GTTC Recruitment: ಇಂದು ನಿಗದಿಯಾಗಿದ್ದ ಜಿಟಿಟಿಸಿ ಪರೀಕ್ಷೆ ರದ್ದು, ಕಾರಣ?
ಬೆಂಗಳೂರು, ಡಿಸೆಂಬರ್ 11: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಸರ್ಕಾರಿ ಉಪಕರಣಕಾರರು ಹಾಗೂ ತರಬೇತಿ ಕೇಂದ್ರ (GTTC) ನೇಮಕಾತಿಗೆ ಸಂಬಂಧಿಸಿದಂತೆ ಡಿಸೆಂಬರ್ ರಿಂದ 14ರ ತನಕ ಪರೀಕ್ಷೆ ಹಮ್ಮಿಕೊಂಡಿತ್ತು. ಆದರೆ ಡಿಸೆಂಬರ್ 11ರ ಬುಧವಾರ ಇದ್ದ ಪರೀಕ್ಷೆಯ ದಿನಾಂಕ ಬದಲಿಸಲಾಗಿದೆ. ಪರೀಕ್ಷೆಗೆ ಹಾಜರಾಗಬೇಕಿದ್ದ ಅಭ್ಯರ್ಥಿಗಳು ಹೊಸ ದಿನಾಂಕ ನೋಡಿಕೊಂಡು ಪರೀಕ್ಷೆಗೆ ನಿಗದಿತ ಕೇಂದ್ರಕ್ಕೆ ಹಾಜರಾಗಬೇಕಿದೆ.
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನಿಧನ ಹಿನ್ನೆಲೆಯಲ್ಲಿ ಗೌರವಾರ್ಥ ರಾಜ್ಯ ಸರ್ಕಾರ ಸರ್ಕಾರಿ ಶಾಲೆ, ಕಾಲೇಜು ಮತ್ತು ಕಚೇರಿಗೆ ರಜೆ ಘೋಷಿಸಿತು. ಹೀಗಾಗಿ ಇಂದು ಬುಧವಾರ ನಡೆಬೇಕಿದ್ದ ಜಿಟಿಟಿಸಿ ಪರೀಕ್ಷೆಗೆ ಮುಂದೂಡಿಕೆ ಆಗಿದೆ. ಇದು ಮಾತ್ರವಲ್ಲದೇ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗಾಗಿ ದಾಖಲೆ ಸಲ್ಲಿಸಬೇಕಿದ್ದ ದಿನಾಂಕ ಡಿಸೆಂಬರ್ 11ರ ಬದಲಾಗಿ ಬೇರೆ ದಿನಾಂಕ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತಿಳಿಸಿದೆ.

ಇಂದು (ಡಿ.11ರಂದು) ನಿಗದಿಯಾಗಿದ್ದ ಜಿಟಿಟಿಸಿ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಾಳೆ ಡಿಸೆಂಬರ್ 12ರಂದು ನಡೆಸಲು ತೀರ್ಮಾನಿಸಲಾಗಿದೆ. ಇಂದಿನ ತಾಂತ್ರಿಕ ಜಿಆರ್ ಹಾಗೂ ಉಪನ್ಯಾಸಕರ ವಿಷಯಗಳ ಪರೀಕ್ಷೆಯನ್ನು ನಾಳೆ ಗುರುವಾರ ಬೆಳಗ್ಗೆ 10.30- 12.30 ಮತ್ತು 2.30 ರಿಂದ 4.30ರವರೆಗೆ ನಡೆಯಲಿವೆ.
ಯಾರೆಲ್ಲ ಪರೀಕ್ಷೆ ಹಾಜರಾಗಲಿದ್ದು, ಹಾಲ್‌ಟಿಕೆಟ್ ಡೌನ್‌ಲೋಡ್ ಮಾಡಿಲ್ಲವೋ ಅಂತಹ ಅಭ್ಯರ್ಥಿಗಳು GTTC 2024 ಪರೀಕ್ಷೆಯ ಪ್ರವೇಶ ಪತ್ರ ಡೌನ್ಲೋಡ್ ಗಾಗಿ ಇಲ್ಲಿರುವ ಅಧಿಕೃತ https://cetonline.karnataka.gov.in/kea/ ಲಿಂಕ್ ಕ್ಲಿಕ್ ಮಾಡಿ ಅಗತ್ಯ ಮಾಹಿತಿ ನೀಡಿ ಪ್ರವೇಶ ಪತ್ರ ಪಡೆಯಬೇಕು.
ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಅಭ್ಯರ್ಥಿಗಳು ದಾಖಲೆ ಸಲ್ಲಿಸಲು ಪ್ರಾಧಿಕಾರವು ಡಿಸೆಂಬರ್ 12, 13, 16, ಅಥವಾ 17 ರಂದು ಸಮಯ ನಿಗದಿ ಮಾಡಿ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ. ಅನಿರೀಕ್ಷಿತ ರಜೆ ಘೋಷಣೆಯಿಂದಾಗಿ ವೇಳಾಪಟ್ಟಿಯಲ್ಲಿ ಒಂದಷ್ಟು ಬದಲಾವಣೆ ಆಗಿದೆ. ಬದಲಾದ ಸಮಯ ಮತ್ತು ದಿನಾಂಕ ಗಮನಿಸಿ ಹಾಜರಾಗಬೇಕು ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು PG Medical ಅಭ್ಯರ್ಥಿಗಳಿಗೆ 2ನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸುವ ಅರ್ಹರಿಗೆ ಅವರ Rank ಆಧಾರದ ಮೇಲೆ ಕೆಇಎ ಕಚೇರಿಯಲ್ಲಿ ಮೂಲ ದಾಖಲೆ ಸ್ವೀಕರಿಸುವ ಪ್ರಕ್ರಿಯೆ ಡಿ.6ರಿಂದ ಆರಂಭಿಸಿದೆ. ಈ ಪ್ರಕ್ರಿಯೆ ಡಿಸೆಂಬರ್ 17ರವರೆಗೆ ನಡೆಯಲಿದೆ. ದಾಖಲೆ ಕೊಟ್ಟವರನ್ನು ಮಾತ್ರ ಸೀಟು ಹಂಚಿಕೆಗೆ ಪರಿಗಣಿಸಲಾಗುತ್ತದೆ ಎಂದು ಈ ರಜೆ ಘೋಷಣೆಗೂ ಮೊದಲು ತಿಳಿಸಿತ್ತು.












Click it and Unblock the Notifications