ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ಅತಿಹೆಚ್ಚು ಉದ್ಯೋಗ ನೀಡುವ ಮಹಾನಗರವೇ ನಮ್ಮ ಬೆಂಗಳೂರು!

|
Google Oneindia Kannada News

ನವದೆಹಲಿ, ಆಗಸ್ಟ್ 25: ಭಾರತದಲ್ಲಿ ಉದ್ಯೋಗ ಹುಡುಕುತ್ತಿರುವವರ ಸಂಖ್ಯೆ ಎಷ್ಟರ ಮಟ್ಟಿಗೆ ಹೆಚ್ಚಾಗಿದೆಯೋ ಅಷ್ಟೇ ಪ್ರಮಾಣದಲ್ಲಿ ಉದ್ಯೋಗವನ್ನು ಬದಲಾಯಿಸುವ ಜನರ ಸಂಖ್ಯೆಯೂ ಹೆಚ್ಚಳವಾಗಿದೆ.ಕಳೆದ ಮೂರು ತಿಂಗಳಿನಲ್ಲಿ ನಡೆದ ನೇಮಕಾತಿಯಲ್ಲಿ ಶೇ.29ರಷ್ಟು ಹೆಚ್ಚಳವಾಗಿರುವುದು ಅಂಕಿ-ಅಂಶಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅದೇ ರೀತಿ ಉದ್ಯೋಗ ಬದಲಾಯಿಸುವವರ ಸಂಖ್ಯೆಯಲ್ಲಿ ಶೇ.37ರಷ್ಟು ಹೆಚ್ಚಳವಾಗಿದೆ.

ಹಣದುಬ್ಬರವನ್ನು ಎದುರಿಸಲು, ಉದ್ಯೋಗದಾತರು ಈ ತ್ರೈಮಾಸಿಕದಲ್ಲಿ ವಿವಿಧ ವಿಧಾನಗಳನ್ನು ಅನುಸರಿಸಿದ್ದಾರೆ. ಅರೆಕಾಲಿಕ ಉದ್ಯೋಗದ ಪ್ರಮಾಣ ಶೇ.26ರಷ್ಟಿದ್ದು ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಉದ್ಯೋಗವು ಶೇ.11ರಷ್ಟಿದೆ. ಪೂರ್ಣ ಅವಧಿ ಉದ್ಯೋಗಾಕಾಂಕ್ಷಿಗಳ ಪ್ರಮಾಣವು ಶೇ.63ರಷ್ಟಿದೆ.

ಕುದುರೆಮುಖ ಅದಿರು ಸಂಸ್ಥೆಯಲ್ಲಿ ಇಂಜಿನಿಯರ್‌ಗಳಿಗೆ ಹುದ್ದೆಗಳಿವೆಕುದುರೆಮುಖ ಅದಿರು ಸಂಸ್ಥೆಯಲ್ಲಿ ಇಂಜಿನಿಯರ್‌ಗಳಿಗೆ ಹುದ್ದೆಗಳಿವೆ

ಭಾರತದಲ್ಲಿ ಈ ಹಿಂದಿನ ತ್ರೈಮಾಸಿಕದಲ್ಲಿ ನೇಮಕಾತಿ ಪ್ರಮಾಣ ಎಷ್ಟಿತ್ತು?, ಉದ್ಯೋಗ ಬದಲಾಯಿಸುವ ಜನರ ಸಂಖ್ಯೆ ಎಷ್ಟಿತ್ತು?, 2022ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಅದರ ಪ್ರಮಾಣ ಎಷ್ಟಿದೆ?, ಈ ಕುರಿತು ಅಂಕಿ-ಅಂಶಗಳು ಏನು ಹೇಳುತ್ತವೆ ಎಂಬುದನ್ನು ವರದಿಯಲ್ಲಿ ತಿಳಿದುಕೊಳ್ಳೋಣ.

2022ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ನೇಮಕಾತಿ

2022ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ನೇಮಕಾತಿ

ಭಾರತದಲ್ಲಿ 2022ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ.29ರಷ್ಟು ಉದ್ಯೋಗಿಗಳ ನೇಮಕಾತಿಯಲ್ಲಿ ಏರಿಕೆ ಕಂಡು ಬಂದಿದೆ. ಈ ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.20ರಷ್ಟು ಹೆಚ್ಚಳವಾಗಿರುವುದು ಕಂಡು ಬಂದಿದೆ. ಅದೇ ರೀತಿ ಉದ್ಯೋಗದಲ್ಲಿ ಆಸಕ್ತಿ ಹೊಂದಿರುವವರು ಹಾಗೂ ಉದ್ಯೋಗವನ್ನು ಬದಲಾಯಿಸಲು ಇಚ್ಛಿಸುವವರ ಸಂಖ್ಯೆಯು ಶೇ.37ರಷ್ಟಿದೆ. ಕಳೆದ ತ್ರೈಮಾಸಿಕದಲ್ಲಿ ಉದ್ಯೋಗ ಬದಲಾಯಿಸಲು ಇಚ್ಛಿಸುವವರ ಸಂಖ್ಯೆಯು ಶೇ.46ರಷ್ಚಿತ್ತು ಎಂದು ಅಂಕಿ-ಅಂಶಗಳಲ್ಲಿ ತಿಳಿದು ಬಂದಿದೆ.

ಹೆಚ್ಚು ಉದ್ಯೋಗ ಸಿಗುವ ವಲಯಗಳು ಯಾವುವು?

ಹೆಚ್ಚು ಉದ್ಯೋಗ ಸಿಗುವ ವಲಯಗಳು ಯಾವುವು?

ದೇಶದಲ್ಲಿ 5ಜಿ ತಂತ್ರಜ್ಞಾನದ ಅಳವಡಿಕೆ ಸಂದರ್ಭದಲ್ಲಿ ಉದ್ಯೋಗಗಳು ಹೆಚ್ಚು ಹೆಚ್ಚು ತೆರೆದುಕೊಳ್ಳುತ್ತಿವೆ. ಐಟಿ ವಲಯ, ಆರೋಗ್ಯ ವಲಯ, ಇ-ಕಾಮರ್ಸ್ ವಲಯಗಳಲ್ಲಿ ಉದ್ಯೋಗಗಳು ಹೆಚ್ಚು ಸಿಗುತ್ತಿವೆ. ಮುಂದಿನ ಕೆಲವು ತ್ರೈಮಾಸಿಕದಲ್ಲಿ ಟಿಲಿಕಾಂ ಅಂಗಳದಲ್ಲಿ ಉದ್ಯೋಗಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಇಂಡೀಡ್ ಇಂಡಿಯಾದ ವ್ಯಾಪಾರ ಮುಖ್ಯಸ್ಥ ಶಶಿಕುಮಾರ್ ತಿಳಿಸಿದ್ದಾರೆ.

ಟೆಕ್ ಪಾತ್ರಗಳು ತ್ರೈಮಾಸಿಕದಲ್ಲಿ ಹೆಚ್ಚು ಬೇಡಿಕೆ ಇರುವಂತೆ ಕಂಡು ಬಂದಿವೆ. ಹೆಲ್ತ್‌ಕೇರ್ (86%, 51% ರಿಂದ) ಮತ್ತು ಇ-ಕಾಮರ್ಸ್ (82%, 73% ರಿಂದ) ಪ್ರತಿಭೆಗಳ ಬೇಡಿಕೆಯ ಉಲ್ಬಣಕ್ಕೆ ಕೊಡುಗೆ ನೀಡಿದ ಇತರ ಉನ್ನತ ವಲಯಗಳಾಗಿವೆ.

ಐಟಿ ವಲಯದಲ್ಲಿಯೇ ಅತಿಹೆಚ್ಚು ಉದ್ಯೋಗ ಸೃಷ್ಟಿ

ಐಟಿ ವಲಯದಲ್ಲಿಯೇ ಅತಿಹೆಚ್ಚು ಉದ್ಯೋಗ ಸೃಷ್ಟಿ

ಭಾರತದಲ್ಲಿ ಅತಿಹೆಚ್ಚು ಉದ್ಯೋಗ ಸೃಷ್ಟಿಸುವ ವಲಯಗಳ ಪಟ್ಟಿಯಲ್ಲಿ ಐಟಿ ಸೆಕ್ಟರ್ ಅಗ್ರಸ್ಥಾನದಲ್ಲಿದೆ. ಈ ತ್ರೈಮಾಸಿಕದಲ್ಲಿ ಐಟಿ ವಲಯದಲ್ಲಿ ಶೇ.91ರಷ್ಟು ಉದ್ಯೋಗ ಸೃಷ್ಟಿಯಾಗುತ್ತಿದ್ದು, ಕಳೆದ ತ್ರೈಮಾಸಿಕದಲ್ಲಿ ಈ ಪ್ರಮಾಣವು ಶೇ.83ರಷ್ಟಿತ್ತು. ತಾಂತ್ರಿಕ ವಲಯದ ಹೊರತಾಗಿ ಬೇರೆ ವಲಯದಲ್ಲಿ ಎಷ್ಟು ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ ಎಂಬುದನ್ನು ಗಮನಿಸಬೇಕಿದೆ. ವಿನ್ಯಾಸ ಮತ್ತು ಅಭಿವೃದ್ಧಿ ವಲಯದಲ್ಲಿ ಶೇ.15 ರಿಂದ ಶೇ.33ರಷ್ಟು ಹೆಚ್ಚಳವಾಗಿದೆ. ಕಾರ್ಯಾಚರಣೆ ಮತ್ತು ಆಡಳಿತ ವಲಯದಲ್ಲಿ ಶೇ.21 ರಿಂದ ಶೇ.29ಕ್ಕೆ ಏರಿಕೆಯಾಗಿದೆ. ಖಾತೆಗಳು ಮತ್ತು ಹಣಕಾಸು ವಲಯದಲ್ಲಿ ಶೇ.21 ರಿಂದ ಶೇ.26ರಷ್ಟು ನೇಮಕಾತಿ ಪ್ರಮಾಣವು ಹೆಚ್ಚಳವಾಗಿದೆ. ಅದೇ ರೀತಿ ಈ ತ್ರೈಮಾಸಿಕದಲ್ಲಿ ಆರೋಗ್ಯ ವಲಯದಲ್ಲಿ ನೇಮಕಾತಿ ಪ್ರಮಾಣವು ಶೇ.51 ರಿಂದ ಶೇ.86ಕ್ಕೆ ಏರಿಕೆಯಾಗಿದೆ. ಇ-ಕಾಮರ್ಸ್ ವಲಯದಲ್ಲಿ ಶೇ.73 ರಿಂದ ಶೇ.83ರಷ್ಟು ಉದ್ಯೋಗಳು ಸೃಷ್ಟಿಯಾಗಿವೆ.

ಯಾವ ಮಹಾನಗರಗಳಲ್ಲಿ ಉದ್ಯೋಗಗಳು ಹೆಚ್ಚು?

ಯಾವ ಮಹಾನಗರಗಳಲ್ಲಿ ಉದ್ಯೋಗಗಳು ಹೆಚ್ಚು?

ಭಾರತದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಮಹಾನಗರಗಳ ಪಾತ್ರ ಬಹುಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಯಾವ ನಗರಳಲ್ಲಿ ಎಷ್ಟು ಪ್ರಮಾಣದ ಉದ್ಯೋಗಗಳು ಸೃಷ್ಟಿಯಾಗುತ್ತಿದೆ ಎಂದು ನೋಡಿದರೆ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಉದ್ಯೋಗ ಸೃಷ್ಟಿ ಪ್ರಮಾಣವು ಶೇ.87 ರಿಂದ ಶೇ.93ಕ್ಕೆ ಏರಿಕೆಯಾಗಿದೆ. ಮುಂಬೈನಲ್ಲಿ ಉದ್ಯೋಗ ಸೃಷ್ಟಿ ಪ್ರಮಾಣ ಶೇ.77 ರಿಂದ ಶೇ.87ರಷ್ಟು ಹೆಚ್ಚಳವಾಗಿದೆ. ಚೆನ್ನೈನಲ್ಲಿ ಶೇ.71ರಿಂದ ಶೇ.82ಕ್ಕೆ ಏರಿಕೆಯಾಗಿದೆ. ಅದೇ ರೀತಿ ಚಂಡೀಘರ್ ನಲ್ಲಿ ಶೇ.39 ರಿಂದ ಶೇ.59ಕ್ಕೆ ಉದ್ಯೋಗ ಸೃಷ್ಟಿ ಪ್ರಮಾಣ ಏರಿಕೆಯಾಗಿದೆ.

ಹಣದುಬ್ಬರಿಂದ ಉದ್ಯೋಗಿಗಳಿಗೆ ಅಪಾಯವಿದೆಯೇ?

ಹಣದುಬ್ಬರಿಂದ ಉದ್ಯೋಗಿಗಳಿಗೆ ಅಪಾಯವಿದೆಯೇ?

ಭಾರತದಲ್ಲಿನ ಹಣದುಬ್ಬರವು ಉದ್ಯೋಗವನ್ನು ಹುಡುಕುತ್ತಿರುವವರಿಗೆ ಹಾಗೂ ಉದ್ಯೋಗಿಗಳ ಮೇಲೆ ಯಾವುದೇ ರೀತಿ ಪರಿಣಾಮ ಬೀರುತ್ತಿಲ್ಲ. 10 ರಲ್ಲಿ 6 ಮಂದಿ ಉದ್ಯೋಗಿಗಳು ಇದೇ ಮಾತನ್ನು ಹೇಳಿದ್ದಾರೆ. ಶೇ.89ರಷ್ಟು ಮಂದಿ ಹಣದುಬ್ಬರವು ತಮ್ಮ ಉದ್ಯೋಗ ಮತ್ತು ಬದುಕಿನ ಮೇಲೆ ಅಷ್ಟರ ಮಟ್ಟಿಗೆ ಪ್ರಭಾವ ಬೀರಿಲ್ಲ ಎಂದು ಹೇಳುತ್ತಿದ್ದಾರೆ.

English summary
How Hiring increases by 29 per cent in April-June 2022 in india.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X