EDII Recruitment 2023: ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಬೆಂಗಳೂರಿನಲ್ಲೇ ಉದ್ಯೋಗವಕಾಶ

ಬೆಂಗಳೂರು, ಆಗಸ್ಟ್ 01: ಭಾರತೀಯ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆ (EDII) ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಆಗಸ್ಟ್ 7ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಸಂಸ್ಥೆ ತಿಳಿಸಿದೆ.

ಭಾರತೀಯ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆ (EDII)ಯಲ್ಲಿ ಒಟ್ಟು 2 ಹ್ಯೂಮನ್ ರಿಸೋರ್ಸ್​ ಎಕ್ಸಿಕ್ಯೂಟಿವ್ ಹುದ್ದೆ ಖಾಲಿ ಇವೆ. ಆಸಕ್ತ ಅಭ್ಯರ್ಥಿಗಳು ಇ-ಮೇಲ್ ಮೂಲಕ ಅರ್ಜಿ (ಸ್ವವಿವರ) ಸಲ್ಲಿಸಬೇಕು. ಆಯ್ಕೆಯಾಗುವವರಿಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಕೆಲಸ ಮಾಡಲು ಅವಕಾಶ ನೀಡಲಾಗುವುದು.

EDII Recruitment 2023: EDII Start Recruitment Of 2 Post, Invite Application From Eligible

ಅರ್ಜಿ ಸಲ್ಲಿಕೆಗೂ ಮೊದಲು ಖಾಲಿ ಹುದ್ದೆಗಳ ಬಗೆಗಿನ ಪೂರ್ಣ ಮಾಹಿತಿ, ವೇತನ, ಆಯ್ಕೆ ಪ್ರಕ್ರಿಯೆ ಹೇಗೆ ಎಂಬಿತ್ಯಾದಿ ಮಾಹಿತಿ ಇಲ್ಲಿ ತಿಳಿಯಿತಿ.

ನೇಮಕಾತಿ ವಿವರ

ಹುದ್ದೆ ಹೆಸರು- ಹ್ಯೂಮನ್ ರಿಸೋರ್ಸ್​ ಎಕ್ಸಿಕ್ಯೂಟಿವ್

ಒಟ್ಟು ಹುದ್ದೆ - 2

ಉದ್ಯೋಗದ ಸ್ಥಳ- ಬೆಂಗಳೂರು

ಮಾಸಿಕ ವೇತನ - ರೂ. 25,000 ದಿಂದ 30,000 ರೂಪಾಯಿ.

ಅರ್ಜಿ ಸಲ್ಲಿಕೆ ಕೊನೆ ದಿನ - ಇದೇ ಆಗಸ್ಟ್ 7.

ಶೈಕ್ಷಣಿಕ ಅರ್ಹತೆ

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಲಿ ಇಲ್ಲವೇ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಹ್ಯೂಮನ್ ರಿಸೋರ್ಸಸ್ (HR), ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್ ವಿಭಾಗದಲ್ಲಿ ಪದವಿ ಮುಗಿಸಿರಬೇಕು ಎಂದು ಭಾರತೀಯ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆ ಅಧಿಸೂಚನೆ ಮಾಹಿತಿ ನೀಡಿದೆ.

EDII Recruitment 2023: EDII Start Recruitment Of 2 Post, Invite Application From Eligible

ವಯಸ್ಸಿನ ಮಿತಿ ಮತ್ತು ವೇತನ ವಿವರ

ಅಭ್ಯರ್ಥಿಗಳ ವಯಸ್ಸು ನಿಯಮಾನುಸಾರ ಇರಬೇಕು ಎಂದು ಹೇಳಲಾಗಿದೆ. ಅಭ್ಯರ್ಥಿಗಳ ಮೀಸಲಾತಿ ಅನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು. ಆಯ್ಕೆ ಆಗುವವರಿಗೆ ಮಾಸಿಕವಾಗಿ ರೂ. 25,000- 30,000 ರೂಪಾಯಿ ವೇತನ ನೀಡಲಾಗುವುದು. ಹೆಚ್ಚಿನ ಮಾಹಿತಿ ಅಧಿಸೂಚನೆ ಓದಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.

ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸಂಸ್ಥೆಯು ಮೊದಲು ಲಿಖಿತ ಪರೀಕ್ಷೆ ನಡೆಯಸಲಿದೆ ನಂತರ ಅಲ್ಲಿ ಆಯ್ಕೆಯಾಗುವವರಿಗೆ ಸಂದರ್ಶನ ನಡೆಸಲಿದೆ. ಅಲ್ಲಿ ಆಯ್ಕೆಯಾಗುವವರಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ಸಿಗಲಿದೆ.

ಅರ್ಜಿ ಸಲ್ಲಿಕೆ ವಿಧಾನ

ಆಸಕ್ತ ಅಭ್ಯರ್ಥಿಗಳು ಕೂಡಲೇ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿ ಸಹಿತ ಇ-ಮೇಲ್ ಐಡಿ [email protected] ಗೆ ಸೂಕ್ತ ದಿನಾಂಕದೊಳಗೆ ಕಳುಹಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+