HAL ನೇಮಕಾತಿ 2020: 2000 ಅಪ್ರೆಂಟಿಸ್ ಹುದ್ದೆಗಳಿವೆ
ಬೆಂಗಳೂರು, ಆ. 18: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ಸ್ (ಎಚ್ಎಎಲ್) ತನ್ನ 2020ನೇ ಸಾಲಿನ ನೇಮಕಾತಿಯನ್ನು ಮುಂದುವರೆಸಿದೆ. ಸುಮಾರು 2000ಕ್ಕೂ ಅಧಿಕ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸೆಪ್ಟೆಂಬರ್ 5ರೊಳಗೆ ಅರ್ಜಿ ಸಲ್ಲಿಸಬಹುದು.
ಸಂಸ್ಥೆ ಹೆಸರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್
ಹುದ್ದೆ ಹೆಸರು : ಟ್ರೇಡ್ ಅಂಪ್ರೆಟಿಸ್
ಉದ್ಯೋಗದ ಸ್ಥಳ : ಕರ್ನಾಟಕ
ವಿದ್ಯಾರ್ಹತೆ: ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತ ಪಡೆದ ವಿದ್ಯಾಸಂಸ್ಥೆಯಿಂದ ಎಸ್ಎಸ್ಎಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಶೇ 60ರಷ್ಟು ಕನಿಷ್ಟ ಅಂಕ ಗಳೊಂದಿಗೆ ತೇರ್ಗಡೆ ಹೊಂದಿರಬೇಕು. NAC/ ಡಿಪ್ಲೋಮಾ/ ಪದವಿ/ NTC/NAC ಪಡೆದಿರಬೇಕು.

ವಯೋಮಿತಿ: ಅಭ್ಯರ್ಥಿಯ ವಯಸ್ಸು 1/12/2017ಕ್ಕೆ ಆನ್ವಯವಾಗುವಂತೆ 15 ರಿಂದ 18 ವರ್ಷ ವಯಸ್ಸಾಗಿರಬೇಕು.
ನೇಮಕಾತಿ: ಅರ್ಹತಾ ಸುತ್ತಿನ ಪರೀಕ್ಷೆಯಲ್ಲಿನ ಅಂಕಗಳು ಹಾಗೂ ಅರ್ಹತೆ ಆಧಾರದ ಮೇಲೆ ಆಯ್ಕೆ.
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 13.08.2020
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 05.09.2020
ಅರ್ಜಿ ಸಲ್ಲಿಸುವ ವಿವರ ಹಾಗೂ ಇನ್ನಿತರ ಮಾಹಿತಿಗೆ ಕ್ಲಿಕ್ ಮಾಡಿ












Click it and Unblock the Notifications