಗಗಳು ಕಾಲಕಾಲಕ್ಕೆ ಭರ್ತಿ ಮಾಡುತ್ತವೆ. ಹಲವು ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿದೆ ಎಂದು ಕರ್ನಾಟಕ ಸರ್ಕಾರ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದೆ.

ಕಲ್ಯಾಣ ಕರ್ನಾಟಕ; ಖಾಲಿ ಹುದ್ದೆಗಳು, ನೇಮಕಾತಿ ಮಾಡಬೇಕಾದ ಸಂಖ್ಯೆ ಕಲ್ಯಾಣ ಕರ್ನಾಟಕ; ಖಾಲಿ ಹುದ್ದೆಗಳು, ನೇಮಕಾತಿ ಮಾಡಬೇಕಾದ ಸಂಖ್ಯೆ

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಹುದ್ದೆಗಳನ್ನು ಭರ್ತಿ ಮಾಡಲು ವಿಳಂಬ ಧೋರಣೆ ಮಾಡುತ್ತಿಲ್ಲ. ಕಳೆದ 5 ವರ್ಷಗಳಲ್ಲಿ ಒಟ್ಟು 20,747 ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ಸರ್ಕಾರ ತನ್ನ ಮಾಹಿತಿಯಲ್ಲಿ ಹೇಳಿದೆ.

ಜಲ ಸಂಪನ್ಮೂಲ ಇಲಾಖೆ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿ; 155 ಹುದ್ದೆಗಳು ಜಲ ಸಂಪನ್ಮೂಲ ಇಲಾಖೆ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿ; 155 ಹುದ್ದೆಗಳು

ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆ ಖಾಲಿ?

ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆ ಖಾಲಿ?

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ 2,478 ಮಂಜೂರಾದ ಹುದ್ದೆಗಳು, ಭರ್ತಿಯಾದ ಹುದ್ದೆಗಳು 1,291 ಮತ್ತು ಖಾಲಿ ಹುದ್ದೆಗಳು 1,187 ಆಗಿದೆ. ಅರಣ್ಯ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳು 13,124. ಭರ್ತಿಯಾದ ಹುದ್ದೆಗಳು 8,562 ಮತ್ತು ಖಾಲಿ ಹುದ್ದೆಗಳು 4,562 ಆಗಿದೆ.

ಕೈ ಮಗ್ಗ ಮತ್ತು ಜವಳಿ ಇಲಾಖೆಗೆ 82 ಮಂಜೂರಾದ ಹುದ್ದೆಗಳು, ಭರ್ತಿಯಾದ ಹುದ್ದೆಗಳು 43 ಮತ್ತು ಖಾಲಿ ಹುದ್ದೆಗಳು 39. ಉನ್ನತ ಶಿಕ್ಷಣ ಇಲಾಖೆಗೆ ಮಂಜೂರಾಗಿರುವ ಹುದ್ದೆಗಳು 24,785. ಭರ್ತಿಯಾದ ಹುದ್ದೆಗಳು 12,111 ಮತ್ತು ಖಾಲಿ ಹುದ್ದೆಗಳು 12,674 ಆಗಿದೆ. ಒಳಾಡಳಿತ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳು 1,26,913. ಭರ್ತಿಯಾದ ಹುದ್ದೆಗಳು 1,03,356 ಮತ್ತು ಖಾಲಿ ಹುದ್ದೆಗಳು 23,557.

ತೋಟಗಾರಿಕೆ, ಕನ್ನಡ, ಕಾರ್ಮಿಕ

ತೋಟಗಾರಿಕೆ, ಕನ್ನಡ, ಕಾರ್ಮಿಕ

ತೋಟಗಾರಿಕೆ ಇಲಾಖೆಗೆ ಮಂಜೂರಾದ ಹುದ್ದೆಗಳು 6,196. ಭರ್ತಿಯಾದ ಹುದ್ದೆಗಳು 3104 ಮತ್ತು ಖಾಲಿ ಹುದ್ದೆಗಳು 3092 ಆಗಿದೆ. ವಾರ್ತೆ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳು 577, ಭರ್ತಿಯಾದ ಹುದ್ದೆಗಳು 258 ಮತ್ತು ಖಾಲಿ ಹುದ್ದೆಗಳು 319. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳು 75, ಭರ್ತಿಯಾದ ಹುದ್ದೆಗಳು 15 ಮತ್ತು ಖಾಲಿ ಹುದ್ದೆಗಳು 60 ಆಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳು 596. ಭರ್ತಿಯಾದ ಹುದ್ದೆಗಳು 173 ಮತ್ತು ಖಾಲಿ ಹುದ್ದೆಗಳು 423 ಆಗಿದೆ. ಕಾರ್ಮಿಕ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳು 4,352, ಭರ್ತಿಯಾದ ಹುದ್ದೆಗಳು 1852, ಖಾಲಿ ಹುದ್ದೆಗಳು 2,500 ಆಗಿದೆ.

ಕಾನೂನು, ಕೈಗಾರಿಕೆ, ನೀರಾವರಿ ಇಲಾಖೆಗಳು

ಕಾನೂನು, ಕೈಗಾರಿಕೆ, ನೀರಾವರಿ ಇಲಾಖೆಗಳು

ಕಾನೂನು ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳು 26,879 ಆಗಿದೆ. ಭರ್ತಿಯಾದ ಹುದ್ದೆಗಳು 18,509 ಮತ್ತು ಖಾಲಿ ಹುದ್ದೆಗಳು 8,370 ಆಗಿದೆ. ಭಾರಿ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಗೆ ಮಂಜೂರಾದ ಹುದ್ದೆಗಳು 604, ಭರ್ತಿಯಾದ ಹುದ್ದೆಗಳು 251 ಮತ್ತು ಖಾಲಿ ಹುದ್ದೆಗಳು 353 ಆಗಿದೆ. ಭಾರಿ ನೀರಾವರಿ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳು 1,404. ಭರ್ತಿಯಾದ ಹುದ್ದೆಗಳು 904 ಮತ್ತು ಖಾಲಿ ಹುದ್ದೆಗಳು 500 ಆಗಿದೆ.

ಗಣಿ ಇಲಾಖೆಗೆ ಮಂಜೂರಾದ ಹುದ್ದೆಗಳು 1,155. ಭರ್ತಿಯಾದ ಹುದ್ದೆಗಳು 478 ಮತ್ತು ಖಾಲಿ ಹುದ್ದೆಗಳು 677 ಆಗಿದೆ. ಸಣ್ಣ ನೀರಾವರಿ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳು 2,418. ಭರ್ತಿಯಾದ ಹುದ್ದೆಗಳು 1,323 ಮತ್ತು ಖಾಲಿ ಹುದ್ದೆಗಳು 1,095 ಆಗಿದೆ.

ಸಂಸದೀಯ ವ್ಯವಹಾರ, ಅಲ್ಪ ಸಂಖ್ಯಾತರ ಕಲ್ಯಾಣ

ಸಂಸದೀಯ ವ್ಯವಹಾರ, ಅಲ್ಪ ಸಂಖ್ಯಾತರ ಕಲ್ಯಾಣ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖಗೆ ಮಂಜೂರಾದ ಹುದ್ದೆಗಳು 5,619. ಭರ್ತಿಯಾದ ಹುದ್ದೆಗಳು 1,986 ಮತ್ತು ಖಾಲಿ ಹುದ್ದೆಗಳು 3,633 ಆಗಿದೆ. ಸಂಸದೀಯ ವ್ಯವಹಾರಗಳ ಇಲಾಖೆಗೆ ಮಂಜೂರಾದ ಹುದ್ದೆಗಳು 1,613 ಆಗಿದೆ. ಭರ್ತಿಯಾದ ಹುದ್ದೆಗಳು 1,176 ಮತ್ತು ಖಾಲಿ ಹುದ್ದೆಗಳು 435 ಆಗಿದೆ. ಯೋಜನೆ, ಸಾಂಖ್ಯಿಕ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಮಂಜೂರಾದ ಹುದ್ದೆಗಳು 2044. ಭರ್ತಿಯಾದ ಹುದ್ದೆಗಳು 762 ಮತ್ತು ಖಾಲಿ ಹುದ್ದೆಗಳು 1282 ಆಗಿದೆ.

English summary
In the monsoon session Karnataka government released the document how much post vacant in the various departments and how much post filled in last 5 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X