ದಕ್ಷಿಣ ಕನ್ನಡ ಸಹಕಾರ ಹಾಲು ಉತ್ಪಾದಕರ ಸಂಘದಲ್ಲಿ ನೇಮಕಾತಿ
ಬೆಂಗಳೂರು, ನವೆಂಬರ್ 17: ದಕ್ಷಿಣ ಕನ್ನಡ ಸಹಕಾರ ಹಾಲು ಉತ್ಪಾದಕರ ಸಂಘದ ಒಕ್ಕೂಟ ಲಿಮಿಟೆಡ್ ಮಂಗಳೂರಿನಲ್ಲಿ ಖಾಲಿ ಇರುವ ವಿವಿಧ ಒಟ್ಟು 21 ಹುದ್ದೆಗಳ ನೇಮಕಾತಿಗೆ ಆನ್ ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ತಾಂತ್ರಿಕ ಅಧಿಕಾರಿ (ಡಿಟಿ), ಡೈರಿ ಮೇಲ್ವಿಚಾರಕ ಗ್ರೇಡ್ -2, ಅಕೌಂಟ್ ಅಸಿಸ್ಟೆಂಟ್ ಗ್ರೇಡ್ -2, ಮಾರ್ಕೆಟಿಂಗ್ ಅಸಿಸ್ಟೆಂಟ್ ಗ್ರೇಡ್ -2, ಆಡಳಿತ ಸಹಾಯಕ ಗ್ರೇಡ್- II, ಜೂನಿಯರ್ ಸಿಸ್ಟಮ್ ಆಪರೇಟರ್ ಮತ್ತು ಕೆಮಿಸ್ಟ್ ಗ್ರೇಡ್-II ಹುದ್ದೆಗೆ ಅರ್ಹ ಅಭ್ಯರ್ಥಿಗಳು ದಿನಾಂಕ 06-12-2017ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ವಯೋಮಿತಿ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 35, ಹಿಂದುಳಿದ ವರ್ಗದ II-A, II-B, III-A, III-B ಅಭ್ಯರ್ಥಿಗಳಿಗೆ 38, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.
ಹುದ್ದೆ ಮತ್ತು ವಿದ್ಯಾರ್ಹತೆ
1. ತಾಂತ್ರಿಕ ಅಧಿಕಾರಿ (ಡಿ.ಟಿ.): 02 ಹುದ್ದೆಗೆ- ಬಿಎಸ್ಸಿ ಮತ್ತು ಬಿ.ಟೆಕ್ ಪೂರ್ಣಗೊಳಿಸರಬೇಕು.
2. ಡೈರಿ ಮೇಲ್ವಿಚಾರಕ ಗ್ರೇಡ್ -II: 01 ಹುದ್ದೆಗೆ- ಡಿಪ್ಲೋಮಾನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಇಂಜಿನಿಯರಿಗ್ ತೇರ್ಗಡೆಯಾಗಿರಬೇಕು.
3. ಖಾತೆ ಸಹಾಯಕ ಗ್ರೇಡ್ -II: 05 ಹುದ್ದೆ- ಬಿ.ಕಾಂ ಪದವಿ ಪಡೆದಿರಬೇಕು.
4. ಮಾರ್ಕೆಟಿಂಗ್ ಸಹಾಯಕ ಗ್ರೇಡ್ -II: 04- ಬಿಬಿಎ ಅಥವಾ ಬಿ.ಕಾಂ ಪೂರ್ಣಗೊಳಿಸಿರಬೇಕು.
5. ಆಡಳಿತಾತ್ಮಕ ಸಹಾಯಕ -II: 05- ಡಿಪ್ಲೋಮಾನಲ್ಲಿ ಕೋ ಅಪರೆಟಿವ್ ಬ್ಯುಸಿನೆಸ್ ಓದಿರಬೇಕು.
6. ಜೂನಿಯರ್ ಸಿಸ್ಟಮ್ ಆಪರೇಟರ್: 02- ಬಿಸಿಎ ತೇರ್ಗಡೆಯಾಗಿರಬೇಕು.
7. ಕೆಮಿಸ್ಟ್ ಗ್ರೇಡ್ II: 02- ಬಿಎಸ್ಸಿಯಲ್ಲಿ ಕೆಮಿಸ್ಟ್ರಿಯಲ್ಲಿ ಪದವಿ ಪೂರ್ಣೊಳಿಸರಬೇಕು.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂರ್ದಶನ.
ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸಲು ಡಿಸೆಂಬರ್ 6, 2017 ಕೊನೆ ದಿನ, ಅರ್ಜಿ ಶುಲ್ಕ ತುಂಬಲು ಡಿಸೆಂಬರ್ 7, 2017 ಕೊನೆ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.












Click it and Unblock the Notifications