ಗೂಗಲ್‌ನಲ್ಲಿ ಕೆಲಸ ಕಲಿಯುವ ಸುವರ್ಣಾವಕಾಶ! 2026ರ ಇಂಟರ್ನ್‌ಶಿಪ್‌ಗೆ ಅರ್ಜಿ ಆಹ್ವಾನ - ಅರ್ಹತೆಗಳೇನು ಗೊತ್ತಾ?
ವಿಶ್ವದ ಟೆಕ್ ದೈತ್ಯ ಸಂಸ್ಥೆಯಾದ ಗೂಗಲ್ (Google), ಭಾರತದಲ್ಲಿ ತನ್ನ 2026ರ ಸಾಲಿನ ಇಂಟರ್ನ್‌ಶಿಪ್ ಕಾರ್ಯಕ್ರಮಕ್ಕಾಗಿ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಆಸಕ್ತಿಯಿರುವ ಮತ್ತು ಜಾಗತಿಕ ಮಟ್ಟದ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುವ ಕನಸು ಹೊಂದಿರುವ ವಿದ್ಯಾರ್ಥಿಗಳಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ. ಪ್ರಸ್ತುತ ಬ್ಯಾಚುಲರ್ಸ್, ಮಾಸ್ಟರ್ಸ್ ಮತ್ತು ಪಿಎಚ್‌ಡಿ ಪದವಿಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳು ಈ ಪೇಯ್ಡ್ ಇಂಟರ್ನ್‌ಶಿಪ್‌ಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳು ಗೂಗಲ್‌ನ ಭಾರತೀಯ ಕಚೇರಿಗಳಲ್ಲಿ ನೇರವಾಗಿ ಕೆಲಸ ಮಾಡುವ ಅವಕಾಶವನ್ನು ಪಡೆಯಲಿದ್ದಾರೆ. ಈ ಇಂಟರ್ನ್‌ಶಿಪ್‌ಗಳು ಮುಖ್ಯವಾಗಿ ಬೆಂಗಳೂರು, ಪುಣೆ, ಹೈದರಾಬಾದ್‌ನಲ್ಲಿ ನಡೆಯಲಿದೆ.

ಯಾವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು?
ಗೂಗಲ್ ಈ ಬಾರಿ ಎಂಜಿನಿಯರಿಂಗ್ ಮತ್ತು ಸಂಶೋಧನಾ ವಿಭಾಗಗಳಲ್ಲಿ ಪ್ರಮುಖವಾಗಿ ಮೂರು ರೀತಿಯ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ:
1. ಸಿಲಿಕಾನ್ ಎಂಜಿನಿಯರಿಂಗ್ ಇಂಟರ್ನ್ (ಪಿಎಚ್‌ಡಿ): ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಅಥವಾ ಸಂಬಂಧಿತ ಕ್ಷೇತ್ರಗಳಲ್ಲಿ ಪಿಎಚ್‌ಡಿ ಮಾಡುತ್ತಿರುವವರು ಇದಕ್ಕೆ ಅರ್ಹರು. ಇವರು ಕ್ಲೌಡ್ ಸಿಲಿಕಾನ್ ತಂತ್ರಜ್ಞಾನಗಳ ವಿನ್ಯಾಸ ಮತ್ತು ಮೌಲ್ಯಮಾಪನದಲ್ಲಿ ಹಾರ್ಡ್‌ವೇರ್ ತಂಡದೊಂದಿಗೆ ಕೆಲಸ ಮಾಡಲಿದ್ದಾರೆ.
2. ಸಾಫ್ಟ್‌ವೇರ್ ಎಂಜಿನಿಯರಿಂಗ್ ಇಂಟರ್ನ್ (ಪಿಎಚ್‌ಡಿ): ಸಾಫ್ಟ್‌ವೇರ್ ಡೆವಲಪ್‌ಮೆಂಟ್‌ನಲ್ಲಿ ಪರಿಣತಿ ಹೊಂದಿರುವ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಈ ಅವಕಾಶವಿದ್ದು, ಇದು 12 ರಿಂದ 14 ವಾರಗಳ ಅವಧಿಯದ್ದಾಗಿರುತ್ತದೆ. ದೊಡ್ಡ ಮಟ್ಟದ ಸಾಫ್ಟ್‌ವೇರ್ ಸಿಸ್ಟಮ್‌ಗಳ ಮೇಲೆ ಕೆಲಸ ಮಾಡುವ ಮತ್ತು ಹಿರಿಯ ಅಧಿಕಾರಿಗಳಿಂದ ಮಾರ್ಗದರ್ಶನ ಪಡೆಯುವ ಅವಕಾಶವಿರುತ್ತದೆ.
3. ವಿದ್ಯಾರ್ಥಿ ಸಂಶೋಧಕ (Student Researcher): ಕಂಪ್ಯೂಟರ್ ಸೈನ್ಸ್, ಗಣಿತ, ಸಂಖ್ಯಾಶಾಸ್ತ್ರ ಅಥವಾ ನೈಸರ್ಗಿಕ ವಿಜ್ಞಾನಗಳಲ್ಲಿ ಪದವಿ, ಸ್ನಾತಕೋತ್ತರ ಅಥವಾ ಪಿಎಚ್‌ಡಿ ಮಾಡುತ್ತಿರುವ ವಿದ್ಯಾರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದು. ಇವರು ನೈಜ ಪ್ರಪಂಚದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಭಾಗಿಯಾಗಲಿದ್ದಾರೆ.
ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ಗೂಗಲ್‌ನ ಅಧಿಕೃತ ಕರಿಯರ್ ಪೋರ್ಟಲ್ (Google Careers) ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಮಾರ್ಚ್ 31, 2026 ಕೊನೆಯ ದಿನಾಂಕ.
ಈ ಇಂಟರ್ನ್‌ಶಿಪ್‌ಗಳು ಹೆಚ್ಚು ಸ್ಪರ್ಧಾತ್ಮಕವಾಗಿರುವುದರಿಂದ, ವಿದ್ಯಾರ್ಥಿಗಳು ಅಂತಿಮ ದಿನಾಂಕದವರೆಗೂ ಕಾಯದೆ ಆದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗೂಗಲ್‌ನಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯಮದ ನೇರ ಅನುಭವ, ಹಿರಿಯ ವೃತ್ತಿಪರರಿಂದ ಮೆಂಟರ್‌ಶಿಪ್ ಮತ್ತು ಭವಿಷ್ಯದ ವೃತ್ತಿಜೀವನಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಕಲಿಯುವ ವೇದಿಕೆ ಸಿಗಲಿದೆ.
ಹೆಚ್ಚಿನ ವಿವರಗಳಿಗೆ ಗೂಗಲ್ ಕರಿಯರ್ಸ್ ವೆಬ್‌ಸೈಟ್‌ಗೆ ಭೇಟಿ ನೀಡಿ ಪರಿಶೀಲಿಸಿಕೊಳ್ಳಬಹುದು.












Click it and Unblock the Notifications