DRDO ನೇಮಕಾತಿ 2020: 167 ವಿಜ್ಞಾನಿಗಳಿಗೆ ಹುದ್ದೆಗಳಿವೆ
ಬೆಂಗಳೂರು, ಮೇ 18: ಡಿಫೆನ್ಸ್ ರಿಸರ್ಚ್ ಅಂಡ್ ಡೆವಲ್ ಪೆಂಟ್ ಆರ್ಗನೈಜೇಷನ್(ಡಿಆರ್ ಡಿಒ) 2020ನೇ ಸಾಲಿನ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. 167 ವಿವಿಧ ಹುದ್ದೆಗಳ ಸಿಬ್ಬಂದಿ ಹುದ್ದೆಗೆ ಅರ್ಜಿ ಆಹ್ವಾನಿಸಿ, ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ಜುಲೈ 10 ರೊಳಗೆ ಅರ್ಜಿ ಸಲ್ಲಿಸಬಹುದು.
ಸಂಸ್ಥೆ ಹೆಸರು: Defence Research and Development Organisation
ಹುದ್ದೆ ಹೆಸರು: Scientist - B
ಒಟ್ಟು ಹುದ್ದೆ: 167
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 10-07-2020
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪದವಿ.
ವಯೋಮಿತಿ: ಆಗಸ್ಟ್ 2020ಕ್ಕೆ ಅನ್ವಯವಾಗುವಂತೆ 33ವರ್ಷ.
ಸಂಬಳ : 56,100 ರಿಂದ 80,000/ ರು ಪ್ರತಿ ತಿಂಗಳು.
ನೇಮಕಾತಿ ಪ್ರಕ್ರಿಯೆ: ಕಂಪ್ಯೂಟರ್ ಆಧಾರಿತ ಪರೀಕ್ಷೆ ಎರಡು ಸುತ್ತಿನ ಫಲಿತಾಂಶದ ಆಧಾರದ ಮೇಲೆ ಆಯ್ಕೆ.
ಅರ್ಜಿ ಶುಲ್ಕ:
ಎಸ್ ಸಿ/ ಎಸ್ಟಿ/ ಮಾಜಿ ಯೋಧ, ಮಹಿಳೆ:
ಯಾವುದೇ ಶುಲ್ಕವಿಲ್ಲ.
ಇತರೆ: 100 ರು.
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಆಯ್ಕೆ ದಿನಾಂಕ: 22-05-2020
ಅರ್ಜಿ ಸಲ್ಲಿಸಲು ಕೊನೆ ದಿನಾಂಕ:10-07-2020
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ