ಎಸ್ಸೆಸೆಲ್ಸಿ ಪಾಸಾಗಿದ್ರೆ ಗದಗದ ಜಿಲ್ಲಾ ಕೋರ್ಟಿನಲ್ಲಿ ಉದ್ಯೋಗ!
ಗದಗ ಜಿಲ್ಲಾ ನ್ಯಾಯಾಲಯದಲ್ಲಿ ಸ್ಟೆನೋಗ್ರಾಫರ್, ಟೈಪಿಸ್ಟ್ ಸೇರಿದಂತೆ ಅನೇಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಏಪ್ರಿಲ್ 03ರೊಳಗೆ ಆನ್ ಲೈನ್ ಮೂಲಕ ಆರ್ಜಿ ಸಲ್ಲಿಸಬಹುದಾಗಿದೆ.
ಗದಗ, ಮಾರ್ಚ್ 07 : ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಸ್ಟೆನೋಗ್ರಾಫರ್, ಟೈಪಿಸ್ಟ್ ಸೇರಿದಂತೆ ಅನೇಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಏಪ್ರಿಲ್ 03ರೊಳಗೆ ಆನ್ ಲೈನ್ ಮೂಲಕ ಆರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆ: ಗದಗ ಜಿಲ್ಲಾ ಕೋರ್ಟ್ ನಲ್ಲಿ ಉದ್ಯೋಗ
ಒಟ್ಟು ಹುದ್ದೆಗಳು: 11(ಸ್ಟೆನೋಗ್ರಾಫರ್), 8 (ಟೈಪಿಸ್ಟ್)
ಹುದ್ದೆ ಹೆಸರು: ಸ್ಟೆನೋಗ್ರಾಫರ್
ವಯೋಮಿತಿ: ಸಾಮಾನ್ಯ ಅಭ್ಯರ್ಥಿಗಳಿಗೆ18 ರಿಂದ 35 ವರ್ಷ ಮಿತಿ, ಎಸ್ ಸಿ/ಎಸ್ಟಿಗಳಿಗೆ 18 ರಿಂದ 40 ವರ್ಷ ಮಿತಿ ನಿಗದಿಯಾಗಿದೆ.

ವಿದ್ಯಾರ್ಹತೆ: ಎಸ್ಎಸ್ಎಲ್ ಸಿ ಅಥವಾ ತತ್ಸಮಾನ ವಿದ್ಯಾರ್ಹತೆ. ಜ್ಯೂನಿಯರ್ ಟೈಪಿಂಗ್ (ಕನ್ನಡ/ಇಂಗ್ಲೀಷ್) ನಲ್ಲಿ ಪಾಸಾಗಿರಬೇಕು. ಇದಕ್ಕೆ ಕರ್ನಾಟಕ ಎಸ್ಸೆಸೆಲ್ಸಿ ಬೋರ್, ಪರೀಕ್ಷಾ ಪ್ರಾಧಿಕಾರದ ಮಾನ್ಯತೆ ಇರಬೇಕು.
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ/ ವೈಯಕ್ತಿಕ ಸಂದರ್ಶನ.
ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗೆ 100 ರು, ಎಸ್ ಸಿ/ ಎಸ್ಟಿ ಅಭ್ಯರ್ಥಿಗಳಿಗೆ 50 ರು. ಅರ್ಜಿ ಶುಲ್ಕವನ್ನು ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ (ಎಸ್ ಬಿಐ) ಮೂಲಕ ಪಾವತಿಸಬಹುದು.
ಅರ್ಜಿ ಸಲ್ಲಿಸಲು ಹೀಗೆ ಮಾಡಿ:
* ecourts.gov.in/gadag ಗೆ ಲಾಗ್ ಇನ್ ಆಗಿ
* ನೀವು ಬಯಸುವ ಹುದ್ದೆಯನ್ನು ಆಯ್ಕೆ ಮಾಡಿಕೊಂಡು ಆನ್ ಲೈನ್ ಅರ್ಜಿ ಹುಡುಕಿ
* ಆನ್ ಲೈನ್ ನಲ್ಲಿ ಅರ್ಜಿ ತುಂಬಿ, ಸಲ್ಲಿಸಿದ ಬಳಿಕ ಪ್ರಿಂಟ್ ಔಟ್ ತೆಗೆದುಕೊಳ್ಳಿ
ಕೊನೆ ದಿನಾಂಕ : 3 ಏಪ್ರಿಲ್ 2017, 11.59 ರೊಳಗೆ
ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಈ ಪಿಡಿಎಫ್ ಡೌನ್ ಲೋಡ್ ಮಾಡಿಕೊಂಡು ಓದಿ:
(ಒನ್ಇಂಡಿಯಾ ಸುದ್ದಿ)
Download











Click it and Unblock the Notifications