DRDO CABS Recruitment 2026: ಕರ್ನಾಟಕದಲ್ಲಿ ಭರ್ಜರಿ ಉದ್ಯೋಗಾವಕಾಶ, ಮಾಸಿಕ ಉತ್ತಮ- ವಿವರ
ಬೆಂಗಳೂರು: ಇಂಜಿನಿಯರಿಂಗ್ ಪದವೀಧರರು ಕರ್ನಾಟಕದಲ್ಲಿ ಒಂದು ಪ್ರತಿಷ್ಠಿತ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಲು ಇಚ್ಛಿಸಿದ್ದರೆ ನಿಮಗೆ ಇಲ್ಲಿದೆ ಸುವರ್ಣ ಅವಕಾಶ. ಭಾರತೀಯ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ಭಾಗವಾಗಿರುವ ಸೆಂಟರ್ ಫಾರ್ ಏರ್ ಬೋರ್ನ್ ಸಿಸ್ಟಮ್ಸ್ (CABS) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಆರಂಭಿಸಿದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ವಿವಿಧ ಹುದ್ದೆಗಳು ಖಾಲಿ ಇದ್ದು, ಯಾರೆಲ್ಲ ಸ್ಥಳೀಯವಾಗಿ ಉದ್ಯೋಗ ಪಡೆಯಬೇಕೆನ್ನು ಹಂಬಲ ಇದೆಯೋ ಅಂಥವರು ಈ ಕೂಡಲೇ ಅಗತ್ಯ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಬಹುದು. ಒಟ್ಟು 10 ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗಳು ಖಾಲಿ ಇವೆ. ಈ ನೇಮಕಾತಿ ವಯೋಮಿತಿ, ವಿದ್ಯಾರ್ಹತೆ, ಮಾಸಿಕ ವೇತನ, ಅರ್ಜಿ ಸಲ್ಲಿಕೆ ಕೊನೆ ದಿನ, ನೇರ ಸಂದರ್ಶನ ಮಾಹಿತಿ ಇಲ್ಲಿದೆ.

ನೇಮಕಾತಿ ಪೂರ್ಣ ವಿವರ
ನೇಮಕಾತಿ ಸಂಸ್ಥೆ: DRDO ಸೆಂಟರ್ ಫಾರ್ ಏರ್ ಬೋರ್ನ್ ಸಿಸ್ಟಮ್ಸ್ (CABS)
ಹುದ್ದೆ ಹೆಸರು: ಜ್ಯೂನಿಯ್ ರಿಸರ್ಚ್ ಫೆಲೋ ಹುದ್ದೆಗಳು
ಖಾಲಿ ಹುದ್ದೆಗಳು: 10
ಪೋಸ್ಟಿಂಗ್: ಕರ್ನಾಟಕ
ಅರ್ಜಿ ಸಲ್ಲಿಕೆ ಆರಂಭ: 2026 ಜನವರಿ 22
ವಾಕ್ ಇನ್ ಇಂಟರ್‌ವ್ಯೂವ್: 2026 ಜನವರಿ 25 ಮತ್ತು 26
ಶೈಕ್ಷಣಿಕ ಅರ್ಹತೆ
ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಭ್ಯರ್ಥಿಗಳು ಕಡ್ಡಾಯವಾಗಿ ಬಿಇ, ಬಿಟೆಕ್ ಅಥವಾ ಎಂಇ, ಎಂಟೆಕ್ ಪೂರ್ಣಗೊಳಿಸಿರಬೇಕು. ಅಂಥವರು ಅರ್ಜಿ ಸಲ್ಲಿಸಲು ಅರ್ಹರು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ವಯಸ್ಸಿನ ಮಿತಿ
ಅರ್ಜಿ ಸಲ್ಲಿಸುವವರಿಗೆ 2025 ಡಿಸೆಂಬರ್ 31ಕ್ಕೆ ಸರಿಯಾಗಿ ಗರಿಷ್ಠ 28 ವರ್ಷ ಮೀರಿರಬಾರದು. ಜಾತಿ ಮೀಸಲಾತಿಗೆ ಅನುಗುಣವಾಗಿ ಪರಿಶಿಷ್ಟ ಜಾರಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
ಆಯ್ಕೆ ವಿಧಾನ, ಮಾಸಿಕ ವೇತನ
ಅಧಿಸೂಚನೆಯಲ್ಲಿ ತಿಳಿಸಿರುವಂತೆ ವಾಕ್ ಇನ್ ಇಂಟರ್‌ವ್ಯೂವ್ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಆದವರಿಗೆ ಮಾಸಿಕ 37,000 ಮಾಸಿಕ ವೇತನ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ
ಅಭ್ಯರ್ಥಿಗಳು ಸೂಕ್ತ ದಾಖಲೆ ಸಹಿತ ಅರ್ಜಿಯನ್ನು ಡಿಆರ್‌ಡಿಓ ಅಧಿಕೃತ ವೆಬ್‌ಸೈಟ್ drdo.gov.in ಗೆ ಭೇಟಿ ನೀಡಿ. ಕೇಳಲಾದ ಮಾಹಿತಿ ನಮೂದಿಸಿ, ದಾಖಲೆ ಸ್ಕ್ಯಾನ್ ಮಾಡಿ ಅಪ್ಲೊಡ್ ಮಾಡಬೇಕು. ಅರ್ಜಿ ಸಮೂನೆ ಭರ್ತಿ ಮಾಡಬೇಕು. ಇಮೇಲ್ ಅನ್ನು [email protected] ಗೆ ಕೊನೆ ದಿನದೊಳಗೆ ಕಳಹಿಸಬೇಕು. ಹೆಚ್ಚಿನ ಮಾಹಿತಿಗೆ ಈ ಜಾಲತಾಣದಲ್ಲಿ ಅಧಿಸೂಚನೆ ಡೌನ್‌ಲೋಡ್ ಮಾಡಿಕೊಂಡು ಓದಿಕೊಳ್ಳಬಹುದು.












Click it and Unblock the Notifications